ಮಂಗಳೂರು: ವಿಪರೀತವಾಗಿ ಸುರಿದ ಭಾರಿ ಮಳೆಗೆ ಉಳ್ಳಾಲ ತಾಲೂಕಿನ ಮೊಂಟೆಪದವಿನಲ್ಲಿ ಸೀತಾರಾಮ ಪೂಜಾರಿಯವರ ಮನೆ ಕುಸಿದು ಬಿದ್ದು ಮಣ್ಣಿನಡಿ ಸಿಲುಕಿ ಅವರ ಇಬ್ಬರು ಕಂದಮ್ಮಗಳು, ತಾಯಿ ಮೃತಪಟ್ಟಿದ್ದು, ಸೀತಾರಾಮರವರ ತಂದೆ ಹಾಗು ಪತ್ನಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ ಹೇಳಿದರು.
ಮೃತಪಟ್ಟವರಿಗೆ ಗರಿಷ್ಠ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.