ಜೈನ ಕಾಶಿ ಮೂಡುಬಿದಿರೆಯಲ್ಲಿ ಜೀವದಯಾ ಅಷ್ಟಮಿ ಪ್ರಯುಕ್ತ ಇಂದು 13.10.2021ರಂದು ಬೆಳಿಗ್ಗೆ 5.45 ರಿಂದ ಮೂಡುಬಿದಿರೆ ಶ್ರೀ ಗಳವರು 18 ಬಸದಿ ದರ್ಶನ ಮಾಡಿದರು.

108 ದಿವ್ಯ ಸಾಗರ ಮುನಿ ರಾಜರು ಆಶೀರ್ವಾದ ನೀಡಿ ದರು ಬೆಳಿಗ್ಗೆ11.00 ಕ್ಕೆ13.10.21 ರಂದು ಶ್ರೀ ಜೈನ ಮಠ ದಲ್ಲಿ ಜೈನ ಧರ್ಮ ಸಾರ ಪುಸ್ತಕ ಬೆಟ್ಕೇರಿ ದಿನೇಶ್ ಕುಮಾರ್ ಮುಕ್ತೇಸರರು ಧವಳತ್ರಯ ಜೈನ ಕಾಶಿ ಟ್ರಸ್ಟ್(ರಿ ) ವತಿಯಿಂದ ಪ್ರಕಾಶ ಪಡಿಸಿ ಜಗದ್ಗುರು ಸ್ವಸ್ತಿಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಬಿಡುಗಡೆ ಗೊಳಿಸಿ ಸಕಲ ಜೀವ ರಾಶಿ ಗಳ ಬಗ್ಗೆ ದಯೆ ಅನುಕಂಪ ತೋರಿಸುವ ಧರ್ಮ ಜಗತ್ತಿನ ಶ್ರೇಷ್ಠ ಧರ್ಮ ದ್ರವ್ಯ ಹಿಂಸೆ,ಪಾಪ ವಾಗಿದ್ದು ಭಾವ ಹಿಂಸೆ ಯೊ ಜೀವಿ   ಭವ ಚಕ್ರ ದಲ್ಲಿ ದುಃಖ್ಖ ವನ್ನು ಪಡೆಯ ಬೇಕಾಗುತ್ತದೆ ಎಂಬುದು ಸಂಕಲ್ಪ ಹಿಂಸೆ ಯಿಂದ ಹಿಟ್ಟಿನ ಹುಂಜ ಬಲಿ ನೀಡಿ ಭವ ಭವಗಳಲ್ಲಿ ಪಾಪದ ಫಲದಿಂದ ಅಭಯ ರುಚಿ ಅಭಯ ದತ್ತ ದುಃಖ್ಖ ಪಟ್ಟು ಕೊನೆ ಗೆ ಮಾರಿ ದತ್ತನ ಮನ ಪರಿವರ್ತನೆಯಿಂದ ಉತ್ತಮ ಗತಿ ಪ್ರಾಪ್ತಿಸಿ ಕೊಂಡ ಜನ್ನ ನ ಯಶೋಧರ ಚರಿತ್ರೆ ಕಥೆ ಅತ್ಯಂತ ಪ್ರಸ್ತುತ ವಾಗಿದ್ದು ಮೂಕ ಪಶು ಪಕ್ಷಿ ಪ್ರಾಣಿ ಗಳ ಬಗ್ಗೆ ದಯೆ ಅನುಕಂಪ ತೋರೋಣ ಎಂದು ನುಡಿದರು

ಗುರು ಬಸದಿ ಲೆಪ್ಪದ ಬಸದಿ, ಸಾವಿರ ಕಂಬದ ಬಸದಿ ಶ್ರೀ ಜೈನ ಮಠದಲ್ಲಿ ವಿಶೇಷ ಪೂಜೆ ಅಭಿಷೇಕ ನೆರವೇರಿತು.

ದೆಹಲಿ ಎಲ್ ಪಿ ಜಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅನುಜ್ ಜೈನ್, ಕರ್ನಾಟಕ ಹೈ ಕೋರ್ಟ್ ನ್ಯಾಯದೀಶ ಅರುಣ್ ಜೈನ್, ಶ್ರೀಮತಿ ಲಕ್ಷೀ, ಮೂಡಬಿದ್ರಿ ಕೋರ್ಟ್, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮಧ್ಯ ಪ್ರದೇಶ, ಗುಜರಾತ್ ರಾಜಸ್ಥಾನ್ ಯಾತ್ರಿಕರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಶ್ರಾವಕ ಶ್ರಾವಿಕೆ ಯರು 18 ಬಸದಿ ದರ್ಶನ ಮಾಡಿದರು.

ಶ್ರೀ ಜೈನ ಮಠ ದ ವತಿಯಿಂದ ಸಾಮೂಹಿಕ ಅನ್ನ ದಾನ ನೆರವೇರಿತು ಮಾಜಿ ಸಚಿವ ಶ್ರೀ ಅಭಯ ಚಂದ್ರ ಜೈನ್, ಪಟ್ಣ ಶೆಟ್ಟಿ ಸುದೇಶ್, ಆದರ್ಶ್ ಮುಕ್ತೇಸರ ರು ಅಭಿಜಿತ್, ಯಂ, ಸಂಜಯಂಥ ಕುಮಾರ್,ಬಾಹುಬಲಿ ಪ್ರಸಾದ್  ,ಮಹಾವೀರ್ ಜೈನ್, ಪ್ರೇಮ್ ಕುಮಾರ್, ಶ್ರೀ ನಾಥ್ ಬಲ್ಲಾಳ್,ನೇಮಿರಾಜ್ಧ ನಕೀರ್ತಿ ಬಲಿಪ, ಉಪಸ್ಥಿತರಿದ್ದರು.