ಗುಜರಾತಿನ ಜಾಮ್‌ನಗರದಲ್ಲಿ ಹಿಂದೂ ಮಹಾಸಭಾದವರು ತಯಾರಿಸಿದ್ದ ನಾಥೂರಾಮ ಗೋಡ್ಸೆಯ ಮೂರ್ತಿಯನ್ನು ಜಾಮ್‌ನಗರದ ಕಾಂಗ್ರೆಸ್ ಅಧ್ಯಕ್ಷ ದಿಗುಬಾ ಜಡೇಜಾ ಮತ್ತು ಬೆಂಬಲಿಗರು ಮಂಗಳವಾರ ಪುಡಿಗಟ್ಟಿದ್ದಾರೆ.

ಸ್ಥಳೀಯ ಆಡಳಿತವು ಗೋಡ್ಸೆ ಮೂರ್ತಿ ನಿಲ್ಲಿಸಲು ಜಾಗ ನೀಡಲು ನಿರಾಕರಿಸಿತ್ತು. ಹಿಂದೂ ಮಹಾಸಭಾದವರು ಬಲಾತ್ಕಾರದಿಂದ ಮೂರ್ತಿ ತಯಾರಿಸಿ ಇಟ್ಟಿದ್ದರು. ಕಾಂಗ್ರೆಸ್ ಕಾರ್ಯಕರ್ತರೊಡನೆ ಹೋದ ಜಡೇಜಾ ಅದನ್ನು ಪುಡಿ ಮಾಡಿ ಅಲ್ಲಿ ದೇಶದ ಬಾವುಟ ಹಾರಿಸಿದರೆಂದು ತಿಳಿದು ಬಂದಿದೆ.