ದೇರೆಬೈಲ್ ಕೊಂಚಾಡಿ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನಲ್ಲಿ ನೂರಾರು ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾಂಕ್ರಿಟೀಕರಣ ರಸ್ತೆ ಕುಸಿದು ಬಿದ್ದು, ಜನರಿಗೆ ಮನೆಯಿಂದ ಹೊರಗೆ ಬರಲು ಅಸಾಧ್ಯ ವಾದ ಪರಿಸ್ಥಿತಿ ಯಲ್ಲಿ ಇದೆ. ಈ ಬಗ್ಗೆ ಕೂಡಲೇ ದುರಸ್ಥಿಯನ್ನು ಕೈಗೊಳ್ಳದೇ ಇದ್ದಲ್ಲಿ ಅನೇಕ ಮನೆಗಳಿಗೆ ಅಪಾಯವಿರುದನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಾರಿಯವರಿಗೆ ಫೋನ್ ಮೂಲಕ ಸಂಪರ್ಕಿಸಿ, ಮಾಜಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಅಪಾಯ ಸ್ಥಿತಿಯಲ್ಲಿರುವ ಮನೆಮಂದಿಯವವರ ಜೊತೆ ಮಾತನಾಡಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ನಾಯಕರು ಆದ ನೀತ್ ಚರಣ್, ಸತೀಶ್ ಅಮೀನ್, ರಾಮಚಂದ್ರ ಪಂಜ, ಸುರೇಶ್ ಶೆಟ್ಟಿ, ಶ್ರೀದರ ಪಂಜ, ಶೈಲ ಡಿ ಸೋಜ, ಶ್ರೀ ಜಲ, ಶಶಿಧರ ಲ್ಯಾಂಡ್ ಲಿಂಕ್ಸ್, ಅಲಿಸ್ಟನ್, ಪಿಯೂಸ್ ಮೊಂಥೆರೋ ಉಪಸ್ಥಿತಿ ಇದ್ದರು.