ನೆರಿಯ,ಡಿ.09: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ, ಅಣಿಯೂರು ಎಂಬಲ್ಲಿ ತೆರೆಯಲು ಉದ್ದೇಶಿಸಿರುವ ಬಾರ್ ಎಂಡ್ ರೆಸ್ಟೋರೆಂಟನ್ನು ಸ್ಥಗಿತಗೊಳಿಸಬೇಕು. ಈ ಬಾರ್ ಎಂಡ್ ರೆಸ್ಟೋರೆಂಟ್‍ನಿಂದಾಗಿ ಸ್ಥಳೀಯವಾಗಿ ಸಂಘ ಸಂಸ್ಥೆಗಳು, ಬಸದಿ, ಯೋಜನೆ ಹಾಗೂ ಗ್ರಾಮದ ಶೇ.80ಕ್ಕೂ ಮಿಕ್ಕಿದ ಜನರ ವಿರೋಧ ಇದೆ ಎಂಬುದು ತಿಳಿದು ಬಂದಿದ್ದು, ಈಗಾಗಲೇ ಸ್ಥಳೀಯರು ಇದರ ವಿರುದ್ಧವಾಗಿ ಹೋರಾಟ ನಡೆಸಿ ಅಬಕಾರಿ ಇಲಾಖೆಯ ಪ್ರತಿನಿಧಿಗಳಲ್ಲಿತÀಮ್ಮ ಮನವಿಯನ್ನು ನೀಡಿದ್ದಾರೆ. ಯಾವುದೇ ಕಾರಣಕ್ಕೆ ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಥಳೀಯರು ಒಗ್ಗಟ್ಟಾಗಿದ್ದು,ಒಂದು ವೇಳೆ ಮದ್ಯದಂಗಡಿ ತೆರೆದಲ್ಲಿತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಷಯವನ್ನು ಮನಗಂಡು ಜನಜಾಗೃತಿ ವೇದಿಕೆಯು ಇಂದುನೆರಿಯ ವಲಯದ ಸಭೆಯನ್ನು ನಡೆಸಿ ಸಭೆಯಲ್ಲಿ ಈ ಕುರಿತಂತೆ ಚರ್ಚೆಯನ್ನು ನಡೆಸಿ ಸಭೆಯ ಬಳಿಕ ಸದಸ್ಯರೆಲ್ಲರೂ ಸೇರಿ ಇಂದು ನೆರಿಯ ಗ್ರಾಮ ಪಂಚಾಯತ್‍ಗೆ ಹೋಗಿ ಅಲ್ಲಿನ ಪಿಡಿಓಶ್ರೀ ಅಜಿತ್ ಕುಮಾರ್ ರವರಲ್ಲಿ ಮದ್ಯದಂಗಡಿ ತಡೆಹಿಡಿಯುವಂತೆ ಮನವಿಯನ್ನು ಸಲ್ಲಿಸಲಾಯಿತು. ವೈನ್ ಶಾಪ್‍ನ ವಿಚಾರದಂತೆ ಯಾವುದೇ ಕ್ರಮ ಜರುಗದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಜನಜಾಗೃತಿ ವಲಯ ವೇದಿಕೆಯ ಅಧ್ಯಕ್ಷರಾದ ಅಶೋಕ್ ಕುಮಾರ್ ಜೈನ್‍ರವರು ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಜನಜಾಗೃತಿ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕರು ಶ್ರೀ ವಿವೇಕ್ ವಿ. ಪಾೈಸ್, ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ, ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರು ಡಿ.ಎ. ರಹಿಮಾನ್, ವಲಯದ ಮಾಜಿ ಅಧ್ಯಕ್ಷರಾದ ನಂದಕುಮಾರ್, ಚಾರ್ಮಾಡಿ ಪಂಚಾಯತ್ ಅಧ್ಯಕ್ಷರಾದ ಕೆ.ವಿ.ಪ್ರಸಾದ್, ತಾಲೂಕು ಕೋ.ಅಪ್ಟ್ ಸದಸ್ಯರಾದ ಶರೀಫ್, ಓಬಯ್ಯ ಗೌಡ, ಮಿತ್ರಸೇನ ಇಂದ್ರ, ದೇವಣ್ಣ ಗೌಡ, ಮಾಧವ ಗೌಡ, ಮೇಲ್ವಿಚಾರಕರಾದ ರಾಜೇಶ್ ಜಿ.ಎನ್. ಹಾಗೂ ವಲಯ ಒಕ್ಕೂಟದ ಅಧ್ಯಕ್ಷರಾದ ಸತೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.