ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ರಿಕ್ಷಾ ನಿಲ್ದಾಣಗಳ ಮೇಲ್ಚಾವಣಿ ಹಾಕಬೇಕೆಂಬ ಬೇಡಿಕೆ ವಿಚಾರವನ್ನು ವಿಧಾನಪರಿಷತ್ತಿನಲ್ಲಿ ಪ್ರಶ್ನೆಯ ಮೂಲಕ ಚರ್ಚೆಯನ್ನು  ಮಾಡಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಶಾಸಕರ ಅನುದಾನದಿಂದ ರಿಕ್ಷಾ ನಿಲ್ದಾಣಗಳನ್ನು ಮಾಡಬಹುದೆಂದು ಕಾನೂನಿನಲ್ಲಿ ಸೇರ್ಪಡೆಗೊಳಿಸುವ ಮೂಲಕ ಅನೇಕ ಕಡೆಗಳಲ್ಲಿ ಇಂದು ರಾಜ್ಯದಲ್ಲಿ ಶಾಸಕರ ಅನುದಾನದಿಂದ ರಿಕ್ಷಾ ನಿಲ್ದಾಣ ಮೇಲ್ಚಾವಣಿ ನಿರ್ಮಾಣ, ಹಾಗೂ ಸಾರ್ವಜನಿಕ ಬಸ್ಸು ನಿಲ್ದಾಣವನ್ನು ಮಾಡುವ ಅವಕಾಶವನ್ನು ನೀಡಲಾಗಿದ್ದು ಅದರಂತೆ ಕಳೆದ ಒಂದು ವರ್ಷದಲ್ಲಿ  ಸುಮಾರು ಹದಿಮೂರು ರಿಕ್ಷಾ ನಿಲ್ದಾಣಗಳನ್ನು 18 ಬಸ್ಸು ನಿಲ್ದಾಣಗಳನ್ನು ವಿಧಾನ ಪರಿಷತ್ತಿನ ಶಾಸಕರಾದ  ಐವನ್  ಡಿಸೋಜರವರು ಅವರು  ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡುತ್ತಾ ತಿಳಿಸಿದರು.

ಈ ಸಂದರ್ಭದಲ್ಲಿ ರೋಷಿನಿ ನಿಲಯ ಬಸ್ಸು ನಿಲ್ದಾಣ ವೆಲೆನ್ಸಿಯ ಸರ್ಕಲ್ ಬಸ್ಸು ನಿಲ್ದಾಣ, ಜೇರೋಜಾ ಶಾಲೆಯ ಬಸು ನಿಲ್ದಾಣ ಡಬಲ್ ಗೇಟ್ ಬಸು ನಿಲ್ದಾಣ ಇದನ್ನು ಸಾರ್ವಜನಿಕವಾಗಿ  ವಿಜೃಂಭಣೆಯಿಂದ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಜಪ್ಪು ಸೆಮಿನೇರಿಯಾ ರೆ| ಫಾದರ್ ಮ್ಯಾಕ್ಸಿಮ್ ರೋಜಾರಿಯೋ ಮಾತನಾಡಿ ಸಾರ್ವಜನಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ವಿಧಾನಪರಿಷತ್ತಿನ ಶಾಸಕರಾದ ಐವನ್ ಡಿಸೋಜರವರ ಕಾರ್ಯವೈಕರಿಯು ಶ್ಲಾಘನೀಯವಾಗಿದೆ. ಬಸ್ಸು ನಿಲ್ದಾಣಗಳು, ರಿಕ್ಷಾ ನಿಲ್ದಾಣಗಳು, ಟೆಂಪೋ ನಿಲ್ದಾಣಗಳು, ಕಾರು ನಿಲ್ದಾಣಗಳು ಸಾರ್ವಜನಿಕರಿಗೆ ತಮ್ಮ ವೃತ್ತಿಯನ್ನು ಮಾಡುವ ಸಂದರ್ಭದಲ್ಲಿ ಅವರಿಗೆ ಉಪಯುಕ್ತವಾಗಿದೆ ರಿಕ್ಷಾ ಚಾಲಕರು ಮತ್ತು ಬಸ್ಸು ಚಾಲಕರು ಸಾರ್ವಜನಿಕರವಾಗಿ ತಮ್ಮ ಕೆಲಸವನ್ನು ಸೇವಾ ದೃಷ್ಟಿಯಿಂದ ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೋಲಿ ರೋಜಾರಿಯೋ ಕಾನ್ವೆಂಟಿನ ಸಿಸ್ಟರ್ ಸೋಫಿಯಾರವರು ಮಾತನಾಡಿ ಸಾರ್ವಜನಿಕ ಕೆಲಸಗಳಲ್ಲಿ ಸಾಮಾಜಿಕ ಕೆಲಸ ಮಾಡುವ ಮೂಲಕ ಉತ್ತಮ ಸಂದೇಶವನ್ನು ನೀಡಿದೆ ಸಾರ್ವಜನಿಕವಾಗಿ ಇದು ಉತ್ತಮ ಸಂದೇಶವನ್ನು ನೀಡಿದೆ ಸಾರ್ವಜನಿಕವಾಗಿ ಇದು ಉತ್ತಮ ಕೆಲಸ ಎಂದು ನುಡಿದರು. ಈ ಸಂದರ್ಭದಲ್ಲಿ ಮಾಜಿ ಮೇಯರ್  ಜೆಸಿಂತಾ ವಿಜಯ ಆಲ್ಫ್ರೆಡ್ ರವರು ಹಾಗೂ ಮಾಜಿ ಕಾರ್ಪೊರೇಟರ್ ಅಪ್ಪಿಲತಾ ಅವರು ಮಾತನಾಡಿ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸೀದ  ಐವನ್ ಡಿಸೋಜರವರಿಗೆ ಅಭಿನಂದನೆ ಸಲ್ಲಿಸಿದರು. ಸಾರ್ವಜನಿಕವಾಗಿ ಉಪಯೋಗವಾಗುವಂತಹ ಇದು ಉತ್ತಮ ಕಾರ್ಯ ವೈಕರಿ ಎಂದು ಶ್ಲಾಘಿಸಿದರು. ಫಾದರ್ ಮುಲ್ಲರ್ ರಸ್ತೆಯಿಂದ ಮಾರ್ಗನ್ ಗೇಟ್ ನ ವರೆಗೆ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ ಐವನ್ ಡಿಸೋಜರವರ ಕೆಲಸ ತುಂಬಾ ಶ್ಲಾಘನೀಯ ಎಂದು ಈ ಸಂದರ್ಭದಲ್ಲಿ ತಿಳಿಸಿದರು. 

ಈ ಸಂದರ್ಭದಲ್ಲಿ ರೆ! ಫಾದರ್ ಮ್ಯಾಕ್ಸಿಮ್ ಹೊಸಾರಿಯು ಸಿಸ್ಟರ್ ಜನಿತ ಸಿಸ್ಟರ್ ಮಾರ್ಷಲಿನ್ ಡಾ। ಕವಿತಾ ಐವನ್ ಡಿಸೋಜಾ, ಸಿಸ್ಟರ್ ಸುಮನ  ಸಿಸ್ಟರ್ ಜೆರಲ್ದ ಸಿಸ್ಟರ್ ಅರಣ್ಯ ಸಿಸ್ಟರ್ ಸಿಸ್ಟರ್ ಐ ಮಿಸ್ ಸಿಸ್ಟರ್ ಸೋಫಿಯಾ ಫಾದರ್ ಜೆಬಿ ಕ್ರಾಸ್ತಾ ಸಿಸ್ಟರ್ ರ್ಯಾನ್ಸಿ ಸಾರಿಕಾ ಅಂಕಿತ, ಕಾಂಗ್ರೆಸ್ ನಾಯಕರಾದ ಸಲೀಂ, ನಾಗೇಂದ್ರ ಕುಮಾರ್, ಬಾಸ್ಕರ್ ರಾವ್, ಸತೀಶ್ ಪೆಂಗಲ್, ನೀತು ಡಿಸೋಜಾ, ಅಲಿಸ್ಟನ್ ಡಿಕುನ್ಹಾ, ಜೇಮ್ಸ್ ಪ್ರವೀಣ್, ಕ್ಲೈವ್ ವೆಲೆನ್ಸಿಯಾ ಸಿರಾಜ್ ಬಜ್ಪೆ, ಅನಿಲ್ ಲೋಬೋ, ವಸಂತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.