ಸುಳ್ಯದ ಕೇರ್ಪಳದ ಬಂಟರ ಭವನದಲ್ಲಿ ಕಳೆದ ಶನಿವಾರ ಮಾಯಾವಿ ಕುದ್ರೋಳಿ ಗಣೇಶ್ ಅವರು ಪ್ರಥಮ ಬಾರಿಗೆ ಮೈಂಡ್ ಮಿಸ್ಟರಿ ವಿನೂತನ ಕಾರ್ಯಕ್ರಮ ನಡೆಸಿದ್ದು ಮೆಂಟಲಿಸಮ್ ಚಮತ್ಕಾರಕ್ಕೆ ಪ್ರೇಕ್ಷಕರು ಮೂಕ ವಿಸ್ಮಿತರಾದರು. ಜಾದೂ ರಂಗದ ಹೊಚ್ಚ ಹೊಸ ಕಲಾಪ್ರಯೋಗ ಮೈಂಡ್ ಮಿಸ್ಟರಿ ಮೂಲಕ ಸುಪ್ತ ಮನಸ್ಸಿನ ಶಕ್ತಿಯ ಅನಾವರಣ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿತು. ಇದೊಂದು ವಿಜ್ಞಾನ ಮನಶಾಸ್ತ್ರ ಹಾಗೂ ಮ್ಯಾಜಿಕ್ ಕಲೆಯ ಸಂಗಮದ ಮೆಂಟಲಿಸಮ್ ಎಂಬ ಹೊಸ ಪ್ರಯೋಗ ವಿಶೇಷವಾಗಿ ಗಮನ ಸೆಳೆದಿದ್ದು ಮೈಂಡ್ ರೀಡಿಂಗ್, ಭವಿಷ್ಯವಾಣಿ, ಸಮ್ಮೋಹಿನಿ, ಎನ್ ಎಲ್ ಪಿ, ಟೆಲಿಪತಿ, ಅಗೋಚರ ಸಂಪರ್ಕ, 6ನೇ ಇಂದ್ರಿಯದ ಅನುಭೂತಿಯ ರಂಗರೂಪಾತ್ಮಕ ಪ್ರಯೋಗ ನೆರೆದ ಪ್ರೇಕ್ಷರಲ್ಲಿ ನೂತನ ಅವಿಷ್ಕಾರ ಎಂದೂ ಮನೆಮಾತಾಯಿತು.
ಮೆಂಟಲಿಸಮ್ ಎಂಬ ವಿಜ್ಞಾನ ಮನಶಾಸ್ತ್ರ- ಜಾದೂ ಕಲೆಯ ಸಂಗಮದ ಮನರಂಜನಾ ಕಲಾ ಪ್ರಕಾರವನ್ನು ಮಾಯಾವಿ ಕುದ್ರೋಳಿ ಗಣೇಶ್ ಅವರು ಪ್ರೇಕ್ಷಕರ ಮನಸ್ಸಿನ ಭಾವ, ವ್ಯಕ್ತಿತ್ವದ ವರ್ತನೆ, ಮನೋ ಕಲ್ಪನೆಯ ಸ್ವರೂಪವನ್ನು ಅಭ್ಯಸಿಸಿ ತರ್ಕಕ್ಕೆ ನಿಲುಕದ ಪ್ರಯೋಗಗಳನ್ನು ಪ್ರದರ್ಶಿಸಿದರು. ಮೆಂಟಲಿಸಮ್ ಕಲೆಯ ಹೊಚ್ಚ ಹೊಸ ಪ್ರಯೋಗವಾಗಿರುವ ಮೈಂಡ್ ಮಿಸ್ಟರಿ ಪ್ರದರ್ಶನದ ಮೂಲಕ ಪ್ರೇಕ್ಷಕರಿಗೆ ಅಚ್ಚರಿಯ ಲೋಕ ತೆರೆದಿಟ್ಟರು. ಮನಸ್ಸಿನ ತರ್ಕವನ್ನೇ ಪ್ರಶ್ನಿಸುವ ಹತ್ತು ಹಲವು ಮನೋ ಭ್ರಮೆಗಳಿಂದ ತುಂಬಿರುವ ಒಂದೂವರೆ ಗಂಟೆಗಳ ಕಾಲ ಮೈಂಡ್ ಮಾಯಾವಿ ಕುದ್ರೋಳಿ ಗಣೇಶ್ ನಡೆಸಿದರು.
ಮೆಂಟಲಿಸಮ್ ಎಂಬ ವಿಜ್ಞಾನ ಮನಶಾಸ್ತ್ರ- ಜಾದೂ ಕಲೆಯ ಸಂಗಮದ ಮನರಂಜನಾ ಕಲಾ ಪ್ರಕಾರವನ್ನು ಮಾಯಾವಿ ಕುದ್ರೋಳಿ ಗಣೇಶ್ ಅವರು ಪ್ರೇಕ್ಷಕರ ಮನಸ್ಸಿನ ಭಾವ, ವ್ಯಕ್ತಿತ್ವದ ವರ್ತನೆ, ಮನೋ ಕಲ್ಪನೆಯ ಸ್ವರೂಪವನ್ನು ಅಭ್ಯಸಿಸಿ ತರ್ಕಕ್ಕೆ ನಿಲುಕದ ಪ್ರಯೋಗಗಳನ್ನು ಪ್ರದರ್ಶಿಸಿದರು. ಮೆಂಟಲಿಸಮ್ ಕಲೆಯ ಹೊಚ್ಚ ಹೊಸ ಪ್ರಯೋಗವಾಗಿರುವ ಮೈಂಡ್ ಮಿಸ್ಟರಿ ಪ್ರದರ್ಶನದ ಮೂಲಕ ಪ್ರೇಕ್ಷಕರಿಗೆ ಅಚ್ಚರಿಯ ಲೋಕ ತೆರೆದಿಟ್ಟರು. ಮನಸ್ಸಿನ ತರ್ಕವನ್ನೇ ಪ್ರಶ್ನಿಸುವ ಹತ್ತು ಹಲವು ಮನೋ ಭ್ರಮೆಗಳಿಂದ ತುಂಬಿರುವ ಒಂದೂವರೆ ಗಂಟೆಗಳ ಕಾಲ ಮೈಂಡ್ ಮಿಸ್ಟರಿ ವಿನೂತನ ಪ್ರದರ್ಶನ ಅದ್ಭುತ ಲೋಕದಲ್ಲಿ ಪ್ರೇಕ್ಷಕರನ್ನು ತೇಲಾಡಿಸಿತು. ಮನಸ್ಸನ್ನು ಓದುವ ಮೈಂಡ್ ರೀಡಿಂಗ್, ಮನಸ್ಸು ಮನಸ್ಸುಗಳ ಮಧ್ಯದ ಅಗೋಚರ ಸಂಪರ್ಕದ ಟೆಲಿಪತಿ, ವ್ಯಕ್ತಿಯ ವರ್ತನೆಯ ಮೇಲೆ ಪ್ರಭಾವ ಬೀರುವ ಎನ್.ಎಲ್.ಪಿ, ಮುಂದಾಗುವ ವಿಚಾರಗಳನ್ನು ಮೊದಲೇ ಸೂಚಿಸುವ ಭವಿಷ್ಯವಾಣಿ ಮುಂತಾದ ಹಲವು ಚಮತ್ಕಾರಗಳು ಮೈಂಡ್ ಮಿಸ್ಟರಿಯಲ್ಲಿ ತೆರೆದುಕೊಂಡಿತು.
ಕಾರ್ಯಕ್ರಮದ ಸಂಯೋಜಕರಾದ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಉದ್ಯಮಿ ರಾಮಚಂದ್ರ ರಾವ್ ಆದ್ರೋ, ಡಾ| ಜ್ಯೋತಿ ರೇಣುಕಾಪ್ರಸಾದ್ ಕೆ.ವಿ, ಡಾ| ಲೀಲಾಧರ್ ಡಿ.ವಿ, ಲಯನ್ಸ್ ಅಧ್ಯಕ್ಷ ಲ| ರಾಮಕೃಷ್ಣ ರೈ, ರೋಟರಿ ಕ್ಲಬ್ ಅಧ್ಯಕ್ಷೆ ರೊ| ಯೋಗೀತಾ ಗೋಪಿನಾಥ್, ವಿಜಯಲಕ್ಷಿ ್ಮ ಅಶೋಕ್ ಪ್ರಭು ಸುಳ್ಯ, ಲ| ಡಿ.ಎಸ್‍ಗಿರೀಶ್, ರೊ| ಗಣೇಶ್ ಭಟ್, ಕುಸುಮಾಧರ ರೈ ಬೂಡು ವೇದಿಕೆಯಲ್ಲಿ ಉಪಸ್ಥಿತರಿದ್ದು ಸುಳ್ಯದ ಪ್ರೇಕ್ಷಕರ ಪರವಾಗಿ ರಾಷ್ಟ್ರ ಮಟ್ಟದ ಅದ್ಭುತ ಜಾದೂ ಕಲಾವಿದ ಮಾಯಾವಿ ಕುದ್ರೋಳಿ ಗಣೇಶ್ ಮತ್ತು ರಂಜಿತಾ ಗಣೇಶ್ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಿದರು.
ಸಂಯೋಜಕರಾದ ಪಿ.ಬಿ.ಸುಧಾಕರ ರೈ ಸ್ವಾಗತಿಸಿ, ಅಭಿನಂದನಾ ನುಡಿಗಳನ್ನಾಡಿ ವಂದಿಸಿದರು.