ಲೊರೆಟ್ಟೊ ಧರ್ಮಕೇಂದ್ರದ ಧರ್ಮಗುರುಗಳಾದ ವಂ ಫ್ರಾನ್ಸಿಸ್ ಕ್ರಾಸ್ತಾ ರವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸಿ ಜರುಗಿದ ಈ ಕಾರ್ಯಕ್ರಮವು, ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಸ್ತ್ರಿರೋಗ ತಜ್ಞೆಯಾದ ಡಾ| ಶಾರೊನ್ ರಸ್ಕಿನ್ಹಾ  ರವರು ಮಹಿಳೆಯರ ಆರೋಗ್ಯ ಸಮಸ್ಯೆಗಳು, ರೋಗಗಳಿದ್ದರೆ ತೆಗೆದುಕೊಳ್ಳಬೇಕಾದ ಚಿಕಿತ್ಸೆಗಳು ಸೇವಿಸಬೇಕಾದ ಆರೋಗ್ಯ ಪೂರ್ಣ ಆಹಾರ ಪದ್ಧತಿ,ಹೆರಿಗೆಯ ನಂತರ ಸಮಸ್ಯೆಗಳ ಮಾಹಿತಿ ಹಾಗೂ ಪರಿಹಾರೋಪಾಯಗಳನ್ನು ಸರಳವಾಗಿ ಅರ್ಥಪೂರ್ಣವಾಗಿ ವಿವರಿಸಿದರು.

ಧರ್ಮ ಗುರುಗಳು  ತಮ್ಮ ಸಂದೇಶದಲ್ಲಿ ಸಂಸಾರದಲ್ಲಿ ಮಹಿಳೆಯ ಪಾತ್ರ ಹಾಗೂ ಅವರ ಸಮಾಜಕ್ಕೆ ಅವರ ಪ್ರಾಮುಖ್ಯತೆಯನ್ನು ಪ್ರಾಸ್ತವಿಕ ಸಂದೇಶದಲ್ಲಿ ನುಡಿದರು ಇದೇ ಸಂದರ್ಭದಲ್ಲಿ ಇಬ್ಬರು ಉದ್ಯಮಿ ಮಹಿಳೆಯರನ್ನು ಸನ್ಮಾನಿಸಲಾಯಿತು. ಚರ್ಚಿನ ಮಹಿಳಾ ಆಯೋಗ ಶಿಕ್ಷಣ ಆಯೋಗ ಹಾಗೂ ಕಥೋಲಿಕ್ ಸಭಾದ ಮುಂದಾಳುತ್ವದಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ನೂರಾರು ಮಹಿಳೆಯರು ಇದರ ಸದುಪಯೋಗ ಪಡೆದರು.ಕಾರ್ಯಕ್ರಮದಲ್ಲಿ ಲೊರೆಟ್ಟೊಆಂಗ್ಲಮಾಧ್ಯಮ ಸಿಬಿಎಸ್ಸಿ ಶಾಲೆಯ ಮುಖ್ಯೋಪಾಧ್ಯಾಯರಾದ ವಂ| ಜೇಸನ್ ಮೋನಿಸ್ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಿಪ್ರಿಯಾನ್ ಡಿಸೋಜಾ, ಕಾರ್ಯದರ್ಶಿಯಾದ ಶೈಲಾ ಬರ್ಬೊಜಾ, ಸಂಯೋಜಕರಾದ ಪ್ರಕಾಶ್ ವಾಸ್, ನಿರ್ಮಲ ಕಾನ್ವೆಂಟಿನ ಸುಪೀರಿಯರ್ ಭಗಿನಿ ಇಡೊಲಿನ್ ರೊಡ್ರಿಗಸ್ ಥೊಲಿಕ್ ಸಭಾ ಅಧ್ಯಕ್ಷರಾಗಿರುವ ರಾಯನ್ ರೊಡ್ರಿಗಸ್ ಉಪಸ್ಥಿತರಿದ್ದರು.. ಮಹಿಳಾ ಆಯೋಗದ ಸಂಚಾಲಕಿಯಾದ ಸುನಿತಾ ಕ್ರಾಸ್ತಾ ಸ್ವಾಗತಿಸಿದರು,

ಶಿಕ್ಷಣ ಆಯೋಗದ ಸಂಯೋಜಕೀಯದ ನತಾಲಿಯಾ ಡಿಸಿಲ್ವ ಕಾರ್ಯಕ್ರಮ ನಿರ್ವಹಿಸಿದರು ಮರ್ಲಿನ್ ಮಾರ್ಟಿಸ್ ವಂದಿಸಿದರು.