ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಹೊರಬರುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಒಳಮಾತಿನ ಮೂಲಕ ಅನೈತಿಕ ಪೋಲೀಸ್‌ಗಿರಿಯನ್ನು ಬೆಂಬಲಿಸಿದರು.

ಪತ್ರಕರ್ತರ ಜೊತೆಗೆ ಮಾತನಾಡುತ್ತ ಇದೆಲ್ಲ ಆಗಬಾರದಿತ್ತು. ಅನೈತಿಕ ಪೋಲೀಸ್‌ಗಿರಿ ತಡೆಯಲಾಗುವುದು ಎಂದರು.

ಆದರೆ ಮೂಡಬಿದಿರೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರು ಅನೈತಿಕ ಪೋಲೀಸ್‌ಗಿರಿಯಲ್ಲಿ ಬಂಧಿತರಾದವರನ್ನು ಸ್ವಾಗತಿಸಿ ಕರೆತಂದರು ಎಂಬ ಮಾತು ಬಂದಾಗ ಬೊಮ್ಮಾಯಿಯವರ ವರಸೆ ಬದಲಾಯಿತು.

ಆ್ಯಕ್ಷನ್‌ಗೆ ರಿಯಾಕ್ಷನ್ ಎಂದು ಸೂಚ್ಯವಾಗಿ ಅನೈತಿಕ ಪೋಲೀಸ್‌ಗಿರಿಯನ್ನು ಮುಖ್ಯಮಂತ್ರಿ ಬೊಮ್ಮಾಯಿಯವರು ಬೆಂಬಲಿಸಿದರು.

ಸಚಿವ ಸುನೀಲ್ ಕುಮಾರ್, ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕರಾದ ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ ಮೊದಲಾದವರು ಜೊತೆಗಿದ್ದರು.