ಮುಂಬಯಿ: ಕರ್ನಾಟಕ ಸರ್ಕಾರದ ಮಾಜಿ ಸಚಿವ ಬೇಗಾನೆ ರಾಮಯ್ಯ  (89 ) ಕಳೆದ ಗುರುವಾರ ವಯೋಸಹಜ ಅಸ್ವಸ್ಥತೆಯಿಂದ ನಿಧನರಾದರು.

ರಾಮಯ್ಯ ಅವರು 1978ರಲ್ಲಿ ಶೃಂಗೇರಿ ವಿಧಾನಸಭೆಯಿಂದ ಶಾಸಕರಾಗಿ ಆಯ್ಕೆಯಾಗಿ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಸರ್ಕಾರದಲ್ಲಿ ಸಚಿವರಾ ಗ್ರಾಮೀಣಾಭಿವೃದ್ಧಿ ಖಾತೆಯನ್ನು ನಿಭಾಯಿಸಿದ್ದರು. ಮಲೆನಾಡಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಕಷ್ಟು ಶ್ರಮಿಸಿದ್ದ ಅವರು ‘ಬೋರ್ವೆಲ್ ರಾಮಯ್ಯ’ಎಂದೇ ಪ್ರಸಿದ್ಧಿ ಪಡೆದಿದ್ದರು. ಅವರು ಪತ್ನಿ ಸೀತಾ ರಾಮಯ್ಯ ಮತ್ತು ಸುಪುತ್ರಿಯರಾದ ಅನಿವಾಸಿ ಭಾರತೀಯ ಸಮಿತಿ (ಎನ್‌ಆರ್‌ಐ ಫೋರಂ ಕರ್ನಾಟಕ) ಇದರ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣ ಮತ್ತು ಅಂಜನ್ ಅವರನ್ನು ಅಗಲಿದ್ದಾರೆ. 

ಮುಂಜಾನೆಯಿಂದ ಸಂಜೆ ಗಂಟೆಯ ವರೆಗೆ ಬೆಂಗಳೂರು ಬಳ್ಳಾರಿ ರಸ್ತೆಯಲ್ಲಿನ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಶುಕ್ರವಾರ ಸಾರ್ವಜನಿಕ ದರ್ಶನಕ್ಕೆ ಅವಕಾಶ ವ್ಯವಸ್ಥೆ ಕಲ್ಪಿಸಲಾಗಿದ್ದು ಬಳಿಕ ಸಂಜೆ ಮೃತರ ಸ್ವನಿವಾಸ ಆಗಿರುವ ಶಿವಮೊಗ್ಗ ಜಿಲ್ಲೆಯ ಹೊಸಹಳ್ಳಿ ಅಲ್ಲಿನ ಮಂಡಗದ್ದೆ ರಸ್ತೆಯಲ್ಲಿನ ಸೀತಾ ಫಾರಂ ಇಲ್ಲಿ ಅಂತ್ಯ ಸಂಸ್ಕಾರವು ನೆರವೇರಿಸಲಾಯಿತು ಎಂದು ಎಂದು ಕುಟುಂಬದವರು ತಿಳಿಸಿರುತ್ತಾರೆ ಎಂದು ಡಾ| ಆರತಿ ಕೃಷ್ಣ ತಿಳಿಸಿದ್ದಾರೆ. 

ಸೀತಾ ಫಾರಂಗೆ ಸ್ಪೀಕರ್ ಯು.ಟಿ.ಖಾದರ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಬೇಗಾನೆ ರಾಮಯ್ಯನವರ ಪತ್ನಿ ಸೇರಿದಂತೆ ಅವರ ಪುತ್ರಿ ಆರತಿ ಕೃಷ್ಣ ಮತ್ತು ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಅಂತೆಯೇ ಇಂಟರ್‌ನ್ಯಾಶನಲ್ ಫೆಡರೇಶನ್ ಆಫ್ ಕರ್ನಾಟಕ ಕ್ರಿಶ್ಚಿಯನ್ ಅಸೋಸಿಯೇಶನ್ಸ್ (ಐಕೆಕೆಸಿಎ) ಸ್ಥಾಪಕ ಅಧ್ಯಕ್ಷ  ಮತ್ತು ಎನ್‌ಆರ್‌ಐ ಉದ್ಯಮಿ ಡಾ| ರೊನಾಲ್ಡ್ ಕೊಲಾಸೊ ಸೇರಿದಂತೆ ದೇಶ ವಿದೇಶಗಳಲ್ಲಿನ ಅನೇಕ ಗಣ್ಯರು, ರಾಜಕಾರಣಿ, ಧುರೀಣರೂ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.