ಮಂಗಳೂರು: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ವಾಮಿ ವಿವೇಕಾನಂದರು ಒಂದು ಅಮರ ಪ್ರೇರಣೆ. 21ನೇ ಶತಮಾನದ ಯುವಕರಿಗೆ ಅವರು ನೀಡಿದ ಸಂದೇಶಗಳು ಇನ್ನಷ್ಟು ಪ್ರಸಕ್ತವಾಗಿದೆ. ಸ್ವಾಮಿ ವಿವೇಕಾನಂದರು ಯುವಕರನ್ನು ಶಕ್ತಿ, ಸೇವಾ ಮನೋಭಾವನೆ, ಹಾಗೂ ಆತ್ಮವಿಶ್ವಾಸ ಇವುಗಳನ್ನು ತಮ್ಮ ಜೀವನದ ಮೂಲ ಸಿದ್ಧಾಂತಗಳಾಗಿಸಿಕೊಳ್ಳಲು ಪ್ರೇರೇಪಿಸಿದರು. "ನಾನು ಭಾರತವನ್ನು ಯುವಕರ ಶಕ್ತಿಯ ಮೂಲಕವೇ ನೋಡುತ್ತೇನೆ" ಎಂಬ ಅವರ ಮಾತು ನಮ್ಮನ್ನೆಲ್ಲಾ ಚಿಂತನೆಗೆ ಒಡ್ಡುತ್ತದೆ.
ಯುವಕರಿಗೆ ಅವರು ಕೆಲವು ಪ್ರಮುಖ ಸಂದೇಶಗಳನ್ನು ನೀಡಿದರು: ಆತ್ಮವಿಶ್ವಾಸ – "ನೀವು ದುರ್ಬಲರೆಂದು ಅಂದುಕೊಳ್ಳಬೇಡಿ, ನೀವು ಅಮೋಘಶಕ್ತಿಯೆ!"ಉದ್ದೇಶಪೂರಿತ ಜೀವನ – "ಉದ್ದೇಶವಿಲ್ಲದೆ ಜೀವನ ಒಂದು ನಾಶವಾಗುವ ದೋಣಿಯಂತಿದೆ."ಶಿಕ್ಷಣದ ಮಹತ್ವ – "ವಿದ್ಯೆ ಕೇವಲ ಪುಸ್ತಕಗಳಲ್ಲ, ಅದೃಷ್ಟವನ್ನು ರೂಪಿಸುವ ಶಕ್ತಿ ಅದು."ಸೇವಾ ಮನೋಭಾವನೆ – "ಜೀವನದಲ್ಲಿ ಪರೋಪಕಾರವೇ ಮುಖ್ಯ, ಸೇವೆಯಲ್ಲೇ ಜೀವನದ ತತ್ವವಿದೆ."
ನಾವು 21ನೇ ಶತಮಾನದ ಯುವಕರು ಈ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಭಾರತ ಮತ್ತೊಂದು ಬಾರಿಯೂ ಜಗತ್ತಿಗೆ ಮಾರ್ಗದರ್ಶಕ ರಾಷ್ಟ್ರವಾಗಬಹುದು. "ಎದ್ದು, ಜಾಗ್ರತವಾಗಿರಿ, ಗುರಿ ಸಾಧಿಸುವವರೆಗೆ ನಿಲ್ಲಬೇಡಿ!" – ಈ ವಾಕ್ಯನಮ್ಮ ಜೀವನದ ದಾರಿ ಪ್ರಜ್ವಲಿಸಲಿ!
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೆರಡನೇಯ ಉಪನ್ಯಾಸದಲ್ಲಿ “21ನೇ ಶತಮಾನದ ಯುವ ಮನಸ್ಸುಗಳಿಗೆ ವಿವೇಕಾನಂದರ ಸಂದೇಶ” ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಈ ಕಾರ್ಯಕ್ರಮವು ಮಂಗಳೂರಿನಲ್ಲಿರುವ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಆದ ಡಾ. ಎಚ್. ಎನ್. ಆಂಜನೇಯಪ್ಪ, ಉಪನ್ಯಾಸಕರು ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕರಾದ ಮನೋಜ್ ಕುಮಾರ್ ಸಹಾಯಕ ಪ್ರಾಧ್ಯಾಪಕರುದೈಹಿಕ ಶಿಕ್ಷಣ ವಿಭಾಗ, ಮೀನುಗಾರಿಕಾ ಮಹಾವಿದ್ಯಾಲಯ, ಮಂಗಳೂರು ವಂದಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿದರು.