ಎನ್‌ಸಿಇಆರ್‌ಟಿ ಕೇಂದ್ರೀಯ ವಿದ್ಯಾಲಯಗಳ 12ನೇ ತರಗತಿಯ ರಾಜ್ಯ ಶಾಸ್ತ್ರದ ಪಠ್ಯ ಪುಸ್ತಕದಿಂದ ಬಿಕೆಯು- ಭಾರತೀಯ ಕಿಸಾನ್ ಯೂನಿಯನ್ ಹುಟ್ಟು ಮತ್ತು ಹೋರಾಟದ ಅಧ್ಯಾಯವನ್ನು ತೆಗೆದು ಹಾಕಲಾಗಿದೆ.
12ನೇ ತರಗತಿಯ ರಾಜ್ಯ ಶಾಸ್ತ್ರದ ರೈಸ್ ಆಫ್ ಪಾಪುಲರ್ ಮೂವ್ಮೆಂಟ್ಸ್‌ನಲ್ಲಿ ರೈತರ ಹೋರಾಟ ವಿವರಿಸಲಾಗಿದೆ. 1980ರಲ್ಲಿ ಬಿಕೆಯು ಹುಟ್ಟಿದ್ದು, 1988ರ ಅದರ ಶಿಸ್ತು ಬದ್ಧ ಹೋರಾಟಗಳೆಲ್ಲ ಈ ಅಧ್ಯಾಯದಲ್ಲಿ ಇದ್ದವು. ಕಳೆದ ವರುಷ ರೈತರ ಒಕ್ಕೂಟವು ಮೋದಿಯವರ ಸರಕಾರದ ಕೃಷಿ ಕಾಯಿದೆ ವಿರುದ್ಧ ವರುಷವಿಡೀ ಹೋರಾಟ ನಡೆಸಿತ್ತು. ಆ ರೈತ ವಿರೋಧಿ ಅಸಹನೆಯನ್ನು ರೈತರ ಹೋರಾಟದ ಅಧ್ಯಾಯ ತೆಗೆದುಹಾಕುವ ಮೂಲಕ ಕೇಂದ್ರ ತೋರಿಸಿದೆ ಎಂದು ಹೇಳಲಾಗುತ್ತಿದೆ.