ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸರಕಾರಿ ಶಾಲೆಗೆ ಹೊಕ್ಕು ಬ್ಯಾಟರಿ ಮೊದಲಾದ 32,000 ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದ ನಾಲ್ವರನ್ನು ಪೋಲೀಸರು ಬಂಧಿಸಿದ್ದಾರೆ.
23ರ ರೋಹಿತ್ ಶೆಟ್ಟಿ, 30ರ ಯು. ಕೆ. ಯಜ್ಞೇಶ್, 29ರ ಎಂ. ತೀರ್ಥೇಶ್, 24ರ ಕಡಬ ಕುಟ್ರುಪ್ಪಾಡಿಯ ರಕ್ಷಿತ್ ಬಂಧಿತರು. ಬೆಳ್ತಂಗಡಿ ತಾಲೂಕಿನ ನಾನಾ ಕಡೆ ಕಳ್ಳತನ ನಡೆಸಿರುವ ಇವರು ಕೊನೆಗೆ ಸಾರ್ವಜನಿಕರ ಕೈಗೆ ಸಿಕ್ಕು ಪೋಲೀಸರ ಅತಿಥಿ ಆಗಿದ್ದಾರೆ.