ಗುರುವಾರ ಸಭೆ ಸೇರಿದ ಎಸ್‌ಕೆಎಂ- ಸಂಯುಕ್ತ ಕಿಸಾನ್ ಮೋರ್ಚಾ ತಾತ್ಕಾಲಿಕವಾಗಿ ರೈತರು ಆರಂಭಿಸಿದ್ದ ಚಳವಳಿಯನ್ನು ಹಿಂತೆಗೆದುಕೊಳ್ಳುವ ತೀರ್ಮಾನ ತೆಗೆದುಕೊಂಡರು.

ಸರಕಾರದ ಮಾತಿನ ಮೇಲೆ ಭರವಸೆ ಇಟ್ಟು ಡಿಸೆಂಬರ್ 11ರಂದು ನಾವು ಚಳವಳಿ ನಿಲ್ಲಿಸಿ ಮನೆಗಳಿಗೆ ತೆರಳುತ್ತಿದ್ದೇವೆ ಎಂದು ರೈತರ ನಾಯಕ ದರ್ಶನ್ ಪಾಲ್‌ ಸಿಂಗ್ ಹೇಳಿದರು.

ಜನವರಿ 15ರಂದು ಪರಿಶೀಲನಾ ಸಭೆ ನಡೆಸಲಾಗುತ್ತದೆ. ಸರಕಾರ ಮಾತು ಮುರಿದರೆ ಮತ್ತೆ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡ ಗುರ್ನಾಮ್ ಸಿಂಗ್ ಚರಾನಿ ತಿಳಿಸಿದರು.