ಭಾರತದಲ್ಲಿ 2020ರಲ್ಲಿ ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣವು  400 ಶೇಕಡಾ ಹೆಚ್ಚಾಗಿರುವುದಾಗಿ ಎನ್‌ಸಿಆರ್‌ಬಿ- ರಾಷ್ಟ್ರೀಯ ಅಪರಾಧಿಗಳ ದಾಖಲೆ ದಳ ಹೇಳಿದೆ.

ಮಕ್ಕಳ ಮೇಲಿನ‌ ಸೈಬರ್ ಅಪರಾಧದ 842 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 738 ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗಿಸಿ, ಫೋಟೋ ವೀಡಿಯೋ ಜಾಲತಾಣಕ್ಕೆ ಏರಿಸಿರುವುದು, ಬ್ಲಾಕ್ ಮೆಯಿಲ್ ಮಾಡಿರುವುದಾಗಿದೆ.

ಉತ್ತರ ಪ್ರದೇಶ 170, ಕರ್ನಾಟಕ 144, ಮಹಾರಾಷ್ಟ್ರ 137, ಕೇರಳ 107 ಈ ಅಕ್ರಮದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಾಗಿವೆ.