ಮಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅನೈತಿಕ ಪೋಲೀಸ್‌ಗಿರಿಯನ್ನು ಬೆಂಬಲಿಸಿ ಮಾತನಾಡಿರುವುದು ತಾಲಿಬಾನ್ ನಾಯಕರ ಹೇಳಿಕೆಯಂತಿದೆ ಎಂದು ಕೆಪಿಸಿಸಿ ಇಂದು ಟ್ವೀಟ್ ಸಮರ ಸಾರಿದೆ.

ಮುಖ್ಯಮಂತ್ರಿಗಳ ಹೇಳಿಕೆಯಿಂದ ಸಮಾಜ ಘಾತುಕ ಗೂಂಡಾಗಳಿಗೆ ಸರಕಾರವೇ ನಮ್ಮ ಜೊತೆಗೆ ಇದೆ ಎಂಬ ಭಾವನೆ ಬಂದಿದೆ. ಅನೈತಿಕ ಪೋಲೀಸ್‌ಗಿರಿಗೆ ಒಳಗಾದವರ ಸ್ಥೈರ್ಯ ಗೆಡಿಸುವ ಉದ್ದೇಶಪೂರ್ವಕ ಮಾತಿದು. ಸಮಾಜ ಕಂಟಕರನ್ನು ಮುಖ್ಯಮಂತ್ರಿ ಬೆಂಬಲಿಸಿದ್ದು ಸರಿಯಲ್ಲ. ಬಿಜೆಪಿ ಸರಕಾರ ಮತ್ತೆ ಬತ್ತಲೆ ಸೇವೆ, ದೇವದಾಸಿ ಪದ್ಧತಿಯನ್ನೆಲ್ಲ ಬೆಂಬಲಿಸುತ್ತದೆಯೇ ಎಂದು ಸರಣಿ ಟ್ವೀಟ್ ಮೂಲಕ ಟೀಕಿಸಲಾಗಿದೆ.