ಮಂಗಳೂರು: ಹೈಕೋರ್ಟ್ ಪೀಠ ಹೋರಾಟ ಸಮಿತಿ ಇದರ ಸಭೆಯು ಅಕ್ಟೋಬರ್ 14 ರಂದು ಎಸ್. ಡಿ. ಎಮ್. ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಹೈಕೋರ್ಟ್ ಪೀಠ ರಚನೆ ಹೋರಾಟದ ಕಾನೂನು ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನ್ಯಾಯವಾದಿಗಳಾದ ಎಂ. ಪಿ ನೊರೊನ್ಹಾರವರು ವಿವರಿಸಿದರು.
ಸಭೆಯ ಮುಖ್ಯ ಅಂಶಗಳು
1. ಎಲ್ಲಾ ಸಾರ್ವಜನಿಕ ವಲಯದ ಜನತೆಯ ಪ್ರತಿನಿಧಿ ಗಳನ್ನು ಒಳಗೊಂಡ ನಿಯೋಗ ರಾಜ್ಯದ ಮುಖ್ಯಮಂತ್ರಿ ಕಾನೂನು ಸಚಿವರುರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಪೀಠ ಸ್ಥಾಪನೆಗೆ ಒತ್ತಾಯಿಸುವುದು.
2. ಸಾಧ್ಯವಾದರೆ ಮಂಗಳೂರು ನಗರದ ಒಳಗೆ ಅಥವಾ ಮಂಗಳೂರು ಉಡುಪಿ ಮದ್ಯದಲ್ಲಿ ಜಾಗ ನಿಗದಿ ಪಡಿಸಲು ಪ್ರಯತ್ನ ಮಾಡುವುದು. ಮಂಗಳೂರನಲ್ಲಿ ಸಾರ್ಕಿಟ್ ಹೌಸ್ ಹತ್ತರದಲ್ಲಿ ಇರುವ ಸುಮಾರು 8 ಜಾಗವನ್ನು ಹೈಕೋರ್ಟ್ ಪೀಠಕ್ಕೆ ಮೀಸಲು ಇಡಲು ಮಾನ್ಯ ಪ್ರವಾಸೋದ್ಯ ಸಚಿವರಿಗೆ ಮನವಿ ಮಾಡುವುದು.
3. ಹೋರಾಟದ ಭಾಗವಾಗಿ ಜನಭಿಪ್ರಾಯ ಮೂಡಿಸಲು ಮುಲ್ಕಿಯಿಂದ ಮಂಗಳೂರಿಗೆ ಪಾದಯಾತ್ರೆ ನಡೆಸುವುದು.
4. ಪೀಠ ಸ್ಥಾಪನೆಗೆ ಅಗ್ರಹಿಸಿ ಮಂಗಳೂರು ಬಂದ್ ಗೆ ಕರೆ ನೀಡುವುದು.
5. ಮುಂಬರುವ ರಾಜ್ಯ ಬಜೆಟ್ ನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ 25 ಕೋಟಿ ಅನುದಾನ ಒದಗಿಸುವಂತೆ ಸರ್ಕಾರವನ್ನು ಅಗ್ರಹಿಸುವುದು.
6. ರಾಜಕೀಯ, ಸಾಮಾಜಿಕ, ಧಾರ್ಮಿಕ, ಮತ್ತು ಇತರ ಎಲ್ಲಾ ವಲಯದ ಪ್ರಭಾವಿ ವ್ಯಕ್ತಿಗಳ ಬೆಂಬಲ ಒಡೆದು ಕೊಳ್ಳುವುದು.
7. ಆರು ಜಿಲ್ಲೆಯ ಪ್ರಮುಖರನ್ನು ಮುಖತಾ ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಕೇಳುವುದು.
8. ಆರು ಜಿಲ್ಲೆಯ ಪ್ರಮುಖ, ಪ್ರಭಾವಿ ವ್ಯಕಿಗಳನ್ನು ಒಳಗೊಂಡ ಶಾಶ್ವತ ಹೈಕೋರ್ಟ್ ಹೋರಾಟ ಸಮಿತಿ ರಚಿಸುವುದು.
9. ಆರು ಜಿಲ್ಲೆಯ ಎಲ್ಲಾ ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳನ್ನು ಸಭೆ ನಡೆಸಿ ಹೋರಾಟದಲ್ಲಿ ಭಾಗವಹಿಸುವಂತೆ ಸಭೆಗಳನ್ನು ಮಾಡುವುದು.
8. ಹೈಕೋರ್ಟ್ ಸಂಚಾರಿ ಪೀಠಕ್ಕೆ ಒತಾಯ ಮಾಡುವುದು.
9. ಕಲಬರ್ಗಿ ಮತ್ತು ಧಾರಾವಾಡ ಪೀಠಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ತಯಾರಿ.
10. ವೀರಪ್ಪ ಮೊಯಿಲಿ ಸೇರಿ ಅನೇಕ ಪ್ರಭಾವಿ ವ್ಯಕಿಗಳನ್ನು ಭೇಟಿ ಮಾಡಿ ಬೆಂಬಲ ಕೇಳುವುದು.
11. ಈ ಕುರಿತು ರಾಜ್ಯ ಪ್ರವಾಸಕ್ಕೆ ತಂಡ ರಚನೆ.
12. ಕಾನೂನು ಹೋರಾಟಕ್ಕೆ, ಸಾರ್ವಜನಿಕರ ಭೇಟಿ, ವಕೀಲರು ಸಂಘದ ಭೇಟಿ, ಪ್ರಚಾರ ಮತ್ತು ಮಾಧ್ಯಮ ಸಮಿತಿ ಹೀಗೆ ಅಗತ್ಯಕ್ಕೆ ತಕ್ಕುದಾಗಿ ಸಮಿತಿ ರಚನೆ ಮಾಡುವುದು.
13. ಪ್ರತಿ ತಾಲ್ಲೂಕಿನಲ್ಲಿ ಹಾಕ್ಕೋತ್ತಾಯ ಸಭೆ /ಕಾರ್ಯಕ್ರಮ ಆಯೋಜನೆ ಮಾಡುವುದು.
14. ಹೋರಾಟದ ಪರವಾಗಿ ಇರುವ ಎಲ್ಲಾ ಉಚ್ಚ ನ್ಯಾಯಾಲಯಗಳ ಅದೇಶಗಳಿಗೆ ಅನುಗುಣವಾಗಿ ಹೋರಾಟದ ರೂಪುರೆಷೆ ರಚನೆ.
14. ಬೆಂಬಲ ಕೋರಿ ಸಹಿ ಸಂಗ್ರಹ ಅಭಿಯಾನ ನಡೆಸುವುದು.
15. ವಿವಿಧ ಸಂಘಟನೆಗಳನ್ನು ಹೋರಾಟದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವುದು.
16. ದ. ಕ ಜಿಲ್ಲೆಯ ಎಲ್ಲಾ ವಕೀಲರು ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಜೊತೆ ಕಾರ್ಯಧರ್ಶಿ, ಉಪಾಧ್ಯಕ್ಷರು, ಖಜಾಂಜಿ ಸೇರಿ ಕೋರ್ ಕಮಿಟಿ ರಚಿಸಲಾಯಿತು ಮತ್ತು ಈ ಕಮಿಟಿಯ whats app group ಮಾಡುವುದು.
ಸಭೆಯಲ್ಲಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಸಂಚಾಲಕರು ಐವನ್ ಡಿ ಸೋಜಾ, ಹೈಕೋರ್ಟ್ ಪೀಠ ಸಮಿತಿ ಅಧ್ಯಕ್ಷರು ಮತ್ತು ಮಂಗಳೂರು ವಕೀಲರ ಸಂಘದ ಅಧ್ಯಕ್ಷರು ಹೆ. ವಿ ರಾಘವೇಂದ್ರ, ಎಸ್. ಡಿ. ಎಂ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ಮಹೇಶ್ಚಂದ್ರ, ಹಿರಿಯ ವಕೀಲರಾದ ಟಿ. ಏನ್ ಪೂಜಾರಿ, ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರುಗಳಾದ ಎಂ. ಆರ್ ಬಲ್ಲಾಳ್, ಪ್ರಥ್ವಿ ರಾಜ್ ರೈ, ಮಾಜಿ ಕಾರ್ಯಧರ್ಶಿ ಶ್ರೀಧರ್ ಯೆನ್ಮಾಕಜೆ ಪುತ್ತೂರು ವಕೀಲರ ಸಂಘದ ಅಧ್ಯಕ್ಷರು ಕಾರ್ಯದರ್ಶಿ ಚಿನ್ಮಯ್ ರೈ, ಬಂಟ್ವಾಳ ವಕೀಲರ ಸಂಘ ದ ಅಧ್ಯಕ್ಷರು ರಿಚ್ಚಾರ್ಡ್ ಕ್ರಾಸ್ತ, ಕಾರ್ಯಧರ್ಶಿ ಮೂಡಬಿದ್ರೆ ವಕೀಲರು ಸಂಘ ದ ಉಪಾಧ್ಯಕ್ಷರು ಕಾರ್ಯಧರ್ಶಿ ಜಯಪ್ರಕಾಶ್ ಮತ್ತು ಇತರ ಹಿರಿಯ ನ್ಯಾಯವಾದಿಗಳು ಭಾಗವಹಿಸಿ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ನೀಡಿದರು.