ಕಾರ್ಕಳ: ಜಯ ಕರ್ನಾಟಕ ಜನಪರ ವೇದಿಕೆ ಆಟೋರಿಕ್ಷಾ ಚಾಲಕ ಮಾಲಕರ ಸಂಘ ಕಾರ್ಕಳ ತಾಲೂಕು ಇದರ ವಾರ್ಷಿಕ ಮಹಾಸಭೆಯು ಅಕ್ಟೋಬರ್ 2  ಗಾಂಧಿ ಜಯಂತಿಯಂದು ಶ್ರೀ ಕೃಷ್ಣ ಸಮುದಾಯ ಭವನದಲ್ಲಿ ನಡೆಸಲಾಯಿತು.

ಈ ಸಭೆಯಲ್ಲಿ ಜಿಲ್ಲಾಧ್ಯಕ್ಷರು ಜನನಿ ದಿವಾಕರ್ ಶೆಟ್ಟಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಕಾನೂನು ಸಲಹೆಗಾರರು ಭವೀಶ್ ಕುಂದರ್ ಅಧ್ಯಕ್ಷರು ಉಮ್ಮ ರಬ್ಬ ಗೌರವಾಧ್ಯಕ್ಷರು ರವಿ ಪೂಜಾರಿ ಕಾರ್ಯ ಅಧ್ಯಕ್ಷರು ಶಶಿಕುಮಾರ್ ಬೈಪಾಸ್ ಮಾಲಾ ಅಧ್ಯಕ್ಷರು ಉಮೇಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತಿ ಇದ್ದು ದೀಪ ಬೆಳಗಿಸುವ ಮುಖಾಂತರ ವಾರ್ಷಿಕ ಮಹಾಸಭೆಯನ್ನು ಆರಂಭಿಸಲಾಯಿತು. ನಾಗೇಶ್ ಹೆಗಡೆಯವರು ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ನಿರೂಪಿಸಿದರು.