ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಸಂಭ್ರಮದ ಸಂಬಂಧ ಲಾಂಛನವನ್ನು ಇಂದು ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಲಾಂಛನವನ್ನು ದೇವಾಲಯದ ಹಿರಿಯ ಕರಸೇವಕರಾದ ಗಂಗಯ್ಯ ಗೌಡ ಪಾದೆ, ವಿಠಲ ಗೌಡ ಶಕ್ತಿಪುರ ಅವರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಅಡಿಗಳ ಅನಂತ ಕೃಷ್ಣ ಭಟ್, ಶ್ರೀಪತಿ ಭಟ್, ಜಯಶ್ರೀ ಅಮರನಾಥ ಶೆಟ್ಟಿ, ವಿದ್ಯಾ ರಮೇಶ್ ಭಟ್, ಶಿವಪ್ರಸಾದ್ ಆಚಾರ್, ಅಭಯವರಿಂದ ಜೈನ್ ಹಾಗೂ ಅನುವಂಶಿಕ ಆಡಳಿತ ಮೊಕ್ತೇಸರ ಚೌಟರ ಅರಮನೆಯ ಕುಲದೀಪ್ ಎಂ , ದೇವಾಲಯದ ಅರ್ಚಕರು , ಪುರೋಹಿತರು ಮತ್ತು ಇತರರು ಹಾಜರಿದ್ದರು. ಸಂದೀಪ್ ಎಂ ಕಾರ್ಯಕ್ರಮವನ್ನು ನಿರ್ವಹಿಸಿದರು.