ಮಂಗಳೂರು ನಗರದ ಸಿ.ಸಿ.ಬಿ ಮತ್ತು ಇಕೋನಾಮಿಕ್ & ನಾರ್ಕೊಟಿಕ್ ಕ್ರೈಂ ಪೊಲೀಸ್  ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಐ.ಪಿ.ಎಲ್ ಕ್ರಿಕಟ್‍ನ ಬೆಟ್ಟಿಂಗ್‍ನ್ನು ಮೊಬೈಲ್ ಅ್ಯಪ್‍ಗಳಾದ Star App ಮತ್ತು Lotus book247 bet ಗಳಲ್ಲಿ ಬುಕ್ಕಿಗಳು ಬೇರೆಯವರ ಹೆಸರಿನಲ್ಲಿ ಮಂಗಳೂರು ನಗರದ Axis Bank, Karnataka Bank ಮತ್ತು HDFC Bank ಬ್ಯಾಂಕ್ ಖಾತೆಗಳನ್ನು ತೆರೆದ ಅವರುಗಳ  ಖಾತೆಗೆ ಬಾಜಿದಾರರಿಂದ ಆನ್ ಲೈನ್ ಮೂಲಕ ಬೆಟ್ಟಿಂಗ್ ಹಣವನ್ನು ಸಂಗ್ರಹಿಸಿ ಮೋಸದಿಂದ  ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದ ಅರು ಜನ ಬುಕ್ಕಿಗಳನ್ನು ವಶಕ್ಕೆ ಪಡೆದು ಪ್ರಕರಣವನ್ನು ಬೇದಿಸುವಲ್ಲಿ  ಯಶಸ್ವಿಯಾಗಿರುತ್ತಾರೆ.  

ಈ ಮೋಸದ ಬೆಟ್ಟಿಂಗ್ ದಂಧೆಯಲ್ಲಿ ಬುಕ್ಕಿಗಳಾದ ಮೊದಲಿಗೆ 1ವಿಕ್ರಂ ಕುಂಪಲ, ಮಂಗಳೂರು  ನನ್ನು ದಿನಾಂಕ:21.04.2021 ರಂದು ದಸ್ತಗಿರಿ ಮಾಡಿ ನಂತರ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು  ತನಿಖೆ ಮುಂದುವರೆಸಲಾಯಿತು. ನಂತರ ದಿನಾಂಕ:26.04.2021 ರಂದು ಧನಪಾಲ್ ಶೆಟ್ಟಿ,  ಕೃಣ್ಣಾಪುರ, ಕಮಲೇಶ್, ಸುರತ್ಕಲ್ (ಮೂಲ ರಾಜಸ್ಥಾನ್ ರಾಜ್ಯ) ರವರನ್ನು ದಸ್ತಗಿರಿ ಮಾಡಿ  ವಿಚಾರಣೆಯನ್ನು ನಡೆಸಿ, ನಂತರ ಪ್ರಕರಣದ ಪ್ರಮುಖ ಅರೋಪಿಗಳಾದ ಹರೀಶ್ ಶೆಟ್ಟಿ, ಮೂಲತ  ಮುಂಭೈ, ಪ್ರೀತೆಶ್ @ ಪ್ರೀತಮ್ , ಆಶೋಕನಗರ ಮತ್ತು ಅವಿನಾಶ್ ಉರ್ವ ಮಾರಿಗುಡಿ  ರವರನ್ನು ದಿನಾಂಕ:30.04.2021 ರಂದು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ದಸ್ತಗಿರಿ ಮಾಡಿ  ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರೆಸಲಾಯಿತು.  

ಈ ಪ್ರಕರಣದಲ್ಲಿ ಸುಮಾರು 20 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿ ಸುಮಾರು 20  ಲಕ್ಷ ಹಣ ಹಾಗೂ 3 ಲಕ್ಷ ನಗದು ಮತ್ತು ಅನ್ ಲ್ಯೆನ್ ಗೇಮ್ ಸಲುವಾಗಿ ಉಪಯೋಗಿಸುತ್ತಿದ್ದ 10  ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆದು ಕ್ರಮಕೈಗೊಳ್ಳಲಾಗಿದೆ.  

ಮಂಗಳೂರು ನಗರದ ಉಪ-ಪೊಲೀಸ್ ಆಯುಕ್ತರಾದ ಶ್ರೀ ಹರಿರಾಂ ಶಂಕರ್ ಐ.ಪಿ.ಎಸ್ ಮತ್ತು  ವಿನಯ ಗಾಂವಕರ್ ರವರ ನಿರ್ದೆಶನದಂತೆ ಸಿಸಿಬಿ ಪೊಲೀಸ್ ನಿರೀಕ್ಷಕರಾದ ಮಹೇಶ್  ಪ್ರಸಾದ್ ಮತ್ತು ಸಿಬ್ಬಂದಿ ಹಾಗೂ ಇಕೋನಾಮಿಕ್ & ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣೆಯ  ಪಿಎಸ್‍ಐ ಸತೀಶ್ ಎಂ ಪಿ ಹಾಗೂ ಸಿಬ್ಬಂದಿಯವರು ಯಶಸ್ವಿಯಾಗಿ ಈ ಪ್ರಕರಣವನ್ನು ಪತ್ತೆ  ಮಾಡಿರುತ್ತಾರೆ.