ರೈತ ಸಂಘಟನೆಗಳ ಒಕ್ಕೂಟವು ನೀಡಿದ್ದ ಭಾರತ ಬಂದ್ ಬಹುಪಾಲು ಯಶಸ್ವಿ ಆಯಿತು. ಉತ್ತರ ಭಾರತ ಅದರಲ್ಲೂ ದೆಹಲಿಗೆ ಹತ್ತಿರದ ರಾಜ್ಯಗಳು ಸ್ತಂಭಿಸಿದವು.

ದೆಹಲಿ ಸುತ್ತ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ರಾಜಸ್ತಾನದ ಹಲವೆಡೆ ಹೆದ್ದಾರಿಗಳಲ್ಲಿ ವಾಹನಗಳು ಹೋಗಲಾಗದೆ, ಸಾಲುಗಳಲ್ಲಿ ನಿಂತು ಸೋತವು.

ರೈತರು ಹಳಿಗಳ ಮೇಲೆ ಕುಳಿತಿದ್ದುದರಿಂದ ರೈಲುಗಳು ಸಕಾಲದಲ್ಲಿ ಓಡಲು ಸಾಧ್ಯವಾಗಲಿಲ್ಲ. 25ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು ಪಡಿಸಲಾಯಿತು.

ಬೆಂಗಳೂರಿನ ಟೌನ್ ಹಾಲ್ ಚೌಕವು ಹಿಂದೆಂದೂ ಕಂಡಿರದ ರೈತ ಸಮಾವೇಶವನ್ನು ಕಂಡಿತು. ಮೋದಿ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧ ಸಿಡಿಲಬ್ಬರದ ಘೋಷಣೆ ಮೊಳಗಿತು. ಇಡೀ ದೇಶ ಭಾರತ ಬಂದ್‌ಗೆ ಸ್ಪಂದಿಸಿತು.