ಮಂಗಳೂರು: ಸೆ. 26, 2021ರಂದು ರವಿವಾರ ಬೆಳಿಗ್ಗೆ ಗಂಟೆ 11.30 ರಿಂದ ಬಜಗೋಳಿ ಸುಮ್ಮ ಬಂಡ ಶಾಲೆ ಧರ್ಮ ಶಾಲೆ ಯಲ್ಲಿ ಸಾಮೂಹಿಕ ಕ್ಷಮಾವಳಿ ಹಾಗೂ ಧವಲತ್ರಯ ಜೈನ ಕಾಶಿ ಟ್ರಸ್ಟ್ (ರಿ ) ವತಿಯಿಂದ ಉಡುಪಿ ಜಿಲ್ಲೆ ಬಸದಿ ಅರ್ಚಕರಿಗೆ ಉಚಿತ ಆಹಾರ ಕಿಟ್ ವಿತರಣೆ ಕಾರ್ಯಕ್ರಮವು ಧರ್ಮಶಾಲೆ "ಸುಮ್ಮಗುತ್ತು ಶಂಕರ ಹೆಗ್ಡೆ" ಸಭಾ ಭವನದಲ್ಲಿ, ಜೈನ್ ಮಿಲನ್ ಬಜಗೋಳಿ ಇದರ ಆಶ್ರಯದಲ್ಲಿ ನೆರವೇರಿತು ಧಾರ್ಮಿಕ ಸಭೆ ಯಲ್ಲಿ ಪ.ಪೂ. ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಶ್ರೀ ಜೈನ ಮಠ , ಮೂಡುಬಿದಿರೆ.
ಇವರು ಆಶೀರ್ವಾದ ನೀಡಿ ಸಮವಸರಣ ಪ್ರತೀಕ ವಾದ ಜೈನ ಬಸದಿ ಶ್ರಾವಕ ಶ್ರಾವಿಕೆ ಯರು ಧರ್ಮ ಅನುಷ್ಠಾನ ನಡೆ ಸುವ ಸಂಸ್ಕಾರ ಕೇಂದ್ರ ಅರ್ಚಕರು ಬಸದಿ ಪೂಜಾ ಸೇವೆ ಸಲ್ಲಿಸಿ ಶ್ರಾವಕ ರೊಂದಿಗೆ ಧರ್ಮ ಪ್ರಭಾವನೆ ಗೆ ಸಹಕರಿಸಿ ಉತ್ತಮ ಕಾರ್ಯ ನಡೆಸುತ್ತಿದ್ದಾರೆ ಎಂದು ನುಡಿದು ಉಡುಪಿ ಜಿಲ್ಲೆಯ ಸುಮಾರು 40 ಬಸದಿ ಯ ಅರ್ಚಕರಿಗೆಬಜಗೋಳಿ ಧರ್ಮ ಶಾಲೆ ವತಿಯಿಂದ ಉಚಿತ ಆಹಾರ ಪೊಟ್ಟಣ ದಕ್ಷಿಣೆ ನೀಡಿ ಹರಸಿ ಆಶೀರ್ವದಿಸಿದರು.
ಸರ್ವರಿಗೂ ಪರಸ್ಪರ ಉತ್ತಮ ಕ್ಷಮೆ ಯಾಚನೆ ಮಾಡುದರಿಂದ ಮನಸು ಶಾಂತ ವಾಗುದು ಜೀವನದಲ್ಲಿ ಧಾರ್ಮಿಕರು ನಿರ್ದೋಷ ಆಚರಣೆ ಯಿಂದ ಉತ್ತಮ ವ್ಯೆಕ್ತಿ ಗಳಾಗಿ ಮಹಾ ತ್ಮ ರಾಗಿ ಪರಮಾತ್ಮರಾಗಬಹುದು ಎಂದು ನುಡಿದರು.
ಅಂಡಾರು ಮಹಾವೀರ ಹೆಗ್ಡೆ ಉಚಿತ ಆಹಾರ ಕಿಟ್ ವಿತರಣೆ ಉತ್ತಮ ಕಾರ್ಯ ಎಂದರು. ಶ್ರೀ ರವಿ ರಾಜ್ ಚೌಟ ಬಜಗೋಳಿ 40 ವರ್ಷ ದಿಂದ ಜೈನ ಭಜನೆ ಸಂಘಟನೆ ಮಾಡುತ್ತಿದ್ದು ಉತ್ತಮ ಜೈನ ಗೀತೆ ರಚನೆ ಮಾಡುತ್ತಿದ್ದು ಸ್ವಾಮೀಜಿ ಯವರು ಧರ್ಮ ಶಾಲೆ ವತಿಯಿಂದ ಶಾಲು ಶ್ರೀ ಫಲ ನೀಡಿ ಸನ್ಮಾನ ಮಾಡಿ ಹರಸಿ ಆಶೀರ್ವದಿಸಿದರು.
ಕ್ಷಮಾವಳಿಯ ವಿಶೇಷ ಉಪನ್ಯಾಸ ನೀಡಿದ ವೀರ್ ಮುನಿರಾಜ ರೆಂಜಾಳ ನಮ್ಮ ಜೀವನ ದಲ್ಲಿ ಧರ್ಮ ಸಾಧನೆ ಗೆ ತೊಡಕು ಉಂಟು ಮಾಡುವ ಕೆಟ್ಟ ಭಾವನೆ ಬಿಟ್ಟು ಉತ್ತಮ ಕ್ಷಮೆ ಯನ್ನು ಯಾಚನೆ ಮಾಡಿದಾಗ ಮನಸ್ಸು ಹಗುರ ವಾಗಿ ಶಾಂತಿ ಪಡೆಯಲು ಸಹಾಯಕ ಎಂದರು.
ಈ ಕಾರ್ಯಕ್ರಮದಲ್ಲಿ ಭಜಗೋಳಿ ಮಹಾವೀರ್ ಜೈನ್, ಹಾಲಕ್ಕಿ ನಾಭಿರಾಜ್ ಪ್ರದಾನ ಅತಿಥಿ ಗಳಾಗಿ ಭಾಗವಹಿಸಿ ದ್ದ ರು ಬಜಗೋಳಿ ಮಿಲನ್ ಅಧ್ಯಕ್ಷ ಭರತ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಾರ್ಥನೆ ಯನ್ನು ಕುಮಾರಿ ಶರಧಿ ಜೈನ್ ಮತ್ತು ಬಳಗ.ದವರು ಹಾಡಿದರು.
ಜೈನ್ ಮಿಲನ್ ಮತ್ತು ಯುವ ಜೈನ್ ಮಿಲನ್ ಬಜಗೋಳಿ.ಸದಸ್ಯರು ಉಡುಪಿ ಜಿಲ್ಲೆ ಯ ಬಸದಿ ಅರ್ಚಕರು ಧರ್ಮ ಶಾಲೆ ಟ್ರಸ್ಟ್ (ರಿ ) ಬಜಗೋಳಿ ಯ ಟ್ರಸ್ಟೀ ವೀರ್ ವೀರಂಜಯ ಜೈನ್, ನಿರ್ವಾಣ ಇಂದ್ರ, ಉಷಾ ಕುಮಾರ್, ವಕೀಲ್ ಪದ್ಮ ಪ್ರಸಾದ್ ನಲ್ಲೂರು ಉಪಸ್ಥಿತರಿದ್ದರು. ಶ್ರೀ ವರ್ಧ ಮಾನ ಇಂದ್ರ ಶಾಂತಿ ಮಂತ್ರ ಪಠಿಸಿದರು.