ಮೈಸೂರು ಟಾಂಗಾ ಎಂದೇ ಖ್ಯಾತಿ ಪಡೆದಿದ್ದ ಕುದುರೆ ಗಾಡಿ ಸವಾರಿ ಹಿಂದೆಲ್ಲ ದಸರಾ ಕಾಲದಲ್ಲಿ ಜನರ ಬದುಕಿನ ಭಾಗವಾಗಿತ್ತು ಎಂಬುದನ್ನು ನೆನಪಿಸಲು ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿ ಎಸ್. ಟಿ. ಸೋಮಶೇಖರ್ ಅವರು ನಗರದಲ್ಲಿ ಟಾಂಗಾದಲ್ಲಿ ಓಡಾಡಿದರು.
ಹಿಂದಿನ ಕಾಲದಲ್ಲಿ ಜನರ ಸಾರಿಗೆ ವ್ಯವಸ್ಥೆಯ ಮತ್ತು ನವರಾತ್ರಿ ದಸರಾ ಕಾಲದ ಜನ ಸಾರಿಗೆ ಇದಾಗಿತ್ತು. ಹೊರ ಊರಿನಿಂದ ಬಂದವರು ಟಾಂಗಾದಲ್ಲಿ ಮೈಸೂರು ಸುತ್ತಿ ನೋಡುವುದು ಸಹ ಸಹಜವಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಚರ ಟಾಂಗಾ ಮರೆಯುವಂತಿಲ್ಲ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.