ಕಾರ್ಕಳ: ಅ 25: ಎಂ.ಕೆ ವಿಜಯ ಕುಮಾರ್ ಅವರು ಸಿದ್ದಾಂತದ ಪ್ರತಿಪಾದಕ, ಲವಲವಿಕೆಯ ನಾಯಕ, ಪ್ರತೀ ಕ್ಷಣವೂ ಜನರನ್ನು ನಗಿಸಿದ ಹಿರಿಯ ಚೇತನ ಇನ್ನಿಲ್ಲ ಎನ್ನುವುದು ಅತ್ಯಂತ ದುಃಖದ ಸಂಗತಿಯಾಗಿದೆ. ಹಿರಿಯ ಚೇತನಕ್ಕೆ ಎಲ್ಲರೂ ಅರ್ಹರಾಗಲು ಸಾಧ್ಯವಿಲ್ಲ ಆದರೆ ವಿಜಯ ಕುಮಾರ್ ಅವರ ನಡೆ ನುಡಿ ನಮಗೆಲ್ಲ ಆದರ್ಶವಾಗಿ ಅವರು ಈ ಸಮಾಜಕ್ಕೆ ನೀಡಿದ ಕೊಡುಗೆಯ ಫಲವಾಗಿ ಹಿರಿಯ ಚೇತನರಾಗಿದ್ದಾರೆ. ಪಕ್ಷದ ಗೆಲುವಿನಲ್ಲಿ ಸದಾ ಸಂಭ್ರಮಿಸಿದವರು. ಪಕ್ಷ ಸಂಘಟನೆಯಲ್ಲಿ ಇವರ ಕೊಡುಗೆ ಅಪಾರವಾದದ್ದು ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.

ಕಾರ್ಕಳ ಬಿಜೆಪಿ ಮಂಡಳಿಯ ವತಿಯಿಂದ ಮಂಜುನಾಥ ಪೈ ಸಭಾಂಗಣದಲ್ಲಿ ಶನಿವಾರ ನಡೆದ ರಾಜಕೀಯ ಮುತ್ಸದಿ, ಹಿರಿಯ ನ್ಯಾಯವಾದಿ, ಸಾಮಾಜಿಕ ಚಿಂತಕ ದಿ| ಎಂ.ಕೆ ವಿಜಯ ಕುಮಾರ್ ಅವರ ನುಡಿ ನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಇಡೀ ಭಾರತೀಯ ಜನತಾ ಪಾರ್ಟಿಗೆ ಚೈತನ್ಯ ತುಂಬಿದವರು. ನಾನು ಅಭ್ಯಾರ್ಥಿಯಾಗಿ ಸ್ಪರ್ಧಿಸಿದ ಸಂದರ್ಭದಲ್ಲಿ ನನ್ನ ಗೆಲುವಿಗಾಗಿ ಸದಾ ಶ್ರಮಿಸಿದವರು. ನ್ಯಾಯವಾದಿಯಾಗಿ, ಸಮಾಜದ ಚಿಂತಕರಾಗಿ, ರಾಜಕೀಯವಾಗಿಯೂ ಸಾಕಷ್ಟು ಕೆಲಸ ಕಾರ್ಯವನ್ನು ಮಾಡುವ ಮೂಲಕ ಸಮಾಜದಲ್ಲಿ ಓರ್ವ ಮಾದರಿ ವ್ಯಕ್ತಿಯಾಗಿ ಗುರುತಿಸಿಕೊಂಡವರು. ಇಳಿವಯಸ್ಸಿನಲ್ಲಿಯೂ ಪಕ್ಷದ ಯಶಸ್ಸಿಗಾಗಿ ಸದಾ ಶ್ರಮಿಸಿದವರು ಅವರ ನಡೆ ನುಡಿ ನಮಗೆಲ್ಲ ಆದರ್ಶವಾಗಿದೆ ಎಂದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ನನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿರುವುದು ವಿಜಯ ಕುಮಾರ ಅವರು. ಮೊದಲ ಬಾರಿಗೆ ದೆಹಲಿಗೆ ಅರವ ಜೊತೆಯಲ್ಲೇ ತೆರಲಿದ್ದೆ, ಯಾರು ಇಲ್ಲದ ಕಷ್ಟದ ದಿನಗಳಲ್ಲಿ ಸಂಘದ ಕಾರ್ಯಕರ್ತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೋಡಿಕೊಂಡ ಕುಟುಂಬ ಅವರದ್ದು, ಅಂತಹ ಪುಣ್ಯಾತ್ಮನನ್ನು ಕಳೆದುಕೊಂಡಿರುವುದು ಪಕ್ಷ ಹಾಗೂ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಮಾತನಾಡಿ ಅವರು ಹೋರಾಟಗಾರರು ಕಾನೂನು ಸಲಹೆಗಾರರಾಗಿ ಮಾರ್ಗದರ್ಶನ ಮಾಡಿಲ್ಲ. ಸಂಘಟಕರಾಗಿಯೂ ಗುರುತಿಸಿಕೊಂಡವರು. ಭಾರತೀಯ ಜನತಾ ಪಾರ್ಟಿಗೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಉಡುಪಿ ಶಾಸಕ ಯಶಪಲ್ ಸುವರ್ಣ, ಹಿರಿಯ ಬಿಜೆಪಿ ಮುಖಂಡ ಬೋಳ ಪ್ರಭಾಕರ್ ಕಾಮತ್, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಕರ್ ಹೆಗ್ಡೆ, ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಅಂಡಾರು ಮಹಾವೀರ ಹೆಗ್ಡೆ, ರಾಮಚಂದ್ರ ನಾಯಕ್, ಸುನಿಲ್ ಕುಮಾರ್ ಶೆಟ್ಟಿ, ಸುವೃತ್ ಕುಮಾರ್, ವಿಫುಲ್ ಕುಮಾರ್, ಬೇಲಾಡಿ ವಿಠ್ಠಲ ಶೆಟ್ಟಿ, ರಾಮ್ ಭಟ್, ಶ್ಯಾಮಲಾ ಕುಂದರ್, ಮಾಜಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ಮಂಡಲ ಕಾರ್ಯದರ್ಶಿ ಬೋಳ ಸತೀಶ್ ಪೂಜಾರಿ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ನುಡಿ ನಮನವನ್ನು ಸಲ್ಲಿಸಿದರು. ಮಂಡಲ ಅಧ್ಯಕ್ಷ ನವೀನ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.