ಗುಲಾಬ್ ಚಂಡಮಾರುತವು 100 ಕಿಲೋ ಮೀಟರ್ ವೇಗದ ಗಾಳಿಯೊಡನೆ ಮಳೆ ಗುದ್ದಿನೊಡನೆ ದೇಶದ ಪೂರ್ವ ಕರಾವಳಿಗೆ ಅಪ್ಪಳಿಸಿದ್ದರಿಂದ ಜನಜೀವನ ಒದ್ದೆಮುದ್ದೆ ಆಯಿತು.

ಒಡಿಶಾದ ಗಂಜಾಂ ಜಿಲ್ಲೆ ಹೆಚ್ಚು ಹಾನಿ ಕಂಡಿದೆ. ಅಲ್ಲಿ 16,000 ಜನರನ್ನು ಸ್ಥಳಾಂತರ ಮಾಡಲಾಯಿತು. ಕೆಲವು ರೈಲು ರದ್ದುಗೊಳಿಸಿ, ಕೆಲವನ್ನು ಮಾರ್ಗ ಬದಲಿಸಿ ಕಳುಹಿಸಲಾಯಿತು. ನೌಕಾ ಪಡೆ, ರಾಜ್ಯ ಮತ್ತು ರಾಷ್ಟ್ರೀಯ ನಿರ್ವಹಣಾ ದಳಗಳವರು ಪರಿಹಾರ ವ್ಯವಸ್ಥೆಯಲ್ಲಿ ತೊಡಗಿಕೊಂಡಿದ್ದಾರೆ.

ಆಂಧ್ರದ ಶ್ರೀಕಾಕುಳಂ ಜಿಲ್ಲೆ ಗುಲಾಬ್‌ನಿಂದ ಹೆಚ್ಚು ಹಾನಿಗೊಳಗಾಗಿದೆ. ಬಂಗಾಳ ಕೊಲ್ಲಿಯಲ್ಲಿ ಮೀನುಗಾರಿಕೆ ನಡೆಸಿದ್ದ ಮೂವರು ಮೃತರಾದರೆ, ಒಬ್ಬರು ನಾಪತ್ತೆಯಾಗಿದ್ದಾರೆ. 1,100 ಜನರನ್ನು ಸ್ಥಳಾಂತರ ಮಾಡಲಾಗಿದೆ. ಪರಿಹಾರ ಶಿಬಿರಗಳಲ್ಲಿ 100ಕ್ಕೂ ಹೆಚ್ಚು ಜನ ಇದ್ದಾರೆ.

ಗುಲಾಬ್ ಕಾರಣ ಪಡುವಣ ಬಂಗಾಳದ ಹಲವು ಕಡೆ ಮಳೆಯಾಗುತ್ತಿದೆ. ನ್ಯೂಟೌನ್ ರಸ್ತೆಗಳಲ್ಲಿ ನೀರು ನಿಂತಿದ್ದು, ಜನರು ರಸ್ತೆಯಲ್ಲಿ ಮೀನು ಹಿಡಿದು, ತಾತ್ಕಾಲಿಕ ಹೊಟ್ಟೆಯ ಸಮಸ್ಯೆ ಪರಿಹರಿಸಿಕೊಂಡರು.