ಬೆಳಗಾವಿಯಲ್ಲಿ ಹುಕ್ಕೇರಿ ಮೂಲದ ಮುಸ್ಲಿಂ ಯುವತಿ ಹಿಂದೂ ಯುವಕನೊಂದಿಗೆ ಆಟೋ ಹತ್ತಿದಳೆಂದು ನಡೆದ ಅನೈತಿಕ ಪೋಲೀಸ್‌ಗಿರಿಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ರಿಕ್ಷಾ ಚಾಲಕ ಖತೀಬ್, ಅಯೂಬ್ ಮತ್ತು ಯೂಸುಫ್ ಪಠಾಣ್‌ರನ್ನು ಬಂಧಿಸಲಾಗಿದೆ.
ಉದ್ಯೋಗ ನಿಮಿತ್ತ ಬೆಳಗಾವಿಗೆ ಬಂದಿದ್ದ ಮುಸ್ಲಿಂ ಯುವತಿ ವ್ಯವಸ್ಥೆಗಾಗಿ ಪರಿಚಿತ ಯುವಕನೊಡನೆ ಆಟೋ ಏರಿದ್ದಾಳೆ. ಆಟೋ ಚಾಲಕ ಬಲಾತ್ಕಾರವಾಗಿ ಇಬ್ಬರನ್ನೂ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ 20 ಜನ ಸೇರಿ ದಾಳಿ ಮಾಡಿ ಥಳಿಸಿ, ಇಬ್ಬರ ಮೊಬಾಯಿಲ್, ನಗದು ಸಹಿತ 70,000 ಮೌಲ್ಯವನ್ನು ದೋಚಿ ಪರಾರಿಯಾಗಿದ್ದಾರೆ. ನಿನಗೆ ಸುತ್ತಾಡಲು ಹಿಂದೂ ಯುವಕ ಬೇಕೆ ಎಂದು ಹಂಗಿಸಿದ್ದಾರೆ.
ಸಂತ್ರಸ್ತೆಯು ಮಾಳಮಡ್ಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಡಿಸಿಪಿ ವಿಕ್ರಂ ಆಮ್ಟೆಯವರು ಪ್ರಕರಣದ ತೀವ್ರತೆ ಮನಗಂಡು ಪ್ರತ್ಯೇಕ ತಂಡ ರಚಿಸಿದರು. ಸದ್ಯ ಮೂವರನ್ನು ಬಂಧಿಸಿದ್ದು, ಇನ್ನು 17 ಜನರಿಗಾಗಿ ಹುಡುಕಾಟ ನಡೆದಿದೆ.