ಪಿ. ಎಂ. ಕೇರ್ಸ್ ವೆಬ್ ಸೈಟ್ ಮಾಹಿತಿಯಂತೆ 28-3-2020ರಿಂದ 31-3-2020ರ ನಡುವೆ 3,000 ಕೋಟಿ ರೂಪಾಯಿ ಸಂಗ್ರಹವಾಗಿದೆ. ಸಂಗ್ರಹವಾದ ಕೋಟಿಗಳು ಎಲ್ಲಿಗೆ ಹೋಗುತ್ತಿವೆ ಎಂದು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಎಂ. ಬಿ. ಲೋಕೂರ್ ಪ್ರಶ್ನಿಸಿದರು.
ದೆಹಲಿಯಲ್ಲಿ ನ್ಯಾಶನಲ್ ಕ್ಯಾಂಪೇನ್ ಫಾರ್ ರೈಟ್ ಟು ಇನ್ಫಾರ್ಮೇಶನ್ ಅವರು ಮಾಹಿತಿ ಹಕ್ಕು ಕಾಯ್ದೆಯ 16 ವರುಷಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾಹಿತಿ ಹಕ್ಕು ಕಾಯ್ದೆ ಈಗಿನ ಸರಕಾರದಡಿ ಬುಡಮೇಲು ಆಗುತ್ತಿದೆ. ಮಾಹಿತಿ ಹಕ್ಕಿನಡಿ ಪಿ. ಎಂ. ಕೇರ್ಸ್‌ನ ಮಾಹಿತಿ ಕೊರತೆ ಇದಕ್ಕೆ ಉದಾಹರಣೆ. ದೀಪದಡಿ ಕತ್ತಲೆ ಆದರೆ ಹೇಗೆ ಎಂದು ಜಸ್ಟಿಸ್ ಕೇಳಿದರು.