ಮಂಗಳೂರು: ಲಾಲ್‌ಭಾಗ್‌ನಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯ ಮತ್ತು ಶಾಂಭವಿ ಭವನದ ಹಾಸ್ಟೆಲ್ ಡೇ ಕಾರ್ಯಕ್ರಮ ಮತ್ತು ಅಮೃತೋತ್ಸವ ಕಾರ್ಯಕ್ರಮವು ಫೆ. 22ರಂದು ಸಂಜೆ 5.30ಕ್ಕೆ ವಿದ್ಯಾರ್ಥಿನಿ ಭವನದಲ್ಲಿ ಜರಗಲಿದೆ.
ಕಾರ್ಯಕ್ರಮವನ್ನು ಡಾ| ಎಂ. ಮೋಹನ ಆಳ್ವ ಅವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದು, ಬಂಟರ ಯಾನೆ ನಾಡವರ ಮಾತೃ ಸಂಘದ ಅಜಿತ್ ಕುಮಾರ್ ರೈ ಮಾಲಾಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಮೃತಸಿರಿ ಸ್ಮರಣ ಸಂಚಿಕೆಯನ್ನು ಸಂಸದ ಕ್ಯಾ| ಬ್ರಿಜೇಶ್ ಚೌಟರು ಮತ್ತು ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಅನಾವರಣಗೊಳಿಸುವರು. ಮುಖ್ಯ ಅತಿಥಿಗಳಾಗಿ ಮುಂಬಯಿಯ ಅರ್ಗಾನಿಕ್ ಇಂಡಸ್ಟ್ರೀಸ್‌ನ ಶಶಿರೇಖಾ ಆನಂದ ಶೆಟ್ಟಿ, ಸೆಲೆಬ್ರಿಟಿ ಚೆಪ್ ಶ್ರೀಯಾ ಶೆಟ್ಟಿ, ಅಮತ ಬಿಲ್ಡ್ ಕೇರ್ ಸೊಲ್ಯೂಷನ್ ಪಾಲುದಾರರಾದ ಸಮೀಕ್ಷಾ ಶೆಟ್ಟಿ, ಕೊರಿಯೋಗ್ರಾಫರ್ ಪ್ರಮೋದ್ ಆಳ್ವ ಅವರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.