ಮಂಗಳೂರು: ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಲಯನ್ಸ್ ಮತ್ತು ಲಿಯೋ ಕ್ಲಬ್ ಕದ್ರಿಹಿಲ್ಸ್ ಮಂಗಳೂರು ಇವರ ಸಹಯೋಗದಲ್ಲಿ ಗಾಂಧೀಜಯಂತಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನದ ಕಾರ್ಯಕ್ರಮವು ಲಯನ್ಸ್ ಜಗದೀಶ್ ಶಣೈ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆಯ ಬಳಿಕ ಗಾಂಧೀ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿಯವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿ ಸಾಹಿತಿ, ಪತ್ರಕರ್ತರಾದ ರೇಮಂಡ್ ಡಿ.ಕುನ್ಹ “ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸತ್ಯ,ಪ್ರಾಮಾಣಿಕತೆ,ಅಹಿಂಸೆ ತತ್ವಗಳನ್ನು ಸಾಧಿಸಲು ಗಾಂಧೀಜಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿಯವರ ಜೀವನದ ಮೌಲ್ಯಗಳನ್ನು ಸತ್ಯಾನ್ವೇಷಣೆಯ ಮೂಲಕ ಅನುಸರಿಸಲು” ವಿದ್ಯಾರ್ಥಿಗಳಿಗೆ ತಿಳಿಸಿದರು.

ಶೈಕ್ಷಣಿಕ ಮಾರ್ಗದರ್ಶಿಣಿ ಲಲಿತಾ ಜಿ ಮಲ್ಯರವರು “ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆ ತತ್ವಗಳನ್ನು ಪಾಲಿಸಲು” ತಿಳಿಸಿದರು.ಶಾಲಾ ಸಂಚಾಲಕರಾದ ಶ್ರೀಯುತ ಸತೀಶ್ ಭಟ್‍ರವರು ಗಾಂಧೀಜಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿಯವg ಜೀವನದ ಮಹತ್ತರವಾದ ಘಟನೆಗಳ ಬಗ್ಗೆ ಮಾತನಾಡಿದರು.

ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಕದ್ರಿಹಿಲ್ಸ್ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪಧೆ ಏರ್ಪಡಿಸಿ, ವಿಜೇತರ ಪಟ್ಟಿಯನ್ನು ಪ್ರಶಾಂತ್ ಕುಮಾರ್ ರೈ (ಕನ್ನಡ ಅಧ್ಯಾಪಕರು) ವಾಚಿಸಿದರು.

ವಿದ್ಯಾರ್ಥಿಗಳಾದ ಸ್ವಪ್ನಾ, ಪ್ರಲೀನ್, ಡ್ಯಾನ್ ಡಿ.ಸೋಜ ಮತ್ತು ಆಯೀಷಾ ತುಲ್ ಆಫ್‍ಸೀನಾ ಇವರು ಸರ್ವಧರ್ಮ ಪ್ರಾರ್ಥನೆ ಹಾಡಿದರು ಮತ್ತು ವಿದ್ಯಾರ್ಥಿಗಳು ಶಾಂತಿ ಮಂತ್ರವನ್ನು ಪಠಿಸಿದರು.

ವೇದಿಕೆಗೆ ಲಯನ್ಸ್‍ನ ಸದಸ್ಯರಾದ ಲಯನ್  ಓ.ಖಿ. ರಾಜ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಹಿರಿಯ ಶಿಕ್ಷಕಿ ಶ್ರೀಮತಿ ಚಂದ್ರಿಕಾರವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಬೆಸೆಂಟ್ ಆಡಳಿತ ಮಂಡಳಿಯ ಕಾರ್ಯದರ್ಶಿÀಗಳಾದ ದೇವನಾಂದ ಪೈ, ಲಯನ್ಸ್ ಕಾರ್ಯದರ್ಶಿ ಸುಮಿತ್ರಾ ಶೆಟ್ಟಿ ಹಾಗೂ ಬೆಸೆಂಟ್ ಸಂಧ್ಯಾ ಕಾಲೇಜಿನ ಸಂಚಾಲಕರು ಗಣೇಶ್ ಭಟ್, ಆಂಗ್ಲಶಾಲೆಯ ಸಂಚಾಲಕರು ನಗರ್ ನಾರಾಯಣ್ ಶಣೈ ಉಪಸ್ಥಿತರಿದ್ದರು. ಶ್ರೀಮತಿ ರಾಜೇಶ್ವರಿ (ಸಂಗೀತ ಶಿಕ್ಷಕಿ) ವಂದನಾರ್ಪಣೆ ಗೈದು, ರ್ನೋರ್ಬಾಟ್ ಮಿರಾಂದ (ಗಣಿತ ಶಿಕ್ಷಕ) ಕಾರ್ಯಕ್ರಮ ನಿರೂಪಿಸಿದರು.

ಲಯನ್ಸ್ ಸದಸ್ಯರಾದ ರಮೇಶ್ ಪ್ರಭು ಹಾಗೂ ಪದಾಧಿಕಾರಿಗಳು ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ತ್ರಿವೇಣಿ, ಅಶೋಕ ಲಮಾಣಿ, ಗೀತಾ ಸಹಕರಿಸಿದರು.