ವಂಶಾಡಳಿತ ಆಡಳಿತದ ಕತಾರ್‌ನಲ್ಲಿ ಇದೇ ಮೊದಲ ಬಾರಿಗೆ ಮತದಾನ ನಡೆದಿದ್ದು, ಜನರು ಉತ್ಸಾಹದಿಂದ ಮತ ಚಲಾಯಿಸಿದರು. ರಾಜಧಾನಿ ದೋಹಾದಲ್ಲಿ ಹಬ್ಬದ ವಾತಾವರಣ ಕಂಡು ಬಂತು.

ಕತಾರ್ ಅರಸು ಶೇಖ್ ತಮೀಮ್‌ರಿಗೆ ಸಲಹೆ ಕೊಡಲು ಶುರಾ ಕೌನ್ಸಿಲ್ ಇದೆ. ಇದಕ್ಕೆ ಹಿಂದೆ ಸದಸ್ಯರನ್ನು ರಾಜ ಕುಟುಂಬದವರೇ ನೇಮಕ ಮಾಡುತ್ತಿದ್ದರು.

ಇದೇ ಮೊದಲ ಬಾರಿಗೆ 45 ಸದಸ್ಯರ ಶುರಾ ಪರಿಷತ್ತಿನ 30 ಸ್ಥಾನಗಳಿಗೆ ಚುನಾವಣೆ ನಡೆಯಿತು. 300 ಸದಸ್ಯರು ಸ್ಪರ್ಧೆಯಲ್ಲಿ ಇದ್ದಾರೆ.