ಡಿಸೆಂಬರ್ 6ರ ಮಂಗಳವಾರ ಬೆಳಿಗ್ಗೆ ಜಲಾವರ್‌ನಲ್ಲಿ ಹೊರಟಿದ್ದ ಭಾರತ್ ಜೋಡೋ ಯಾತ್ರೆ ನೋಡಲು ಬಿಜೆಪಿ ಕಚೇರಿಯ ಮೇಲೆ ನಿಂತಿದ್ದ ಜನರತ್ತ ರಾಹುಲ್ ಗಾಂಧಿಯವರು ಫ್ಲೈಯಿಂಗ್ ಕಿಸ್ ಗಳನ್ನು ನೀಡಿದರು. ಭಾರತ್ ಜೋಡೋ ಯಾತ್ರೆಯವರು ಜಯ್ ಜಯ್ ರಾಮ್ ಎಂದು ಯಾಕೆ ಗ್ರೀಟ್ ಮಾಡಬಾರದು ಎಂದು ಆರೆಸ್ಸೆಸ್‌ನವರು ಕೇಳಿದ ಮರುದಿನವೇ ಈ ಘಟನೆ ನಡೆದಿದೆ. ಇದು ಆರೆಸ್ಸೆಸ್‌ಗೆ ಉತ್ತರವೂ ಆದೀತು.

ಯಾತ್ರೆ ಹೊರಟವರತ್ತ ಬಿಜೆಪಿಯ ಕೆಲವರು ಕೈ ಬೀಸಿದರೆ, ಕಾಂಗ್ರೆಸ್‌ನವರೂ ಅತ್ತ ಕೈ ಬೀಸಿದರು. ಬಿಜೆಪಿ ಕಚೇರಿಯಿಂದ ಕೆಲವರು ಮೋದಿ ಮೋದಿ ಎಂದರು ಅವರಿಗೆ ರಾಹುಲ್ ಗಾಂಧಿಯವರು ಸಾಲು ಹಾರು ಮುತ್ತುಗಳನ್ನು ನೀಡಿ ಮುನ್ನಡೆದರು. ಬೆಳಿಗ್ಗೆಯ ನಡಿಗೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ರಾಜ್ಯದ ಹಲವು ಮಂತ್ರಿಗಳು ಶಾಸಕರೆಲ್ಲ ಪಾಲ್ಗೊಂಡಿದ್ದರು.
ಈ ಹಾರು ಮುತ್ತು ವೀಡಿಯೋ ಒಂದು ಗಂಟೆಯಲ್ಲಿ 137ಕೆ ನೋಡುವಿಕೆ, 168 ಮರು ಮಿಂಚಂಚೆ, 400 ಲೈಕ್ ಕಂಡಿದೆ.