ಮಂಗಳೂರು: ಅಭ್ಯರ್ಥಿಗಳಿಗೆ ಉಳಿಕೆಯಾಗಿರುವ ಸೀಟುಗಳ ಮಾಟ್ರಿಕ್ಸ್ 6ನೇ ಸುತ್ತಿಗೆ ಕಾಲೇಜುಗಳ ಆಯ್ಕೆಗಾಗಿ ಫೆಬ್ರವರಿ 23 ರ ವರೆಗೆ ಆಯ್ಕೆಯ ಪ್ರವೇಶಕ್ಕೆ (Option Entry) ಅವಕಾಶ ನೀಡಲಾಗಿದೆ. ಎಲ್ಲಾ ಅರ್ಹ ಅಭ್ಯರ್ಥಿಗಳು ಲಾಗಿನ್ ಆಗಿ 6ನೇ ಸುತ್ತಿನ ಸೀಟು ಹಂಚಿಕೆ ಬಯಸುವುದಾಗಿ ನಮೂದಿಸಬೇಕು. ಫೆಬ್ರವರಿ 25ರಂದು 6ನೇ ಸುತ್ತಿನ ಸೀಟು ಹಂಚಿಕೆ ಪ್ರಕಟಣೆ ಮಾಡಲಾಗುತ್ತದೆ. ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಚಲನ್ ಡೌನ್‍ಲೋಡ್ ಮಾಡಿಕೊಂಡು ನಿಗದಿತ ದಾಖಲಾತಿ ಶುಲ್ಕವನ್ನು ಮಾರ್ಚ್ 1 ರೊಳಗೆ ಎಸ್.ಬಿ.ಐ ಬ್ಯಾಂಕ್‍ನಲ್ಲಿ  ಪಾವತಿಸಿ, ತಾವು ಆಯ್ಕೆ ಮಾಡಿಕೊಂಡಿರುವ ವ್ಯವಸ್ಥಾಪಕ ಕೇಂದ್ರಗಳಲ್ಲಿ ಪ್ರವೇಶಾತಿ ಪತ್ರವನ್ನು ಪಡೆದು ಸಂಬಂಧಿಸಿದ ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಮಾರ್ಚ್ 6 ರ ವರೆಗೆ ಅವಕಾಶ ನೀಡಲಾಗುತ್ತದೆ. 

ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್‍ಸೈಟ್‍ www.schooleducation.karnataka.gov.in/ ಸಂಪರ್ಕಿಸುವಂತೆ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಪ್ರಾಂಶುಪಾಲರು ಹಾಗೂ ಸಹನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.