ಕರ್ನಾಟಕದ ಅದಿತಿ ಅಶೋಕ್ ಗಾಲ್ಫ್‌ ಬೆಳ್ಳಿ ಜಯಿಸಿದರು. ಮೊದಲ ಬಾರಿಗೆ ಮಹಿಳೆ ಗಾಲ್ಫ್ ಪದಕ ಪಡೆದಂತಾಯಿತು. 3,000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಅವಿನಾಶ್ ಸಬ್ಲೆ ಚಿನ್ನ ಗೆದ್ದರು. ಭಾರತಕ್ಕೆ ಈ ವಿಭಾಗದ ಮೊದಲ ಪದಕ ದಾಖಲೆಯಿದು. ತಾಜಿಂದರ್ ಪಾಲ್ ಸಿಂಗ್ ಶಾಟ್ ಪಟ್‌ ಸ್ವರ್ಣ ಗೆದ್ದರು. ಕೊನೆಯ ಶೂಟಿಂಗ್ ಟ್ರಾಪ್‌ನಲ್ಲೂ ಭಾರತ ತಂಡ ಬಂಗಾರ ಪಡೆಯಿತು.

ಭಾರತವು ಹಾಂಗ್‌ಜೌ 19ನೇ ಏಶಿಯಾ ಕ್ರೀಡಾಕೂಟದಲ್ಲಿ 13 - 21- 19= 55 ಪದಕಗಳೊಡನೆ 4ನೇ ಸ್ಥಾನದಲ್ಲಿ ಇದೆ. ಅಲ್ಲಿಗೆ ಭಾರತವು ಪದಕಗಳ ಅರೆ ನೂರಟ್ಟಿ ದಾಟಿತು.

ಜನ ಪ್ರಜಾಪ್ರಭುತ್ವ ಚೀನಾವು  133- 72- 39= 244 ಪದಕಗಳೊಡನೆ ಮೊದಲ ಸ್ಥಾನದಲ್ಲಿ ಇದೆ. ಪ್ರಜಾಸತ್ತಾತ್ಮಕ ಕೊರಿಯಾ 30- 35- 60 = 125 ಹಾಗೂ ಜಪಾನ್ 29- 41- 42= 112 ಪದಕಗಳೊಡನೆ 2, 3ನೇ ಸ್ಥಾನಗಳಲ್ಲಿ ಇವೆ.

ಉಜ್ಬೆಕಿಸ್ತಾನ್, ತಾಯ್‌ಲ್ಯಾಂಡ್, ಚೀನಾ ತೈಪೆ, ಹಾಂಗ್‌ಕಾಂಗ್ ಚೀನಾ, ಬಡಗಣ ಕೊರಿಯಾ, ಇಂಡೋನೇಶಿಯಾಗಳು 5, 6, 7, 8, 9, 10 ಸ್ಥಾನಗಳಲ್ಲಿ ಇವೆ.