ಆರೆಸ್ಸೆಸ್‌ನಿಂದ ದೇಶದ ಆಂತರಿಕ ಭದ್ರತೆಗೆ ಅಪಾಯವಿದೆ. ಅವರು ಅಡಗಿಸಿಟ್ಟುಕೊಂಡ ಕಾರ್ಯಕ್ರಮಗಳ ಜನ ಎಂದು ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ಮುಂದೆ ಮತ್ತೆ ಸಮ್ಮಿಶ್ರ ಸರಕಾರದ ಸ್ಥಿತಿ ಉಂಟಾದರೂ ಆರೆಸ್ಸೆಸ್‌ನ ರಾಜಕೀಯ ಮುಖ ಬಿಜೆಪಿ ಜೊತೆಗೆ ಸೇರುವುದಿಲ್ಲವೆ? ಮುಂದೆ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದ ಸ್ಥಿತಿ ಉಂಟಾದಲ್ಲಿ ನಾನು ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಮಾಜೀ ಮುಖ್ಯಮಂತ್ರಿ ಸಂದರ್ಶನವೊಂದರಲ್ಲಿ ಸ್ಪಷ್ಟವಾಗಿ ಹೇಳಿದರು. ಸಮಾಜ ಮತ್ತು ರಾಜಕೀಯದ ನ್ಯೂನತೆ ಸರಿಪಡಿಸುವ ಮಾಧ್ಯಮಗಳ ಅಗತ್ಯವಿದೆ ಎಂದೂ ಕುಮಾರಸ್ವಾಮಿ ಅವರು ತಿಳಿಸಿದರು.