ಲಖಿಂಪುರ ಖೇರಿಯಲ್ಲಿ ಅಪಘಾತ ಮತ್ತು ಸಾವುಗಳಿಗೆ ಕಾರಣವಾದ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಸ್ ಮಿಶ್ರಾ ಪಿಸ್ತೋಲಿನಿಂದಲೇ ಗುಂಡು ಹಾರಿದ್ದು ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ನೀಡಿದೆ.
ಅಕ್ಟೋಬರ್ 3ರಂದು ಮಂತ್ರಿ ಮಗ ಆಶಿಸ್ ಮಿಶ್ರಾ ಕಾರು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ನುಗ್ಗಿ ರೈತರ ಕೊಲೆ ನಡೆದಿತ್ತು, ಗುಂಡು ಹಾರಿಸಿದ್ದರಿಂದಲೂ ಸಾವಾಗಿತ್ತು. ಆಶಿಸ್ ನಾನು ಕಾರಲ್ಲಿ ಇರಲಿಲ್ಲ, ಗುಂಡು ಹಾರಿಸಿಲ್ಲ ಎಂದು ಹೇಳಿಕೆ ನೀಡಿದ್ದ. ಆಗ ಪೋಲೀಸರು ವಶಪಡಿಸಿಕೊಂಡಿದ್ದ ನಾಲ್ಕು ಕೋವಿ ಮತ್ತು ಪಿಸ್ತೂಲುಗಳಲ್ಲಿ ಮೂರರಲ್ಲಿ ಗುಂಡು ಹಾರಿಸಿರುವುದು ಪತ್ತೆಯಾಗಿದೆ. ಇನ್ನುಳಿದ ಗುಂಡು ಹಾರಿದ ಗನ್ ಪಿಸ್ತೂಲ್ ವರದಿ ಬರಬೇಕಾಗಿದೆ.