ಮಂಗಳೂರು, ಜನವರಿ ,18:  18ರ ಪ್ರಾಯದವರಿಗೆ ನೇರವಾಗಿ ಮದ್ಯಪಾನ ಪೂರೈಸುವ ಯೋಜನೆಯನ್ನು ರಾಜ್ಯ ಬಿಜೆಪಿ ಸರಕಾರವು ತರಲಿರುವುದು ನಾವು ತೀವ್ರವಾಗಿ ಖಂಡಿಸುವುದಾಗಿ ಶಾಸಕ, ಮಾಜೀ ಸಚಿವ ಯು. ಟಿ. ಖಾದರ್ ಹೇಳಿದರು.

ಯುವಜನರಿಗೆ ಉದ್ಯೋಗ ಸೃಷ್ಟಿಸಲಾಗದ ಬಿಜೆಪಿಯು ತರುಣರಿಗೆ ಮುಕ್ತ ಮದ್ಯಪಾನ ಎಂದರೆ ಇದು ಸಮಾಜ ಮತ್ತು ಒಂದು ತಲೆಮಾರನ್ನು ಹಾಳು ಮಾಡುವ ಯೋಜನೆ. ಬಿಜೆಪಿಗೆ 40%ದವರೆಗೆ ಹಣ ಮಾಡುವುದು ಬಿಟ್ಟು ನಿಮಗೆ ಬೇರೆ ಗೊತ್ತಿಲ್ಲವೆ? ಇದು ಇಡೀ ದೇಶಕ್ಕೆ ಮಾರಕವಾಗಿದ್ದು ಯಾವ ತಾಯಿ ಕೂಡ ಒಪ್ಪುವುದಿಲ್ಲ ಎಂದು ಖಾದರ್ ಹೇಳಿದರು.

ನಾನಿದ್ದಾಗ ಗುಟ್ಕಾ ತಡೆ ಮಾಡಿದೆ. ಹುಡುಗರು ಹಾಳಾಗದಿರಲಿ ಎಂದು ಬಿಡಿ ಸಿಗರೆಟ್ ಮಾರಾಟ ಮಾಡದಂತೆ ಮಾಡಿದ್ದೆ. ನಮ್ಮ ಸರಕಾರವು ಶಾಲಾ ಸುತ್ತ ಇವನ್ನೆಲ್ಲ ಮಾರದಂತೆ, ಪ್ಯಾಕೆಟ್  ಮೇಲೆ ದೊಡ್ಡದಾಗಿ ಅಪಾಯದ ಎಚ್ಚರಿಕೆ ಮುದ್ರಿಸುವಂತೆ ಮಾಡಿದ್ದೆವು. ಒಂದು ಕಡೆ ಧರ್ಮಸ್ಥಳ ಮೊದಲಾದವರು ಮದ್ಯವರ್ಜನ ಶಿಬಿರ ನಡೆಸುವಾಗ ತರುಣರಿಗೆ ಮದ್ಯ ಕುಡಿಸುವ ಯೋಜನೆ ಖಂಡನೀಯ ಎಂದು ಯುಟಿಕೆ ಹೇಳಿದರು.

ನಾವು ಲಾಟರಿ ಬೇಡ ಎಂದರೆ ಇವರು ಅದನ್ನು ಮತ್ತೆ ಆರಂಭ ಎನ್ನುತ್ತಾರೆ. ಇದರ ವಿರುದ್ಧ ಜನ ಬಂಡೇಳುತ್ತದೆ. ಕಾಂಗ್ರೆಸ್ ಆ ಹೋರಾಟದಲ್ಲಿ ಮುಂದೆ ನಿಲ್ಲುತ್ತದೆ. ಸರಕಾರದ ಆದಾಯಕ್ಕೆ ಅಡ್ಡ ಹಾದಿ ಸರಿಯಲ್ಲ. ರಾಜ್ಯ ಸರಕಾರದ ಸಾಲವು 1.3 ಸಾವಿರ ಕೋಟಿ ಇದ್ದುದು ಬಿಜೆಪಿಯ ಈ ಅಲ್ಪಾವಧಿಯಲ್ಲಿ ರಾಜ್ಯ ಸರಕಾರದ ಸಾಲವು 2.6 ಸಾವಿರ ಕೋಟಿ ಸಾಲದ ಮಾಡಿದೆ. ಇವೆಲ್ಲ ಇಲ್ಲದೆ ಕಾಂಗ್ರೆಸ್ ಅಧಿಕಾರ ನಡೆಸಿಲ್ಲವೆ? ಬಿಜೆಪಿಗೆ ಆಳುವ ಯೋಗ್ಯತೆ ಇಲ್ಲ. ನಾವು ಟೆಂಡರ್ ನೀಡುವಾಗ ಅಂದಾಜಿನ 5% ಮೀರಲು ಬಿಟ್ಟಿಲ್ಲ. ಇವರದು‌ 25%ದವರೆಗೆ  ಅಧಿಕ ಕೂಡ ಟೆಂಡರ್ ಹೋಗುತ್ತಿದೆ. ಕಾಂಗ್ರೆಸ್ ಬಡವರಿಗೆ ಸ್ವಾಭಿಮಾನದ ಬದುಕು ನೀಡಲು ಶ್ರಮಿಸುವವರು. ಜನರ ನೆಮ್ಮದಿಗೆ ಬಿಜೆಪಿಯ ಯೋಜನೆಗಳೇ ಇಲ್ಲ ಎಂದು ಯು. ಟಿ. ಖಾದರ್ ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಡಿಕೆಪಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಸಾಹುಲ್ ಹಮೀದ್, ಸದಾಶಿವ ಉಲ್ಲಾಳ್, ಫಾರೂಕ್, ನವಾಜ್, ಅನೀಸ್, ಕಳ್ಳಿಗೆ ತಾರಾನಾಥ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.