2021ರ ಆಗಸ್ಟ್ 11ರಂದು ಏರಿತ್ತೋ, ಈಗಲೂ ಅದೇ ಸ್ಥಿತಿ ಇದೆ. ಇದೆಂತಾ ಸರಕಾರ, ನ್ಯಾಯಾಲಯದಲ್ಲಿ ಹೇಳಿದ್ದಕ್ಕೂ ಮನ್ನಣೆ ಇಲ್ಲವೆ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಮುಖ್ಯ ನ್ಯಾಯಮೂರ್ತಿ ಋತುರಾಜ ಅವಸ್ಥಿಯವರು ಭಾರತ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸುತ್ತ ಹೀಗೆ ಹೇಳಿದರು.

ಅತ್ಯಾಧುನಿಕ ಆಂಬುಲೆನ್ಸ್ ನಿರ್ವಹಣೆಯ ರೂ. 1,800 ಕೋಟಿ ಟೆಂಡರನ್ನು ರಾಜ್ಯ ಸರಕಾರ ರದ್ದು ಪಡಿಸಿತ್ತು. ಕೋರ್ಟಿನಲ್ಲಿ ಈ ವಿಷಯವಾಗಿ ರಾಜ್ಯ ಸರಕಾರವು ಕೂಡಲೆ ಹೊಸ ಟೆಂಡರ್ ಕರೆಯುವುದಾಗಿ ಹೇಳಿತ್ತು. ಆದರೆ ಕರೆಯದಿರುವುದೆ ಈಗಿನ  ತಕರಾರು.