ಕಾರ್ಕಳ: ಕಾರ್ಕಳ ಬಂಟರ ಯಾನೆ ನಾಡವರ ಸಂಘ (ರಿ.) ಮಂಗಳೂರು, ಕಾರ್ಕಳ, ಹೆಬ್ರಿ ತಾಲೂಕು ಸಮಿತಿ, ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘ ಹಾಗೂ  ಯುವ ಬಂಟರ ಸಂಘ ಕಾರ್ಕಳ ಇದರ ಸಹ ಭಾಗಿತ್ವದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಲಿರುವುದು.

ಮಂಗಳೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿ ಎ ಅಶೋಕ್ ಶೆಟ್ಟಿ ಎಂ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ  ಸಾಧಕರನ್ನು ಸನ್ಮಾನಿಸಲಿದ್ದು,  ಎಸ್ ಎಸ್ ಎಲ್ ಸಿ, ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು  ಶೇ. 90ರ ಮೇಲೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ  ಮತ್ತು 10ನೆ ನೇ ರ್ಯಾಂಕ್  ಒಳಗೆ ಬಂದ ವಿದ್ಯಾರ್ಥಿಗಳಿಗೆ ವಿಶೇಷ ರೀತಿಯಲ್ಲಿ ಸನ್ಮಾನಿಸಲಾಗುದು.

ಈ ಕುರಿತು ಕಾರ್ಕಳದ ಪ್ರಕಾಶ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹೆಬ್ರಿಯ ಬಂಟರ ಸಂಘದ ಸಂಚಾಲಕ ವಿಜಯ ಶೆಟ್ಟಿ ತಿಳಿಸಿದ್ದಾರೆ.

ಬಂಟರ ಯಾನೆ ನಾಡವರ ಸಂಘದ ಸಂಚಾಲಕ ವಿಜಯ ಶೆಟ್ಟಿ ,  ಬಂಟ ಮಹಿಳಾ ಸಂಘದ ಅಧ್ಯಕ್ಷೆ ಪೂರ್ಣಿಮಾ ಎನ್ ಹೆಗ್ಡೆ, ಯುವ ಬಂಟರ  ಸಂಘದ ಅವಿನಾಶ್ ಜಿ ಶೆಟ್ಟಿ, ಸದಸ್ಯರಾದ ಕುಕ್ಕುಂದೂರ್ ರವಿ ಶೆಟ್ಟಿ, ಪ್ರಶಾಂತ  ಶೆಟ್ಟಿ, ನ್ಯಾಯವಾದಿ ಸುನಿಲ್ ಶೆಟ್ಟಿ ಪುರಸಭಾ ನಿವೃತ್ತ  ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಶುಭ ಕಡಂಬ ಮೊದಲಾದವರು ಉಪಸ್ಥಿತರಿದ್ದರು.