ಕಾರ್ಕಳ, ಮೇ 15: ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ (CSEET) ರವರು 03 ಮೇ, 2025 ರಲ್ಲಿ ನಡೆಸಿದ CSEET ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಮಿಥುನಶ್ರೀ 164 ಮತ್ತು ಸುವರ್ಣ ಹರ್ಷಲ್ ವೈ 162 ಅಂಕಗಳೊಂದಿಗೆ ವಿಶಿಷ್ಟ ಸಾಧನೆಗೈದಿದ್ದಾರೆ. 

ವಿದ್ಯಾರ್ಥಿಗಳಾದ ಹಾರಿಕ ಗೌಡ ಆರ್. ಬಿ. (153), ಇಯಾನ್ ಪೌಲ್ (147), ಬಸವ ಪ್ರಸಾದ್ ಕಾಜಿ (142), ಪೂರ್ಣ ಭಟ್ ಕೆ.ಎಲ್ (141), ಸೃಜನ್ ಎಸ್.ಭಟ್ (140), ಲಿಖಿತ್ ರೆಡ್ಡಿ ಎಚ್.ಎಂ (140), ರಕ್ಷಿತಾ ಆರ್.ಕಾಮತ್ (135), ರೇಷ್ಮಾ ಜಿ.ಕೆ. (135) ಅಭಿಷೇಕ್ ಉಮಾದಿ (131), ಕೀರ್ತಿ ಪೈ(129), ಶ್ರದ್ಧಾ ಪಿ.ಅಂಗಡಿ (125), ಎಚ್.ಎ ಅದನ್ ಬೆಳ್ಳಿಯಪ್ಪ (125), ಪ್ರಭವ್ ಜಿ. ಶೆಟ್ಟಿ (121), ಆರ್ಯ ಬಿ.ವಿ (120), ಅಪ್ಸರ್ ಪಾಹಿಮ್ (120), ಧನ್ಯಶ್ರೀ ಶೆಟ್ಟಿ (119), ಸೌರವ್ ರವಿ ಶೇಟ್ (116), ಪೃಥ್ವಿ ಜಾಜಿ (115), ಸಾತ್ವಿಕ್ ಯು.ಆರ್(114), ಕನಿಷ್ಕ ಸೇನ್ ಎಸ್ (113), ಸಪಲಿಗ ಸ್ವಾತಿ ತಿಮ್ಮಪ್ಪ (111), ಶ್ರೀಕಾರ್ ದುಬೀರ (111), ವಜ್ರ ಗೌಡ (110), ಶ್ರೇಯಸ್ ವಿ.ರೆಡ್ಡಿ (110), ಅನನ್ಯ ರಾಜೇಶ್ (109, ಬಿಪಿನ್ ಗೌಡ (108), ಎಸ್. ನಂದನ್ (106), ವಿ.ಎಸ್. ವೈಭವ್ (105), ಕೆ.ವೈ ದಿಲೀಪ್ (103), ಆಡ್ಲಿನ್ ಥೋಮಸ್ (102), ಮೆಲಿಶ ಶೈನಿ ಪೆರ್ನಾಂಡಿಸ್ (102), ತೇಜಸ್ ದೀಪಕ್ ಭಟ್ (101), ವೇದಿಕ ವಸಂತ್ ಶೆಟ್ಟಿ (100), ಪ್ರೀತಮ್.ಎಸ್ (100), ಪೂರ್ಣೇಶ್ (100), ಗೌತಮ್ ಗಾಯಕವಾಡ (100), ಪ್ರೀತಮ್ ಉದಯ್ ಹೆಗ್ಡೆ (100), ಪ್ರಥಮ್ ವಿ. ಶೆಟ್ಟಿ (100), ರವಿ ತೇಜಸ್ ಆರ್.ಗಳಗಲಿ(100), ಸುಹಾಶ್ ಡಿ. (100) ರವರು ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. 

ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಪರೀಕ್ಷೆ ಇದಾಗಿದ್ದು ಪರೀಕ್ಷೆ ಬರೆದ ಕ್ರಿಯೇಟಿವ್‌ನ 52 ವಿದ್ಯಾರ್ಥಿಗಳಲ್ಲಿ 42 ವಿದ್ಯಾರ್ಥಿಗಳು ಪಿಯುಸಿಯ ಮೊದಲ ಹಂತದಲ್ಲೇ ತೇರ್ಗಡೆ ಹೊಂದಿರುವುದು ವಿಶೇಷವಾಗಿದೆ. ಪ್ರತೀ ವರ್ಷವೂ ಸಂಸ್ಥೆಯ ಅತೀ ಹೆಚ್ಚು ವಿದ್ಯಾರ್ಥಿಗಳು ಸಿ.ಎ ಫೌಂಡೇಶನ್ ಹಾಗೂ CSEET ಯಲ್ಲಿ ತೇರ್ಗಡೆಯಾಗುತ್ತಿರುವುದು ಕ್ರಿಯೇಟಿವ್‌ನ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, CSEET ಸಂಯೋಜಕರಾದ ಜ್ಞಾನೇಶ್ ಕೋಟ್ಯಾನ್, ಬೋಧಕ - ಬೋಧಕೇತರ ವೃಂದದವರು ಅಭಿನಂದಿಸಿ, ಶುಭಹಾರೈಸಿದ್ದಾರೆ.