ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸುಸಜ್ಜಿತ ದೇವಾಲಯದಿಂದ ಮಾತ್ರ ಭಕ್ತರ ಅಭೀಷ್ಠ ನೆರವೇರುತ್ತದೆ. ಭಗವತ್ ಆರಾಧನೆಯಿಂದ ಎಲ್ಲರಿಗೂ ಶುಭವಾಗುತ್ತದೆ. ಆದರೆ ಮಕ್ಕಳು ದೇವಸ್ಥಾನಕ್ಕೆ ಪ್ರತೀ ದಿನ ಬರುವುದರಿಂದ ಅವರ, ಮನೆಯ ಉನ್ನತಿಯಾಗುತ್ತದೆ ಎಂದು ಆಶೀರ್ವಚನದಲ್ಲಿ ಪೇಜಾವರ ಶ್ರೀ ಅವರು ನುಡಿದರು.
ಧರ್ಮಸ್ಥಳದ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ ಸೃಷ್ಟಿಕರ್ತ ಬ್ರಹ್ಮನಿಗೆ ದೇವಾಲಯವೇ ಇಲ್ಲದಂತೆ ಶಿವ ಶಾಪ ನೀಡಿದ್ದರು ಇಡೀ ಭಾರತದಲ್ಲಿ ಪುಷ್ಕರ ಬಿಟ್ಟರೆ ಇದು ಎರಡನೆಯ ದೇವಾಲಯವಾಗಿದೆ. ಒಮ್ಮೆ ಸೃಷ್ಟಿ ಯಾದುದು ನಾಶ ಆಗುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ನುಡಿದರು.
ಇದೇ ಸಂದರ್ಭದಲ್ಲಿ ದೇವಾಲಯದ ಮುರುಳಿಧರ ತಂತ್ರಿ, ವಾಸ್ತುತಜ್ಞ ಪ್ರಸಾದ್ ಮುನಿಯಂಗಳ, ಶಿಲ್ಪಿ ಪದ್ಮನಾಭ, ನಾಗೇಂದ್ರ ಆಚಾರ್ಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ಸುರೇಶ್ ಪ್ರಭು ಹಾಜರಿದ್ದರು. ವ್ಯವಸ್ಥಾಪನಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅನಂತ ಕೃಷ್ಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಗಣೇಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ವಂದಿಸಿದರು.