ಪ್ರಧಾನಿ ಮೋದಿಯವರು ವಾಷಿಂಗ್ಟನ್‌ ಮತ್ತು ನ್ಯೂಯಾರ್ಕ್ ಎರಡೂ ಕಡೆ ಭಾರತೀಯ ಅಮೆರಿಕನರ ಪ್ರತಿಭಟನೆ ಎದುರಿಸಬೇಕಾಯಿತು.

ಭಾರತೀಯ ಅಮೆರಿಕನರು ಬಿಳಿ ಭವನದ ಎದುರಿನ ಉದ್ಯಾನ ಲಾಫಯಟ್ ಚೌಕದಲ್ಲಿ ಸೇರಿ ಮೋದಿಯವರ ವಿರುದ್ಧ ಪ್ರತಿಭಟಿಸಿದರು.

ಭಾರತವನ್ನು ಫ್ಯಾಸಿಸಮ್‌ನಿಂದ ರಕ್ಷಿಸಿರಿ ಎಂಬುದು ಅವರ ಕಯ್ಯ ಪ್ರಮುಖ ಬರಹವಾಗಿತ್ತು. ಜೊತೆಗೆ ಅವರು ಘೋಷಣೆಗಳನ್ನು ಕೂಗಿದರು.

ನ್ಯೂಯಾರ್ಕ್‌ನಲ್ಲಿ ಹಿಂದೆ ಹೋಗಿ ಮೋದಿ ಎಂಬ ಬರಹದ ಫಲಕ ತೋರಿಸಿ, ಘೋಷಣೆ ಕೂಗಿದರು. ನರೇಂದ್ರ ಮೋದಿಯವರಿಗೆ ವಿಶ್ವ ಸಂಸ್ಥೆಯಲ್ಲಿ ವೇದಿಕೆ ನೀಡಬೇಡಿ ಎಂಬ ವಾಚಕವಿದ್ದ ಬ್ಯಾನರ್‌ಗಳು ಸ್ಪಷ್ಟವಾಗಿ ರಾರಾಜಿಸಿದವು.

ಅಲ್ಪಸಂಖ್ಯಾತರು, ರೈತರ ಮೇಲೆ ದೌರ್ಜನ್ಯ ಹಾಗೂ ಮಾಧ್ಯಮ ಸ್ವಾತಂತ್ರ್ಯದ ಮೇಲೆ ಹಲ್ಲೆ, ಮೋದಿ ಸರಕಾರದ ಸಾಧನೆ ಎಂದು ಘೋಷಿಸಿದ ಪ್ರತಿಭಟನೆಕಾರರು ಆ ಬಗೆಗೆ ಫಲಕ ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದರು.