ಅಮೆರಿಕ ಸಂಯುಕ್ತ ಸಂಸ್ಥಾನದ ಹಣಕಾಸು ಸಂಸ್ಥೆ ಮೋರ್ಗನ್ ಸ್ಟ್ಯಾನ್ಲಿ ಒಟ್ಟು 5% ಉದ್ಯೋಗಿಗಳನ್ನು ಕೈಬಿಡಲು ನಿರ್ಧರಿಸಿದ್ದು ಅದರಲ್ಲಿ ಈಗಾಗಲೇ 2% ಉದ್ಯೋಗ ಕಡಿತ ಮಾಡಿ ಮುಗಿಸಿದೆ.

ಹಣದುಬ್ಬರದ ಹೊಡೆತಕ್ಕೆ ಸಿಕ್ಕಿರುವ ಮೋರ್ಗನ್ ಸ್ಟ್ಯಾನ್ಲಿ ಈ ವರುಷಾರಂಭದಲ್ಲಿ ತನ್ನ 82,000 ಉದ್ಯೋಗಿಗಳಲ್ಲಿ 5% ಮಂದಿಯನ್ನು ಮನೆಗೆ ಕಳುಹಿಸಲು ತೀರ್ಮಾನ ತೆಗೆದುಕೊಂಡಿತು. ಅದರಂತೆ ಮೊದಲು 2% ಉದ್ಯೋಗ ಕಡಿತ ಮಾಡಿತು. ಈಗ 3,000 ಮಂದಿಗೆ ಬಿಡುಗಡೆ ನೋಟೀಸು ನೀಡಿದೆ. ಈ ವರ್ಷಾಂತ್ಯದೊಳಗೆ ಉದ್ಯೋಗಿಗಳ ಸಂಖ್ಯೆಯನ್ನು 62,000ಕ್ಕೆ ಇಳಿಸುವ ಆಲೋಚನೆ ಈ ಕಂಪೆನಿಯದು.