ಮಂಗಳೂರು: ದ.ಕ ಜಿಲ್ಲಾ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘ ಮಂಗಳೂರು, ಇದರ ಆಶ್ರಯದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಬುಧವಾರ ಸಂಘದ ಕಛೇರಿಯಲ್ಲಿ ಧಾರ್ಮಿಕ ವಿಧಿವಿಧಾನಗಳಿಂದ ಗಣಹೋಮ ಮತ್ತು ಸಂಘದ ಕಛೇರಿ ಆವರಣದಲ್ಲಿ ಆಯುಧ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಕಾನೂನು ಸಲಹೆಗಾರ ಹಾಗೂ ನ್ಯಾಯವಾದಿ ಮೋನಪ್ಪ ಭಂಡಾರಿ, ನ್ಯಾಯವಾದಿ ರಾಜು ದೇವಾಡಿಗ, ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಪ್ರಕಾಶ್ ನಾಯಕ್ ಹಾಗೂ ಬಿ ವಿಶ್ವನಾಥ್ ಶೆಟ್ಟಿ ಭಾಗವಹಿಸಿದರು.

ಸಂಘದ ಅಧ್ಯಕ್ಷ ತಿಲಕ್‍ ಪ್ರಶಾಂತ್ ಕುಮಾರ್, ಗೌರವಾಧ್ಯಕ್ಷ ಅರುಣಕಾಂತ, ಉಪಾಧ್ಯಕ್ಷ ಅವಿನಾಶ್ ಕುಮಾರ್, ಕಾರ್ಯದರ್ಶಿ ಸತ್ಯನಾರಾಯಣ ಕಾಮತ್, ಖಜಾಂಚಿ ಪುರುಷೋತ್ತಮ,  ಜೊತೆ ಕಾರ್ಯದರ್ಶಿ ಸತೀಶ ಹಾಗೂ ಸಂಘದ ಸದಸ್ಯರು, ನಿವೃತ್ತ ವಾಹನ ಚಾಲಕರು, ಅಜೀವ ಸದಸ್ಯರು, ಇಲಾಖೆ ಅಧಿಕಾರಿಗಳು ಮತ್ತು ನೌಕರರು ಉಪಸ್ಥಿತರಿದ್ದರು.