ನನಗೆ ಮೃದು ಹಿಂದುತ್ವ ಗೊತ್ತಿಲ್ಲ ಆದ್ದರಿಂದ ಅದನ್ನು ಅನುಸರಿಸುವುದು ಹೇಗೆ? ಇಂದು ನಿಜ ಹಿಂದುತ್ವದ ಅಗತ್ಯವಿದೆ. ದೇಶದ 130 ಕೋಟಿ ಜನ ಒಂದಾಗಿ ಮಾನವೀಯತೆಯಿಂದ ಬದುಕುವುದೇ ನಿಜ ಹಿಂದುತ್ವ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಹೇಳಿದರು.

ಅಯೋಧ್ಯೆಗೆ ಹೋದಾಗ ರಾಮ ಲಲ್ಲಾನನ್ನು ನೋಡಿದ್ದು ತಪ್ಪೇ ಎಂದು ಅವರು ಟೀವಿ ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಾರೆ. ಮುಂದಿನ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಅವರು ಹೇಳಿದರು.