ಯಾವುದೇ ದೇಶದ ಸರಕಾರವು ಹಸಿವಿನ ಸಾವನ್ನು ತಡೆಯಲಾಗದಿದ್ದರೆ ಅದು ಅರ್ಥಹೀನ, ಮೂರು ವಾರದೊಳಗೆ ದೇಶದಲ್ಲಿ ಎಲ್ಲೂ ಹಸಿವಿನ ಸಾವು ಆಗದಂತೆ ಸಾಮುದಾಯಿಕ ಪಾಕಶಾಲೆಯ ಬಗೆಗೆ ನೀತಿ ರೂಪಿಸಿ ತಿಳಿಸುವಂತೆ ಸುಪ್ರೀಂ ಕೋರ್ಟ್ ಒಕ್ಕೂಟ ಸರಕಾರಕ್ಕೆ ಆದೇಶಿಸಿತು.

ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರಿದ್ದ ನ್ಯಾಯ ಪೀಠವು ಗ್ರಾಹಕ ವ್ಯವಹಾರ ಮತ್ತು ಆಹಾರ ಇಲಾಖೆ ಸಚಿವಾಲಯಗಳ ಸಮಜಾಯಿಸಿ ಪತ್ರವನ್ನು ತಳ್ಳಿ ಹಾಕಿತು. ಕೆಲವು ರಾಜ್ಯಗಳಲ್ಲಿ ಈಗಾಗಲೇ ಇರುವ ಇಂಥ ಕಾರ್ಯಕ್ರಮಗಳನ್ನು ಗಮನಿಸಿ ನಿಮ್ಮ ನೀತಿ ರೂಪಿಸಿ, ನಮ್ಮ ಮುಂದಿಡಿ ಎಂದು ಸುಪ್ರೀಂ ಕೋರ್ಟ್ ಸರಕಾರಕ್ಕೆ ಕಟ್ಟಳೆ ಇಟ್ಟಿತು.