ವಿಶ್ವವಿದ್ಯಾಲಯ ಕಾಲೇಜು ವೆನ್‌ಲಾಕ್ ಎದುರಿನ ಮಾಜೀ ಕುದುರೆ ಗಾಡಿ, ಹಾಲಿ ರಿಕ್ಷಾ ನಿಲುಗಡೆ ಈಚೆಗೆಲ್ಲ ಕಾಂಕ್ರೀಟ್ ಹಾಕುವಾಗ ಮುರಿದ ನಲ್ಲಿಗಳಿಗೆ ಹಾಕಿದ ತೇಪೆ ಕೂಡ ಗುಣಮಟ್ಟದ್ದಾಗಿಲ್ಲ ನೋಡಿ.


ಕಾಂಕ್ರೀಟ್ ಆದ ಮೇಲೆ ಇಲ್ಲಿ ಆಗಾಗ ರಸ್ತೆ ಬದಿಯಿಂದ ನೇತ್ರಾವತಿಯು ನಲ್ಲಿ ಜೈಲಿನಿಂದ ಹಾರಿ ಈಚೆ ಬರುತ್ರಾಳೆ. ಮುಂಜಾನೆಯಿಂದ ಆರಂಭವಾದ ಈ ನೀರು ಒಸರುವಿಕೆ ತಡೆಯಲು ಮತ್ತೊಂದು ತೇಪೆ ಬೇಕಾಗುತ್ತದೆ. ಇವತ್ತೇ ಮಾಡುತ್ತಾರೆ. ಆದರೆ ಎಷ್ಟು ಬಾಳುತ್ತದೆ ಎಂಬ ಬಗೆಗೆ ಅವರು ಉತ್ತರದಾಯಿ ಅಲ್ಲ.