ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಸಾಯನ್, ಬಿ.ಎಸ್.ಕೆ. ಬಿ. ಎಸೋಸಿಯೇಶನ್ ನ ಶತಮಾನೋತ್ಸವದ ಅಂಗವಾಗಿ ಶ್ರೀ ಕೃಷ್ಣ ಮಂತ್ರ ಹೋಮವನ್ನು, ರವಿವಾರ ಮೇ 04 ರಂದು ವೇದಮೂರ್ತಿಗಳಾದ ದರೆಗುಡ್ಡೆ ಶ್ರೀನಿವಾಸ್ ಭಟ್, ಗಿರಿಧರ್ ಉಡುಪ ರವರ ಪ್ರಧಾನ ಪೌರೋಹಿತ್ಯದಲ್ಲಿ, ಹಾಗೂ ಸುಚೇತಾ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ನೆರವೇರಿಸಿತು. .
ಅಂತೆಯೇ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತ್ಯುತ್ಸವವನ್ನು, ಬಿ. ಎಸ್ ಕೆ.ಬಿ. ಎಸೋಸಿಯೇಶನ್ ಮತ್ತು ಶ್ರೀ ಸುಬ್ರಹ್ಮಣ್ಯ ಸೇವಾ ಸಂಘದ ಸಹಯೋಗದೊಂದಿಗೆ ರವಿವಾರ ಮೇ 04 ರಂದು ಸಂಭ್ರಮದಿಂದ ಆಚರಿಸಿತು.
ವೇದಮೂರ್ತಿಗಳಾದ ದುರ್ಗಾಪ್ರಸಾದ್ ಭಟ್ ಮತ್ತು ಸುಬ್ರಹ್ಮಣ್ಯ ಐತಾಳ್ ರವರ ಪ್ರಧಾನ ಪೌರೋಹಿತ್ಯದಲ್ಲಿ, ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಪಂಚಗವ್ಯ, ಗಣಹೋಮದೊಂದಿಗೆ ಪ್ರಾರಂಭವಾಗಿ, ಶ್ರೀ ರುದ್ರ ಹೋಮ, ರುದ್ರಾಭಿಷೇಕ, ಶ್ರೀ ಶಂಕರಾಚಾರ್ಯ ನಾಮಾರ್ಚನೆ, ಪೂಜೆ, ಅಷ್ಟಾವಧಾನ, ಧಾರ್ಮಿಕ ಪ್ರವಚನ ಮುಂತಾದ ವಿಧಿಗಳು, ರಘುಪತಿ ವೈಲಾಯ, ಯಶೋದಾ ವೈಲಾಯ ದಂಪತಿ, ಉದಯಶಂಕರ್ ರಾವ್, ಅಂಜನಾ ರಾವ್ ದಂಪತಿ, ವೆಂಕಟ್ರಾಜ್, ಅರುಣ್ ದಂಪತಿ, ಮತ್ತು ಸುಕುಮಾರ್ ರಾವ್, ಮಲ್ಲಿಕಾ ರಾವ್ ದಂಪತಿಯವರ ಯಜಮಾನತ್ವದಲ್ಲಿ, ಸುಬ್ರಹ್ಮಣ್ಯ ಸೇವಾ ಸಂಘದ ಪದಾಧಿಕಾರಿಗಳಾದ ಸುಭಾಶ್ಚಂದ್ರ ರಾವ್, ಪಿ.ಉಮೇಶ್ ರಾವ್, ಶಿವರಾಯ ರಾವ್, ಕೆ.ಉಮೇಶ್ ರಾವ್, ಮತ್ತು ಕಾರ್ಯಕಾರಿ ಸಮಿತಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಅಧ್ಯಕ್ಷರು ಡಾ. ಸುರೇಶ್ ಎಸ್ ರಾವ್ ಮತ್ತು ಕಾರ್ಯಕಾರಿ ಸಮಿತಿ ನೇತೃತ್ವದಲ್ಲಿ ವಿಧಿವತ್ತಾಗಿ ನೆರವೇರಿತು. ಪುರೋಹಿತ ವರ್ಗದವರ ನೇತೃತ್ವದಲ್ಲಿ ಜರಗಿದ ಅಷ್ಟಾವಧಾನ ಸೇವೆಯಲ್ಲಿ ಮೋಹಿತಾ ರಾವ್ ಅವರಿಂದ ಸಂಗೀತ ಸೇವೆ ಹಾಗೂ ವೈಷ್ಣವಿ ರಾವ್ ಅವರಿಂದ ನೃತ್ಯ ಸೇವೆ ಜರಗಿತು. ಗೋಕುಲ ಭಜನಾ ಮಂಡಳಿಯಿಂದ ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರ ಪಠನೆ ಮತ್ತು ಭಜನಾ ಸೇವೆ ನೆರವೇರಿತು.
ಹೋಮಗಳ ಪೂರ್ಣಾಹುತಿ, ಮಂಗಳಾರತಿಯ ನಂತರ, ತೀರ್ಥ ಪ್ರಸಾದ ವಿತರಣೆ, ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು,