ಮೂಡುಬಿದಿರೆ: ಜೈನಕಾಶಿ ಮೂಡುಬಿದಿರೆಯಲ್ಲಿ ವಿಜಯ ದಶಮಿ ಪ್ರಯುಕ್ತ ಬೆಟ್ಕೇರಿ ಬಳಿಯ ಕಟ್ಟೆಯಿಂದ ಬೆಳಿಗ್ಗೆ 7.00 ಗಂಟೆಗೆ ಕದಿರು ತಂದು ಶ್ರೀ ಮಠದಲ್ಲಿ 108 ದಿವ್ಯ ಸಾಗರ ಮುನಿರಾಜರ ಹಾಗೂ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಗಳವರ ಉಪಸ್ಥಿತಿಯಲ್ಲಿ 15.10.21ರಂದು ಗುರು ಬಸದಿ ಅರ್ಚಕರು ಹಾಗೂ ಶ್ರೀ ಮಠದ ಪಟ್ಟದ ಪುರೋಹಿತರು ಭಗವಾನ್ 1008 ಪಾರ್ಶ್ವ ನಾಥ ಸ್ವಾಮಿ ವಿಶೇಷ ಅಭಿಷೇಕ ಪಟ್ಟದ ಕುಲ ದೇವಿ ಕೂಶ್ಮಾ0ಡಿನಿ ಯಕ್ಷಿ ಶೋಡೋಶೋಪಚಾರ ಪೂಜೆ ತಟ್ಟೆಯಲ್ಲಿ ತಲೆ ಮೇಲೆ ಹೊತ್ತು ತಂದ ಕದಿರು ವಿನ ಧಾನ್ಯ ಲಕ್ಷ್ಮಿ ಪೂಜೆ, ಭೂಮಿ ಪೂಜೆ ದಿಕ್ಪಾಲ ಪೂಜೆ, ಗ್ರಹ, ವಾಸ್ತು ತಿಥಿ ಪಂಚ ಕುಮಾರ ಪೂಜೆ ನೆರ ವೇರಿಸಿ ಮಹಾ ಮಂಗಳಾರತಿ ಬೆಳಗಿದರು ತದನಂತರ ಶ್ರೀ ಮಠದ ವತಿಯಿಂದ 18 ಬಸದಿ ದೇವ ಕಾರ್ಯ ನೆರವೇರಿತು ಶ್ರೀ ಗಳವರು ಅರ್ಚಕರಿಗೆ ಅಕ್ಕಿ,ಬೆಲ್ಲ, ತೆಂಗಿನ ಕಾಯಿ ಫಲವಸ್ತು, ಶಾಸ್ತ್ರ ದಾನ,ಧಕ್ಷಿಣೆ ನೀಡಿದರು.
ಆಶೀರ್ವಾದ ಮಾಡಿ ಸ್ವಾಮೀಜಿ ಗಳವರು ಆಡಳಿತ ದಲ್ಲಿ ದಕ್ಷತೆ, ಚಾರಿತ್ರ ಸಂಪನ್ನತೆ ಲೋಕ ಕಲ್ಯಾಣ ಭಾವನೆ ಯಿಂದ ಭಗವಾನ್ ಅದಿನಾಥರ ಕಾಲದಲ್ಲಿ ಭರತ ಚಕ್ರವರ್ತಿ ಆಯುಧ ಪೂಜೆ ಯಂದು ಜಿನ ಪೂಜೆ ಬಳಿಕ ಚಕ್ರ ರತ್ನ ಪೂಜಿಸಿವಿಜಯ ದಶಮಿ ಯಂದು ಜಿನ ಪೂಜೆ ಸಿಂಹಾಸನ ಪೂಜೆ ನೆರವೇರಿಸಿ ದನ ದಾನ್ಯ ಸಮೃದ್ಧಿಗಾಗಿ ಲೋಕ ಶಾಂತಿ ಗಾಗಿ ಪ್ರಾರ್ಥಿಸುತ್ತಿದ್ದರು ಪರಂಪರೆ ಯಂತೆ ಶ್ರೀ ಮಠ ಗುರು ಬಸದಿಯಲ್ಲಿ ಪೂರ್ವಚಾರ್ಯ ರಿಗೆ ವಂದಿಸಿ ಚಂದನ ಪೀಠ ಸಿಂಹಾಸನ ಚೋಳ ಶೆಟ್ಟಿ ಕಟ್ಟಿಸಿದ ಶಿಲಾ ರತ್ನ ಪೀಠ ಪೂಜೆ ನೆರವೇರಿಸಿ ಭಕ್ತ ವ್ರoದದ ಸರ್ವರಿಗೂ ಹರಸಿದರು ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್ ಬಸದಿ ಮುಕ್ತೇಸರ ರು ಉಪಸ್ಥಿತರಿದ್ದರು.
ಸೇರಿದ ಎಲ್ಲಾ ಭಕ್ತರಿಗೆ ಸ್ವಚ್ಚ ಭಾರತ ಜಾಗೃತಿ ಬಗ್ಗೆ ತಿಳಿಸಿ ಮೂಡು ಬಿದಿರೆ ಜೈನ ಪೇಟೆ ಯ ಎಲ್ಲಾ ಬಸದಿ ಶ್ರದ್ದಾ ಕೇಂದ್ರ ಗಳ ಸಮೀಪ ಕಸ ವಿಲೇವಾರಿ ಚಿಕ್ಕ ಚಿಕ್ಕ ಘಟಕ ಮಾಡಿ ಸಹಕರಿಸಲು ತಿಳಿಸ ಲಾಯಿತು ಪುರಸಭಾ ವತಿಯಿಂದ ಕು ಸುಹಾಸಿನಿ, ಜೈನ ಪೇಟೆ ವಾರ್ಡ್ ಸದಸ್ಯೆ ಶ್ರೀಮತಿ ಶ್ವೇತಾಅಲ್ಲಿ ಸೇರಿದ ಬಸದಿ ಅರ್ಚಕರಿಗೆ ಶ್ರಾವಕರಿಗೆ ಕಸ ವಿಲೇವಾರಿ ತಿಳುವಳಿಕೆ ಮಾಡಿಸಿ ದರು ಸಂಜೆ ಸಾವಿರ ಕಂಬ ಬಸದಿ ಯಲ್ಲಿ ಶ್ರೀ ಜೈನ ಮಠ ದ ಸ್ವಾಮೀಜಿ ಗಳವರ ವತಿಯಿಂದ ವಿಶೇಷ ಪಂಚಾಮೃತ ಅಭಿಷೇಕ ನೆರವೇರಿತು, ಸಂಜಯಂಥ ಕುಮಾರ್ ಶೆಟ್ಟಿ, ಡಾ ಮಹಾವೀರ ಮೂಡುಬಿದಿರೆ ತುಮಕೂರು ರಾಜೇಂದ್ರ,ಪುನೀತ್ ಮುಂಬೈ ಮುನಿ ರಾಜ್, ಹಿರಿಯ ಅರ್ಚಕ ಜಗತ್ಪಾಲ ಇಂದ್ರ ಮೊದಲಾದ ವರು ಉಪಸ್ಥಿತರಿದ್ದರು