ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಡೆಸಿದ ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪುನೀತ್‌ರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡುವುದಾಗಿ ಘೋಷಿಸಿದರು.

ಚಾರಿತ್ರ್ಯವಂತನಾಗಿ ಚರಿತ್ರೆಗೆ ಸೇರಿದವರು ಪುನೀತ್. ಅವರ ತಂದೆ ತಾಯಿಯ ಎಲ್ಲ ಸಮಾಜಮುಖಿ ಗುಣ ಪುನೀತ್ ರಾಜ್‍ಕುಮಾರ್ ಅವರಲ್ಲಿತ್ತು. ಅದು ಅಪರೂಪ.

ಪುನೀತ್ ನಮನ ಕಾರ್ಯಕ್ರಮದಲ್ಲಿ ಮಾಜೀ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಹಲವು ಶಾಸಕರು, ಚಿತ್ರ ರಂಗದವರು ಎಂದು ಗಣ್ಯಾತಿಗಣ್ಯರೆಲ್ಲ ಸೇರಿದ್ದರು.