1. ಈ ಕಾಯ್ದೆ ಬರಲು ಮೂಲ ಕಾರಣ:-
ನಮ್ಮ ದೇಶದಲ್ಲಿ ನಗರೀಕರಣ ರೂಪುಗೊಂಡು, ಜನಸಂಖ್ಯೆ ಹೆಚ್ಚಾದಾಗ ಪಟ್ಟಣ ಪ್ರದೇಶಗಳಲ್ಲಿ ವಸತಿ ವ್ಯವಸ್ಥೆಯಲ್ಲಿ ಕೊರತೆ ಕಾಣಿಸಿಕೊಂಡಾಗ, ಬಹುಮಹಡಿ ವಸತಿಕಟ್ಟಡದ ವ್ಯವಸ್ಥೆ ಹಂತಹಂತವಾಗಿ ಬೆಳೆದು, ಹಲವು ನಗರಗಳಲ್ಲಿ ಬಹುಮಹಡಿ ವಸತಿಕಟ್ಟಡ ನಿರ್ಮಾಣಗೊಂಡಿತ್ತು. ಆದಾಗಿಯೂ ಈ ಕಟ್ಟಡದ ಮಾಲಕತ್ವದ ವಿಷಯದಲ್ಲಿ, ಜಾಗದಲ್ಲಿ ಇರುವ ಅವಿಭಾಜ್ಯ ಅಂಶದ ಹಕ್ಕಿನ ಮತ್ತು ಬಹುಮಹಡಿ ಕಟ್ಟಡದ ಉಸ್ತುವಾರಿಯ ವಿಷಯಗಳಲ್ಲಿ ಕೆಲವು ಜಿಜ್ಜಾಸೆಗಳು ಮತ್ತು ಲೋಪದೋಷಗಳು ಮಾತ್ರ ಹಾಗೆಯೇ ಉಳಿದುಕೊಂಡಿದ್ದವು. ಬಹುಮಹಡಿ ಕಟ್ಟಡದಲ್ಲಿ ಸ್ವತಂತ್ರವಾಗಿ ಒಂದು ವಸತಿ ಕಟ್ಟಡ [ ಪ್ಲಾಟ್] ಖರೀದಿಸಲು ಮತ್ತು ಅದಕ್ಕೆ ಪಡೆಯಬೇಕಿದ್ದ ಸಾಲದ ಸೌಲಭ್ಯಗಳಿಗೆ ಕೆಲವು ತಾಂತ್ರಿಕ ತೊಂದರೆಗಳಿದ್ದವು. ಬಹುಮಹಡಿ ಕಟ್ಟಡದ ಆಡಳಿತಕ್ಕೆ ರೂಪುಗೊಂಡ ಸಂಘಗಳನ್ನು ಯಾವ ಕಾಯ್ದೆ ಒಳಗೆ ನೋಂದಾವಣೆ ಮಾಡಬೇಕೆಂಬ ಕೆಲವು ಸಂಶಯಗಳು ಇದ್ದವು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಾರಿಗೆ ಬಂದಿರುವ ಕಾಯ್ದೆಯೇ ಕರ್ನಾಟಕ ಅಪಾರ್ಟ್‍ಮೆಂಟ್ ಓನರ್‍ಶಿಫ್ [ಒಡೆತನದ] ಕಾಯ್ದೆ 1972 ಇದು ದಿನಾಂಕ 02.12.1972 ರಂದ ಜಾರಿಗೆ ಬಂದಿತ್ತು.
2. ಈ ಕಾಯ್ದೆಯ ಮೂಲ ಉದ್ದೇಶ ಏನು?
1.ಈ ಕಾಯ್ದೆಯ ಪ್ರಕಾರ ವಾಸದ ಬಹುಮಹಡಿ ಕಟ್ಟಡ ಆಸ್ತಿತ್ವಕ್ಕೆ ಬಂದಕೂಡಲೇ ಕಟ್ಟಡದ ಮಾಲಿಕರು ಅಥವಾ ಕಟ್ಟಡ ನಿರ್ಮಾಣ ಮಾಡಿದವರು ಆರು ತಿಂಗಳ ಒಳಗೆ ಅಪಾರ್ಟ್‍ಮೆಂಟ್ ಖರೀದಿ ಮಾಡಿದ ಮಾಲಿಕರ ಸಭೆಯನ್ನು ಕರೆದು ತನ್ನ ಕೈಯಲ್ಲಿರುವ ಕಟ್ಟಡ ಆಡಳಿತವನ್ನು ಮತ್ತು ಅದಕ್ಕೆ ಸಂಬಂದಪಟ್ಟ ಸ್ಥಳದ ಎಲ್ಲಾ ದಾಖಲೆಗಳೊಂದಿಗೆ ಮತ್ತು ಲೆಕ್ಕ ಪರಿಶೋಧಕರು ಮಾಡಿದ ಲೆಕ್ಕ ಪ್ರತ್ರದೊಂದಿಗೆ, ಎಲ್ಲಾ ಅಪಾರ್ಟ್‍ಮೆಂಟ್ ಖರೀದಿದಾರರ ಸಭೆಯನ್ನು ಕರೆದು ಅದರಲ್ಲಿ ಕಟ್ಟಡ ಮಾಲಿಕರ ಸಂಘವನ್ನು ರಚಿಸಿ ಮೇಲ್ಕಾಣಿಸಿದ ದಾಖಲೆ ಪತ್ರಗಳನು, ಮತ್ತು ಕಟ್ಟಡದ ಸಂಪೂರ್ಣ ಸ್ವಾದೀನತೆಯನ್ನು ಅಪಾರ್ಟ್‍ಮೆಂಟ್ ಮಾಲಿಕರ ಸಂಘಕ್ಕೆ ಹಸ್ತಾಂತರಿಸತಕ್ಕದ್ದು. ಈ ರೀತಿ ರೂಪುಗೊಂಡ ಸಂಘವು ಸ್ಥಳ ಮತ್ತು ಕಟ್ಟಡದ ಸ್ವಾದೀನ ಸಿಕ್ಕಿದ ದಿನದಿಂದ, ಸ್ಥಳ ಮತ್ತು ಕಟ್ಟಡದ ದಿನನಿತ್ಯದ ಖರ್ಚು ವೆಚ್ಚ, ಸಿಂಬಂದಿ ನೇಮಕ, ಕಾನೂನಿನ ಚೌಕಟ್ಟಿನಲ್ಲಿ ಮಾಡಬೇಕಾದಂತಹ ಕೆಲಸಕಾರ್ಯಗಳನ್ನು ನಿರ್ವಹಿಸಿಕೊಂಡು ಬರತ್ತಕ್ಕದ್ದು, ಅಪಾರ್ಟ್‍ಮೆಂಟ್ ಮಾಲಿಕರ ಸಂಘವು ಎಲ್ಲಾ ಅಪಾರ್ಟ್‍ಮೆಂಟ್ ಮಾಲಿಕರನ್ನು ಪ್ರತಿನಿಧಿಸುವ ಒಂದು ಸಂಘವಾಗಿದ್ದು, ಅದು ಡೀಡ್ ಅಪ್ ಡಿಕ್ಲರೇಶನ್‍ನ ಮತ್ತು ಸಂಘದ ಬೈಲಾಸ್‍ಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿಕೊಂಡು ಬರಬೇಕು.
ಅಪಾರ್ಟ್‍ಮೆಂಟ್ ಮಾಲಿಕರ ಸಂಘದ ಚುನಾವಣೆಯನ್ನು ಬೈಲಾಸ್‍ಗಳಿಗೆ ಅನುಗುಣವಾಗಿ ಮಾಡಿಕೊಂಡು ಬಂದು, ಅಪಾರ್ಟ್‍ಮೆಂಟ್‍ನ ಬೈಲಾಸ್‍ಗೆ ಅನುಗುಣವಾಗಿ ಪ್ರತಿನಿಧಿಗಳನ್ನು ಆರಿಸಿ, ಪ್ರತಿನಿಧಿಮಂಡಳಿಯನ್ನು ಸ್ಥಾಪಿಸಿ, ಪ್ರತಿನಿಧಿಮಂಡಳಿಗಳ ಸದಸ್ಯರ ಸಭೆಯಲ್ಲಿ ಅಧ್ಯಕ್ಷರು, ಯಾ ಉಪದ್ಯಾಕ್ಷರು, ಕಾರ್ಯದರ್ಶಿ, ಯಾ ಉಪ ಕಾರ್ಯದರ್ಶಿ ಖಜಾಂಜಿ ಯಾ ಉಪ ಖಜಾಂಜಿಗಳನ್ನು ನೇಮಿಸಿ ಬೈಲಾಸ್‍ಗಳಿಗೆ ಅನುಗುಣವಾಗಿ ತಿರ್ಮಾಣವನ್ನು ತೆಗೆದುಕೊಂಡು ಆಡಳಿತೆಯನ್ನು ನಡೆಸಬೇಕು, ಈ ರೀತಿ ರೂಪುಗೊಂಡ ಆಡಳಿತ ಮಂಡಳಿಯೂ ಒಂದು ಅಧಿಕೃತ ಸಂಘವಾಗಿ ಮಾರ್ಪಟ್ಟು ತನ್ನ ಕಾಯ್ದೆ ಮತ್ತು ಬೈಲಾಸ್‍ನ್ನು ಜ್ಯಾರಿಗೊಳಿಸುವ ಹಾಗೂ ಕಾಯ್ದೆ ಮತ್ತು ಬೈಲಾಸ್ ಉಲ್ಲಂಘಣೆಯಾದ ಸಂದಂರ್ಭದಲ್ಲಿ, ಸಿವಿಲ್‍ನ್ಯಾಯಾಲಯದ ಮುಖಾಂತರ ದಾವೆಯನ್ನು ಹೂಡಿ ಜ್ಯಾರಿಗೊಳಿಸುವ ಹಕ್ಕನ್ನು ಹೊಂದಿರುತ್ತದೆ. ಅದೇ ರೀತಿ ಅಪಾರ್ಟ್‍ಮೆಂಟ್‍ನ ಒರ್ವ ಮಾಲಿಕನಾಗಿಯೂ ಸಂಘುವು ಅಥವಾ ಯಾವುದೇ ಅಪಾರ್ಟ್‍ಮೆಂಟ್ ಮಾಲಿಕನು ಸಂಘದ ಕಾಯ್ದೆ ಮತ್ತು ಬೈಲಾಸ್‍ನ್ನು ಉಲ್ಲಂಘಣೆ ಮಾಡಿದ ಸಮಯದಲ್ಲಿ ಆತನು ಕೂಡಾ ವ್ಯಯಕ್ತಿಕ ನೆಲೆಯಲ್ಲಿ ಸಿವಿಲ್ ನ್ಯಾಯಾಲಯದ ಮುಂಖಾತರ ವ್ಯಯಕ್ತಿಕ ದಾವೆ ಹೂಡಿ, ಸಂಘದ ವಿರುದ್ಧ ಅಥವಾ ಉಲ್ಲಂಘಣೆ ಮಾಡಿದ ವ್ಯಕ್ತಿಯ ವಿರುದ್ಧ, ತನಗಾದ ಅನ್ಯಾಯವನ್ನು ಸರಿಪಡಿಸುವ ಹಕ್ಕನ್ನು ಹೊಂದಿರುತ್ತಾನೆ. ಸದ್ರಿ ಸಂಘದ ಆಡಳಿತ ಅವಧಿಯು ಒಂದು ವರ್ಷವಾಗಿದ್ದು ಲೆಕ್ಕ ಪತ್ರವನ್ನು ವಾರ್ಷಿಕ ಮಹಾಸಭೆಯಲ್ಲಿ ಮಂಡಿಸತಕ್ಕದ್ದು. ಯಾವುದೇ ಸಮಂಜಸ ಕಾರಣದಿಂದ ವಾರ್ಷಿಕ ಚುನಾವಣೆಯು ಮುಂದುಹೊದಲ್ಲಿ ಅಥವಾ ಸಂಘದ ಸದಸ್ಯರ ಹುದ್ದೆ ಖಾಲಿಯಾದಲ್ಲಿ ಇರುವಂತಹ ಸದಸ್ಯರ ಪೈಕಿ ಆಡಳಿತ ಸದಸ್ಯರನ್ನು ಭರ್ತಿ ಮಾಡಿ ಮುಂದಿನ ಚುನಾವಣೆಯಾಗುವವರೆಗೆ ಆಧಿಕಾರವನ್ನು ನಡೆಸಲು ಅವಕಾಶವಿರುತ್ತದೆ.
3. ಈ ಕಾಯ್ದೆಯಲ್ಲಿ ಒಳಗೊಂಡಿರುವ ಮುಖ್ಯಾಂಶಗಳು:-
1. ಈ ಕಾಯ್ದೆಯ ಪ್ರಕಾರ ಸ್ಥಳದ ಮಾಲಿಕ ಅಥವಾ ಕಟ್ಟಡದ ಎಲ್ಲಾ ಮಾಲಿಕರು, ಸದ್ರಿ ಸ್ಥಳ ಮತ್ತು ಅಪಾರ್ಟ್‍ಮೆಂಟಿನ ವಿವರಣೆಗಳನ್ನು ಒಳಗೊಂಡ ಡೀಡ್ ಒಪ್ ಡಿಕ್ಲರೇಷನನ್ನು ತಯಾರುಮಾಡಿ,ಈಕಾಯ್ದೆಗೆಒಳಪಡಿಸಿಸಬ್‍ರಿಜಿಸ್ಟ್ರಾರ್‍ಕಚೇರಿಯಲ್ಲಿನೋಂದಾವಣೆಮಾಡುವಂತದ್ದು.
2. ಒಡೆತನದಲ್ಲಿರುವ ಅಪಾರ್ಟ್‍ಮೆಂಟ್ ಮತ್ತು ಅದಕ್ಕೆ ಲಗ್ತೀಕರಿಸಿರುವ ಅವಿಭ್ಯಾಜ್ಯ ಅಂಶದ ಹಕ್ಕುಗಳು ಮತ್ತು ಅದಕ್ಕೆ ಹೊಂದಿರುವ ಸವಲತ್ತುಗಳು ಎಲ್ಲಾ ಉದ್ದೇಶಗಳಿಗೆ ಅನುವಂಶಿಕವಾಗಿ ಮುಂದುವರಿದು ಮತ್ತು ಮಾರಾಟಮಾಡಲು ಯೋಗ್ಯವಾಗಿರುವುಗಳಾಗಿವೆ ಎಂಬ ಅಂಶವನ್ನು ತಿಳಿಸುವಂತದ್ದು.
3. ಅಪಾರ್ಟ್‍ಮೆಂಟ್‍ನ ಮಾಲಿಕನು ತನ್ನ ಅಪಾರ್ಟ್‍ಮೆಂಟನ್ನು ತನ್ನ ಸ್ವಂತ ಹಕ್ಕಿನಿಂದ, ಸ್ಥಳದಲ್ಲಿ ಬರುವ ಅವಿಭಾಜ್ಯ ಅಂಶದ ಹಕ್ಕನ್ನು ಇಟ್ಟುಕೊಂಡು ಅನುಭವಿಸಲು ಅರ್ಹನಾಗಿರುವನು ಎಂಬುದನ್ನು ದೃಢಪಡಿಸುವಂತ್ತದ್ದು.
4. ಯಾವುದೇ ಅಪಾರ್ಟ್‍ಮೆಂಟ್‍ನ ಮಾಲಿಕನು ಯಾವ ಕಾಲಕ್ಕೂ ಅವಿಭ್ಯಾಜ್ಯ ಅಂಶದ ಹಕ್ಕನ್ನು ಮತ್ತು ಸಾಮೂಹಿಕ ಸವಲತ್ತನ್ನು ಪ್ರತ್ಯೇಕ ಪ್ರತ್ಯೇಕವಾಗಿ ವಿಂಗಡಿಸಿ ಅನುಭವಿಸಲು ಅನರ್ಹತೆ ಇರುವ ಅಂಶವನ್ನು ಪ್ರತಿಪಾದಿಸುವಂತದ್ದು.
5. ಕರ್ನಾಟಕ ಅಪಾರ್ಟ್‍ಮೆಂಟ್ ಓನರ್‍ಶಿಫ್ [ಒಡೆತನದ] ಕಾಯ್ದೆ 1972ರ ಕಾಯ್ದೆಯ ಬೈಲಾಸ್‍ಗೆ [ಒಳಕಟ್ಟಳೆ] ಅನುಗುಣವಾಗಿ ಅಪಾರ್ಟ್‍ಮೆಂಟ್‍ನಲ್ಲಿ ವಾಸಮಾಡಿಕೊಂಡು ಬರುವ ಹಕ್ಕನ್ನು ಹೊಂದಿಕೊಂಡಿರುವಂತದ್ದು.
6. ಅಪಾರ್ಟ್‍ಮೆಂಟ್ ಮಾಲಿಕನು ಸಾಮಾನ್ಯ ಜಾಗದಲ್ಲಿ [ಕೋಮನ್ ಎರಿಯಾ] ಯಾವುದೇ ರೀತಿಯ ಕಾಮಗಾರಿಗಳನ್ನು ಮಾಡದೇ ಕಟ್ಟಡದ ಬಾಳಿಕೆಯನ್ನು ಸಂರಕ್ಷಿಸುವಂತದ್ದು, ಮತ್ತು ಇತರ ಅಪಾರ್ಟ್‍ಮೆಂಟ್ ವಾಸಿಗಳಿಗೆ ಶಬ್ಧಮಾಲಿನ್ಯವನ್ನು ಉಂಟು ಮಾಡದಂತಿರುವುದು.
7. ಅಪಾರ್ಟ್‍ಮೆಂಟ್ ಮಾಲಿಕನು ಯಾವುದೇ ಉದ್ಧೇಶಕ್ಕೆ ಬ್ಯಾಂಕಿನಿಂದ ಸಾಲವನ್ನು ಪಡೆಯುವ ಸಂದರ್ಭದಲ್ಲಿ ಅವನ ಅಪಾರ್ಟ್‍ಮೆಂಟ್ ಮತ್ತು ಸ್ಥಳದಲ್ಲಿರುವ ಅವಿಭ್ಯಾಜ್ಯ ಅಂಶದ ಹಕ್ಕಿನ ಎಷ್ಟರ ಮಟ್ಟಿಗೆ ಅಡಮಾನ ಮಾಡಬಹುದು ಎನ್ನುದರ ಬಗ್ಗೆ ವಿವರಣೆಕೊಡುವಂತದ್ದು.
8. ಅಪಾರ್ಟ್‍ಮೆಂಟ್ ಕಟ್ಟಡದ ಹೊರಭಾಗದ ನಿರ್ವಹಣ ವೆಚ್ಚವನ್ನು ಸಮುಷ್ಟೀ ಮಾಲಿಕರ ಪಾಲುಗಾರಿಕೆಯಲ್ಲಿ ನಿರ್ವಹಿಸುವ ಬಾಬ್ತು ಇರುವ ವಿವರಣೆ.
9. ಡೀಡ್ ಅಪ್ ಡಿಕ್ಲರೇಶನ್ ಯಾವ ರೀತಿಯಲ್ಲಿ ನೋಂದಾವಣೆ ಮಾಡಬೇಕು ಮತ್ತು ಯಾವ ಯಾವ ದಾಖಲೆಗಳನ್ನು ಅದಕ್ಕೆ ನೋಂದಾವಣೆಯ ಕಾಲದಲ್ಲಿ ಲಗ್ತಿಕರಿಸಬೇಕೆನ್ನುವ ವಿಷಯಗಳನ್ನು ಸೂಚಿಸುವಂತದ್ದು.
10. ಒಂದು ವೇಳೆ ಸದ್ರಿ ಕಟ್ಟಡ ಮತ್ತು ಜಾಗವನ್ನು ಕರ್ನಾಟಕ ಅಪಾರ್ಟ್‍ಮೆಂಟ್ ಒನರ್ ಶೀಪ್ ಕಾಯ್ದೆ-1972ರ ಕಾಯ್ದೆಯಿಂದ ಹೊರತರಲು ಪಾಲಿಸಬೇಕಾದ ವಿಧಿವಿಧಾನಗಳು ಮತ್ತು ಅದರ ರೂಪು ರೇಖೆಗಳನ್ನು ತಿಳಿಸುವಂತದ್ದು.
11. ಸದ್ರಿ ಕಾಯ್ದೆಯಿಂದ ಹೊರಬಂದ ನಂತರ ಸದ್ರಿ ಕಾಯ್ದೆಗೆ ಪುನಹ ಒಳಪಡಿಸಲು ಮಾಡಬೇಕಾದ ವಿಧಿವಿಧಾನಗಳು ಏನು ಎಂಬುದರ ಬಗ್ಗೆ ಉಲ್ಲೇಖನ.
12. ಮಾಲಿಕತ್ವದ ಅಪಾರ್ಟ್‍ಮೆಂಟ್‍ನ್ನು ಉಪಯೋಗ ಮಾಡದಿದ್ದರು ಕೂಡ ಮಾಲಿಕನಿಗೆ ಇರುವ ಹಕ್ಕು ಬಾಧ್ಯತೆಗಳು ಏನು ಎನ್ನುವ ವಿಚಾರವನ್ನು ನಮೂದಿಸುವಂತ್ತದ್ದು.
13. ಪ್ರತಿ ಅಪಾರ್ಟ್‍ಮೆಂಟ್‍ಗೆ ಮಾಸಿಕವಾಗಿ ತಗಲುವ ನಿರ್ವಹಣ ವೆಚ್ಚದ ಬಗ್ಗೆ ರೀತಿ ನಿಯಾಮಾವಳಿಗಳನ್ನು ರೂಪಿಸುವುದು ಮತ್ತು ವಸೂಲಿ ಮಾಡಲು ಇರುವಂತಹ ಆಂಶಗಳನ್ನು ತಿಳಿಯಪಡಿಸುವುದು.
14. ಅಪಾರ್ಟ್‍ಮೆಂಟ್‍ನ ಮಾಲಿಕ ತನ್ನ ಪಾಲಿನ ಮಾಸಿಕ ಅಥವಾ ಯಾವುದೇ ರೀತಿಯ ಖರ್ಚುವೆಚ್ಚಗಳನ್ನು ಮಾಲಿಕರ ಸಂಘಕ್ಕೆ ಕೊಡದಿದ್ದಾಗ ಮಾಲಿಕರ ಸಂಘವು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ರೂಪುರೇಖೆಗಳು ಮತ್ತು ಅದರ ವಿವರಣೆ.
15. ಒಂದು ವೇಳೆ ಅಪಾರ್ಟ್‍ಮೆಂಟ್ ಕಟ್ಟಡ ಯಾವುದೇ ಕಾರಣದಿಂದ ಹಾನಿಗೊಂಡಾಗ ಅಥವಾ ಬಿದ್ದುಹೋದ ಸಂದರ್ಭದಲ್ಲಿ ಅದರಿಂದ ಅಪಾರ್ಟ್‍ಮೆಂಟ್ ಮಾಲಿಕರಿಗೆ ಉಂಟಾಗುವ ಕಷ್ಟ ನಷ್ಟಗಳನ್ನು ಬರಿಸುವ ನಿಯಾಮಾವಳಿಗಳೇನು ಎನ್ನುವುದನ್ನು ತಿಳಿಸುವಂತದ್ದು.
16. ಸದ್ರಿ ಕಾಯ್ದೆ ಯಾವ ಕಟ್ಟಡಕ್ಕೆ ಮತ್ತು ಯಾರಿಗೆಲ್ಲ ಅನ್ವಯವಾಗುತ್ತೆ ಮತ್ತು ಹೇಗೆ ಜ್ಯಾರಿಗೊಳಿಸಬಹುದು ಎಂಬಿತ್ಯಾದಿ ವಿಷಯಗಳನ್ನು ಒಳಗೊಂಡಿರುತ್ತದೆ.
4.ಡೀಡ್ ಅಪ್ ಡಿಕ್ಲರೇಶನ್‍ನಲ್ಲಿ ಒಳಗೊಂಡಿರುವ ಅಂಶಗಳು:-
1.ಅಪಾಟ್‍ಮೆಂಟ್‍ಸ್ಥಳದ ಮತ್ತು ಕಟ್ಟಡದ ಮಾಹಿತಿ.
2.ಪ್ರತಿ ಅಪಾರ್ಟ್‍ಮೆಂಟ್‍ನ ಸಂಖ್ಯೆಗಳು, ಅದರ ಇರುವಿಕೆ ವಿಸ್ತೀರ್ಣ, ಒಟ್ಟು ಕೋಣೆಗಳು, ಕಾರು ಪಾರ್ಕಿನ ವಿವರಣೆಗಳು ಇತ್ಯಾದಿ.
3.ಅಪಾರ್ಟ್‍ಮೆಂಟ್‍ನ ಮಾಲಿಕರು ಸ್ಥಳದಲ್ಲಿ ಹೊಂದಿರುವ ಅವಿಭಾಜ್ಯ ಅಂಶದ ಹಕ್ಕಿನ ವಿವರಣೆ ಮತ್ತು ಅದಕ್ಕೆ ಹೊಂದಿರುವ ಸಾಮಾನ್ಯ ಸೌಲಭ್ಯಗಳ ವಿವರಣೆ, ನಿರ್ಬಂಧಿತ ಸಾಮಾನ್ಯ ಸ್ಥಳದ ವಿವರಣೆ ಮತ್ತು ಅದರ ಉಪಯೋಗಗಳ ಬಾಬ್ತು ವಿವರಣೆ.
4.ಅಪಾರ್ಟ್‍ಮೆಂಟ್‍ನ ಬಳಕೆಯ ಉದ್ದೇಶ, ಮತದಾನದ ಹಕ್ಕಿನ ಅಂಶ ಮತ್ತು ಸಂಘ ರಚನೆಯ ಅಂಶ.
5.ಕಟ್ಟಡ ಕಾರಣಾಂತರದಿಂದ ಅಸ್ಥಿತ್ವವನ್ನು ಕಳೆದುಕೊಂಡಾಗ ಅಪಾರ್ಟ್‍ಮೆಂಟ್ ಮಾಲಿಕನಿಗೆ ಇರುವ ಹಕ್ಕು ಬಾಧ್ಯತೆಗಳು.
6.ಡೀಡ್ ಅಪ್ ಡಿಕ್ಲರೇಶನನ್ನು ತಿದ್ದುಪಡಿಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ವಿಧಿವಿಧಾನಗಳು.
7.ಡೀಡ್ ಅಪ್ ಡಿಕ್ಲರೇಶನ್ ನೊಂದಾವಣೆಯಾಗುವ ಸಮಯದಲ್ಲಿ ಲಗ್ತಿಕರಿಸಬೇಕಾದ ದಾಖಲೆಗಳ ವಿವರ.
8.ಸಂಘದ ಚುನಾವಣೆ, ಆಡಳಿತ ಮಂಡಳಿಯ ನೇಮಕ, ಸದಸ್ಯರ ಆಡಳಿತ ಅವಧಿ, ಸಂಘದ ಅಧಿಕಾರ ಮತ್ತು ಕರ್ತವ್ಯಗಳ ಉಲ್ಲೇಖನ.
9.ಸಂಘದ ಮತ್ತು ಅಪಾರ್ಟ್‍ಮೆಂಟ್‍ನ ಮಾಲಿಕರ ಸಭೆಯನ್ನು ಕರೆಯವ ರೀತಿ ರೀವಾಜುಗಳು, ಕಟ್ಟಡದ ಉಸ್ತುವಾರಿ, ದುರಸ್ತಿ, ಸಾಮಾನ್ಯ ಸ್ಥಳಗಳನ್ನು ನಿಗಾ ಇಡುವಂತದ್ದು.
10.ಅಪಾರ್ಟ್‍ಮೆಂಟ್‍ನ ಮಾಲಿಕರಿಂದ ಮಾಸಿಕ ಖರ್ಚಿನ ಹಣವನ್ನು ವಸೂಲಿ ಮಾಡುವಂತ್ತದ್ದು,ಮತ್ತುವಸೂಲು ಮಾಡುವ ರೀತಿ ನಿಯಾಮಾವಳಿಗಳ್ಳನ್ನು ನೀರೂಪಿಸುವಂತದ್ದು ಮತ್ತು ಜ್ಯಾರಿಗೊಳಿಸುವಂತ್ತದ್ದು.
11.ಅಪಾರ್ಟ್‍ಮೆಂಟ್‍ನ ಕಚೇರಿಗೆ ಸಂಬಂದಿಸಿದ ಸಿಬ್ಬಂದಿಗಳನ್ನು ನೇಮಿಸುವುದು, ಮತ್ತು ಸಂಧರ್ಬಾನುಸಾರವಾಗಿ ಬದಲಾವಣೆಮಾಡುವುದು.
12.ಆಡಳಿತಾತ್ಮಕ ವಿಷಯಗಳಲ್ಲಿ ನೀತಿ ನಿಯಮಗಳನ್ನು ರೂಪಿಸುವುದು ಮತ್ತು ಸಂದರ್ಬಾನುಸಾರವಾಗಿ ಬದಲಾವಣೆ ಮಾಡುವುದು.
5. ಅಪಾರ್ಟ್ ಮೆಂಟ್ ಮಾಲಿಕರ ಸಂಘವನ್ನು ಕರ್ನಾಟಕ ಕೋ ಒಪರೇಟಿವ್ ಸೊಸೈಟಿಕಾಯ್ದೆ 1959ರಲ್ಲಿ ನೋಂದಾವಣೆ ಮಾಡುವ ಅವಶ್ಯಕತೆ ಇದೇಯೇ?
ಕರ್ನಾಟಕ ಅಪಾರ್ಟ್‍ಮೆಂಟ್ ಓನರ್‍ಶೀಪ್ ಕಾಯ್ದೆ-1972 ಒಂದು ಸ್ವತಂತ್ರ ಕಾಯ್ದೆಯಾಗಿದ್ದು ಸದ್ರಿ ಕಾಯ್ದೆಯು ಕರ್ನಾಟಕ ಕೋ ಒಪರೇಟಿವ್ ಸೊಸೈಟಿ ಕಾಯ್ದೆ 1959ರ ಕಾಯ್ದೆಗೆ ಒಳಪಡುವುದ್ದಿಲ್ಲ. ಸದ್ರಿ ಕಾಯ್ದೆಯಲ್ಲಿ ಅಪಾರ್ಟ್‍ಮೆಂಟ್ ಮಾಲಿಕರ ಸಂಘವನ್ನು ನೋಂದಾವಣಿ ಮಾಡಬೇಕ್ಕೆನ್ನುವ ಅಂಶವು ಎಲ್ಲಿಯೂ ಕಂಡುಬರುವುದಿಲ್ಲ. ಕರ್ನಾಟಕ ಅಪಾರ್ಟ್‍ಮೆಂಟ್ ಓನರ್‍ಶೀಪ್ ಕಾಯ್ದೆ-1972 ಸೆಕ್ಷ್‍ನ್ 2 [ಐ] ಯಲ್ಲಿ ಕೋಂಪಿಟೆಂಟ್ ಅಥೋರಿಟಿ [ ಯೋಗ್ಯ ಆಧಿಕಾರಿ] ಎನ್ನುವ ನಿರೂಪಣೆಯನ್ನು ರಿಜಿಸ್ಟ್ರರ್ ಒಪ್ ಕೋ ಓಪರೇಟಿವು ಸೊಸೈಟಿಯವರಿಗೆ ಕೊಟ್ಟಿದ್ದರೂ ಕೂಡ ಕರ್ನಾಟಕ ಅಪಾರ್ಟ್‍ಮೆಂಟ್ ಓನರ್‍ಶೀಪ್ ಕಾಯ್ದೆಯಲ್ಲಿ ಅವರ ಕಾರ್ಯವ್ಯಾಪ್ತಿ ಕಂಡುಬರುವುದಿಲ್ಲ. ಆದರೆ ಕರ್ನಾಟಕ ಅಪಾರ್ಟ್‍ಮೆಂಟ್ ಓನರ್‍ಶೀಪ್ ಕಾಯ್ದೆಯಲ್ಲಿ ನೊಂದಾವಣೆಯಾದ ಡೀಡ್ ಅಪ್ ಡಿಕ್ಲರೇಶನ್‍ನ ಮಂಜೂರು ನಕಲನ್ನು ಸದ್ರಿ ಕೋಂಪಿಟೆಂಟ್ ಅಥೋರಿಟಿಯವರ ಕಚೇರಿಗೆ ಸಲ್ಲಿಸಬೇಕೆನ್ನುವ ಒಂದು ನಿಯಮವನ್ನು ಕರ್ನಾಟಕ ಅಪಾರ್ಟ್‍ಮೆಂಟ್ ಓನರ್‍ಶೀಪ್ ಕಾಯ್ದೆ 1972 ಸೆಕ್ಷ್‍ನ್ 12 [2]ರಲ್ಲಿ ಕಂಡುಬರುತ್ತದೆ, ಆದರೆ ಸದ್ರಿ ದಾಖಲೆಗಳನ್ನು ರಿಜಿಸ್ಟ್ರರ್ ಒಪ್ ಕೋ ಓಪರೇಟಿವು ಸೊಸೈಟಿಯವರಿಗೆ ಸಲ್ಲಿಸದೇ ಇದ್ದಲ್ಲಿ ಅದಕ್ಕೆ ಏನು ಕ್ರಮಗಳನ್ನು ಅವರಿಂದ ಕೈಗೊಳ್ಳಬಹುದು ಎನ್ನುವ ವಿಷಯವು ಎಲ್ಲಿಯೂ ಕಂಡುಬರುವುದಿಲ್ಲ. ಅದ್ದರಿಂದ ಕರ್ನಾಟಕ ಅಪಾರ್ಟ್‍ಮೆಂಟ್ ಓನರ್‍ಶೀಪ್ ಕಾಯ್ದೆಯ1972 ಸೆಕ್ಷ್‍ನ್ 2ರ ಪ್ರಕಾರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾವಣೆ ಕಾಯ್ದೆ ಪ್ರಕಾರ
ನೋಂದಾವಣೆಯಾದ ಡೀಡ್ ಅಪ್ ಡಿಕ್ಲರೇಶನ್ ದಾಖಲೆಯೇ ಅಪಾರ್ಟ್‍ಮೆಂಟ್ ಮಾಲಿಕರ ಸಂಘದ ನೋಂದಾವಣೆ ದಾಖಲೆಯಾಗಿದ್ದು, ಇನ್ನಿತರ ಯಾವುದೇ ದಾಖಲೆಗಳ ಅವಶ್ಯಕತೆ ಇರುವುದಿಲ್ಲ. ಈ ಆಂಶವನ್ನು ಕರ್ನಾಟಕ ಉಚ್ಚ ನ್ಯಾಯಲಯವು ಕೂಡ ರಿಟ್ ಪಿಟಿಸನ್ ನಂಬ.34660/2017, 35719-35724/2017ರಲ್ಲಿ ವಿಡಿಬಿ ಸೆಲಡೊನ್ ಅಪಾರ್ಟ್ ಮೆಂಟ್ ಓನರ್ಸ್ ಎಸೋಸಿಯೆಶನ್ ದಾವೆಯಲ್ಲಿ ತೀರ್ಮಾಣಮಾಡಿ, ರಿಜಿಸ್ಟ್ರರ್ ಒಪ್ ಕೋ ಓಪರೇಟಿವು ಸೊಸೈಟಿಯವರಿಗೆ ಅಪಾರ್ಟ್‍ಮೆಂಟ್ ಮಾಲಿಕರ ಸಂಘವನ್ನು ನೋಂದಾವಣೆ ಮಾಡುವ ಅಧಿಕಾರವಿಲ್ಲವೆಂದು ಸ್ಪಷ್ಟಪಡಿಸಿದೆ. ಆದ್ದರಿಂದ ಅಪಾರ್ಟ್‍ಮೆಂಟ್‍ನ ಡೀಡ್ ಅಪ್ ಡಿಕ್ಲರೇಶನ್ 1908ರ ರಿಜಿಸ್ಟ್ರೇಸನ್ ಕಾಯ್ದೆ ಪ್ರಕಾರ ಉಪನೊಂದಾವಣೆಯ ಕಚೇರಿಯಲ್ಲಿ ನೊಂದಾವಣೆಯಾಗಿರುವ ದಾಖಲೆಯೇ ಅಪಾರ್ಟ್‍ಮೆಂಟ್ ಮಾಲಿಕರ ಸಂಘದ ನೋಂದಾವಣೆ ದೃಡೀಕರ ಪತ್ರವಾಗಿದ್ದು ಅದರ ಮುಂಖಾಂತರ ಸಂಘವು ಕಾನೂನಿನ ನೆಲೆಯಲ್ಲಿ ಅಧಿಕೃತ ಸಂಘವೆಂದು ಘೊಷಣೆಯಾಗುತ್ತದೆ. ಮತ್ತು ಯಾವುದೇ ನ್ಯಾಯಾಲಯಗಳಲ್ಲಿ ದಾವೆಯನ್ನು ಹೂಡುವ ಆಧಿಕಾರವನ್ನು ಹೊಂದಿರುತ್ತದೆ.
6.ಅಪಾರ್ಟ್‍ಮೆಂಟ್ ಮಾಲಿಕರಸಂಘದ ನೀತಿ ನಿಯಮಗಳ ಉದ್ದೇಶ:-
ಕರ್ನಾಟಕ ಅಪಾರ್ಟ್‍ಮೆಂಟ್ ಓನರ್‍ಶೀಪ್‍ಕಾಯ್ದೆ-1972ಕ್ಕೆ ಅನುಗುಣವಾಗಿ ಕರ್ನಾಟಕ ಅಪಾರ್ಟ್‍ಮೆಂಟ್ ಓನರ್‍ಶೀಪ್ ನಿಯಮ 1975 ಕೂಡ ಜ್ಯಾರಿಗೆ ಬಂದಿರುತ್ತದೆ. ಅಪಾರ್ಟ್‍ಮೆಂಟ್‍ನಲ್ಲಿ ವಾಸ ಮಾಡಿಕೊಂಡು ಬರುತ್ತಿರುವ ಮಾಲಿಕರಿಗೆ, ಒಕ್ಕಲುದಾರರಿಗೆ, ಕೆಲಸಗಾರರಿಗೆ ಮತ್ತು ಯಾವುದೇ ವ್ಯಕ್ತಿ ಅಪಾರ್ಟ್‍ಮೆಂಟ್‍ನ ಸವಲತ್ತನ್ನು ಪಡೆದುಕೊಂಡವನಿಗೆ ಕೂಡ ಈ ನಿಯಮ ಅನ್ವಯವಾಗುತ್ತದೆ. ಈ ನಿಯಮದ ಪ್ರಕಾರ ಅಪಾರ್ಟ್‍ಮೆಂಟ್‍ನ ಮಾಲಿಕರು ಕೊಡುವಂತಹ ನಿರ್ವಹಣ ವೆಚ್ಚದಲ್ಲಿ ಉಳಿದ ಹಣವನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಡಬಹುದು ಮತ್ತು ಬಹು ಸಂಖ್ಯಾತ ಅಪಾರ್ಟ್‍ಮೆಂಟ್‍ನ ಮಾಲಿಕರ ಅನುಮತಿಯೊಂದಿಗೆ ಸದ್ಬಳಕೆ ಮಾಡಿಕೊಳ್ಳಬಹುದು. ಸಂಘದ ಲೆಕ್ಕ ಪತ್ರ ಇಟ್ಟುಕೊಂಡು ಸದ್ರಿ ಹಣವನ್ನು ಸಂಘದ ಸಾಮಾಜಿಕ, ಶೈಕ್ಷಣಿಕ, ಉದ್ದೇಶಗಳಿಗೂ ಬಳಸಬಹುದು.
7.ಅಪಾರ್ಟ್‍ಮೆಂಟ್ ಮಾಲಿಕರ ಸಂಘದ ಸದಸ್ಯರಾಗಳು ಇರುವ ಅರ್ಹತೆಗಳೇನು? :-
1.ಅಪಾರ್ಟ್‍ಮೆಂಟ್‍ನ ಖರೀದಿದಾರರು ತಮ್ಮ ನೊಂದಾಯಿತ ಖರೀದಿ ಪತ್ರ[ಸೇಲ್‍ಡೀಡ್] ಅಥವಾ ಸಂಘದವರು ನೀಡಿದ ಹಂಚಿಕೆ ಪ್ರಮಾಣ ಪತ್ರ [ ಷೇೀರ್ ಸರ್ಟಿಪಿಕೇಟ್] ಆಧಾರದಲ್ಲಿ ಸದಸ್ಯರಾಗಬಹುದು. ಅಪಾರ್ಟ್‍ಮೆಂಟ್‍ನ ಮಾಲಿಕರು ಮರಣಹೊಂದಿದ ನಂತರ ಅತನ/ಆತಳ ವಾರೀಸುದಾರರು, ವಾರೀಸು ಪ್ರಮಾಣಪತ್ರ ನೀಡುವ ಮೂಲಕ ಅಪಾರ್ಟ್‍ಮೆಂಟ್ ಸಂಘದ ಸದಸ್ಯರಾಗಿ ಮುಂದುವರಿಯಬಹುದು. ಕ್ರಯಪತ್ರ [ ಸೇಲ್‍ಡೀಡ್] ಅಥವಾ ಹಂಚಿಕೆ ಪ್ರಮಾಣಪತ್ರ [ಷೇರ್ ಸರ್ಟಿಪಿಕೇಟ್]ಜೊತೆಹಕ್ಕಿನಲ್ಲಿಅಪಾರ್ಟ್‍ಮೆಂಟ್‍ನಲ್ಲಿ ಹಕ್ಕು ಬಂದಿದ್ದರೆ, ಒಂದನೇ ಹೆಸರಿನ ಖರೀದಿದಾರಗಿಗೆ [ಮಾಲಿಕನಿಗೆ] ಮತದಾನದ ಹಕ್ಕಿದ್ದು ಎರಡನೇ ಹೆಸರಿನ ಖರೀದಿದಾರಗಿಗೆ [ ಮಾಲಿಕನಿಗೆ] ಮತದಾನ ಮಾಡಲು ಹಕ್ಕುಇರುವುದಿಲ್ಲ. ಸಂಘದ ಮಾಸಿಕ ನಿರ್ವಹಣ ವೆಚ್ಚವನ್ನು ನಿರಂತರವಾಗಿ ಎರಡು ತಿಂಗಳು ಕಟ್ಟದಿದ್ದಲ್ಲಿ ಅಥವಾ ಇನ್ಯಾವುದೇ ವೆಚ್ಚವನ್ನು ಕಟ್ಟದಿದ್ದಲ್ಲಿ ಆ ವ್ಯಕ್ತಿಗೂ ಕೂಡ ಅಪಾರ್ಟ್‍ಮೆಂಟ್ ಸಂಘದ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕಿರುವುದಿಲ್ಲ.
8.ಅಪಾರ್ಟ್‍ಮೆಂಟ್‍ನ ಮಾಲಿಕರು ಮಾಸಿಕ ನಿರ್ವಹಣ ವೆಚ್ಚವನ್ನು ಬಾಕಿಮಾಡಿದಲ್ಲಿ ಅನುಸರಿಸಬೇಕಾದ ನಿಯಾಮಾವಳಿಗಳೇನು
1. ಅಪಾರ್ಟ್‍ಮೆಂಟ್ ಮಾಲಿಕರು ನಿರ್ವಹಣಾ ವೆಚ್ಚವನ್ನು ಬಾಕಿ ಮಾಡಿದಲ್ಲಿ ಅದು ಸಂಘಕ್ಕೆ ಮೊದಲನೇ ಋಣಭಾರವಾಗಿರುತ್ತದೆ. ಈ ಋಣಭಾರವನ್ನು ವಸೂಲಿಮಾಡಲು ಡೀಡ್ ಅಪ್ ಡಿಕ್ಲರೇಶನಲ್ಲಿ ಲಗ್ತಿಕರಿಸಿದ ಬೈಲಾಸ್‍ಗಳಿಗೆ ಮತ್ತು ಕರ್ನಾಟಕ ಅಪಾರ್ಟ್‍ಮೆಂಟ್ ಓನರ್‍ಶೀಪ್‍ಕಾಯ್ದೆ-1972ರ ಶರ್ತಗಳಿಗೆ ಅನುಗುಣವಾಗಿ ಅಪಾರ್ಟ್‍ಮೆಂಟ್ ಸಂಘದ ಆಡಳಿತ ಮಂಡಳಿಯು ಬಾಕಿದಾರ ಮಾಲಿಕನಿಗೆ ನೋಟೀಸು ಜ್ಯಾರಿ ಮಾಡಿ ಹಣ ಪಾವತಿಮಾಡಲು ದಿನ ನಿಗದಿಪಡಿಸಿ ಆನಂತರವೂ ಕೂಡಾ ಹಣ ಪಾವತಿ ಮಾಡದಿದ್ದಲ್ಲಿ, ಸದ್ರಿ ಮಾಲಿಕರ ಅಪಾರ್ಟ್‍ಮೆಂಟ್‍ಗೆ ಮೂಲಬೂತ ಸೌಕರ್ಯಗಳಾದ, ನೀರು, ವಿದ್ಯುತ್, ಮತ್ತಿತರ ಸವಲತ್ತುಗಳನ್ನು ನಿಲ್ಲಿಸಬಹುದು, ಅಥವಾ ಸಂಬಂದ ಪಟ್ಟ ನ್ಯಾಯಲದಲ್ಲಿ ವಸೂಲಿ ಪ್ರಕರಣವನ್ನು ದಾಖಲಿಸಬಹುದು.
ನಿರ್ವಹಣಾ ವೆಚ್ಚದ ವಸೂಲಾತಿ ಅಥವಾ ಸವಲತ್ತುಗಳನ್ನು ನಿಲ್ಲಿಸಬಹುದಾದ ವಿಧಾನಗಳು ಸಿವಿಲ್ ಸ್ವರೂಪದವುಗಳಾಗಿದ್ದು, ಇದ್ದು ಕ್ರಿಮಿನಲ್ ಪ್ರಕರಣವಾಗಿರುವುದಿಲ್ಲ, ಮತ್ತು ಇದರಲ್ಲಿ ಪೊಲೀಸರು ಹಸ್ತಕ್ಷೇಪ ಕೂಡಾ ಮಾಡುವಂತಿಲ್ಲ, ಈ ಪ್ರಕರಣವು ಸಂಘದ ಒಳಆಡಳಿತದ ನಿಯಾಮಾವಳಿಗೆ ಒಳಪಡುದರಿಂದ ಪೊಲೀಸರು ಇದರಲ್ಲಿ ಹಸ್ತಕ್ಷೇಪ ಮಾಡುವಂತ್ತಿಲ್ಲ ಮತ್ತು ಹಸ್ತಕ್ಷೇಪ ಕಂಡುಬಂದಲ್ಲಿ ಪ್ರಕರಣವನ್ನು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಹಾಕುವ ಮೂಲಕ ಪೊಲೀಸರ ಹಸ್ತಕ್ಷೇಪವನ್ನು ನಿಲ್ಲಿಸಬಹುದು. ವಿದ್ಯುತ್ ಮತ್ತು ನೀರು, ಅಪಾರ್ಟ್‍ಮೆಂಟ್ ಮಾಲಿಕರ ಮೂಲಬೂತ ಹಕ್ಕುಗಳು ಆಗ್ಗಿದ್ದರೂ ಕೂಡ ಸದ್ರಿ ಸವಲತ್ತುಗಳನ್ನು ಅದರ ನಿರ್ವಹಣ ವೆಚ್ಚವನ್ನು ಮಾಲಿಕರ ಸಂಘಕ್ಕೆ ಪಾವತಿಮಾಡದೇ ಪಡೆದುಕೊಳ್ಳುವ ಅರ್ಹತೆ ಮಾಲಿಕರಿಗೆ ಇರುವುದಿಲ್ಲ. ನಮ್ಮ ಸಂವಿಧಾನದ 21ನೇ ವಿಧಿಯು ಮಾನವನಿಗೆ ಬದುಕುವ ಮತ್ತು ವಯಕ್ತಿಕ ಸ್ವಾತಂತ್ರವನ್ನು ಕೊಟ್ಟಿದೆ, ಆದರೆ ಸದ್ರಿ ಸ್ವಾತಂತ್ರವನ್ನು ವಿನಾಕಾರಣ ಬಲತ್ಕಾರವಾಗಿ ಕಸಿದುಕೊಳ್ಳುವಂತಿಲ್ಲ. ನೀರು ಮತ್ತು ವಿದ್ಯುತ್ ಮೂಲಭೂತ ಸೌಕರ್ಯಗಳಾಗಿದ್ದರೂ ಕೂಡಾ ಅದಕ್ಕೆ ತಗಲುವ ನಿರ್ವಹಣಾ ವೆಚ್ಚವನ್ನು ಪಾವತಿಸಿ ಪಡೆದುಕೊಳ್ಳಬಹುದು ಹೊರತು ಪುಕ್ಕಟೆಯಾಗಿಯಲ್ಲ, ಅಪಾರ್ಟ್‍ಮೆಂಟ್ ಮಾಲಿಕನು ನೀರು ಮತ್ತು ವಿದ್ಯುತ್‍ನ ನಿರ್ವಹಣಾ ವೆಚ್ಚವನ್ನು ಪಾವತಿಮಾಡದಿದ್ದಲ್ಲಿ ಅಪಾರ್ಟ್‍ಮೆಂಟ್ ಸಂಘವು ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕಸಿದುಕೊಂಡು ಬಾಕಿಪಾವತಿಗೆ ಬೇಡಿಕೆ ಇಡಬಹುದು. ಅಂಥಹ ಕ್ರಮ ಮೂಲಭೂತ ಹಕ್ಕಿನ ಉಲ್ಲಂಘಣೆಯಾಗುವುದಿಲ್ಲ. ಸಂವಿಧಾನದ 21ನೇ ವಿಧಿಯನ್ನು ಒರ್ವ ವ್ಯಕ್ತಿ ಸರಕಾರದ ಸವಲತ್ತನ್ನು ಪಡೆದುಕೊಳ್ಳಳು ಚಲಾಯಿಸಬಹುದೇ ಹೊರತು ವಯಕ್ತಿಕ ವಿಷಯವನ್ನು ಸಂವಿಧಾನದ 21ನೇ ವಿಧಿಯ ಆಡಿಯಲ್ಲಿ ಚಲಾವಣೆ ಮಾಡಲು ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಸಂವಿಧಾನದ 226ನೇ ವಿಧಿಯು ಅಥವಾ ಸಾಮಾನ್ಯ ಕಾನೂನುಗಳು ಈ ವ್ಯಾಪ್ತಿಗೆ ಬರುತ್ತದೆ. ಮತ್ತು ಅದನ್ನು ಉಚ್ಚ ನ್ಯಾಯಾಲದ ಮುಖಾಂತರ ಪರಿಹರಿಸಗೊಳ್ಳತಕ್ಕದ್ದು. 2018 ಮದನ್‍ಲಾಲ್ ಮತ್ತು ಸ್ಟೆಟ್ ಒಪ್ ಹಿಮಾಚಲ್ ಪ್ರದೇಶ್ ಮತ್ತಿತರರು ಈ ಪ್ರಕರಣದಲ್ಲಿ ಹಿಮಾಚಲ್ ಪ್ರದೇಶ್ ಉಚ್ಚನ್ಯಾಯಾಲಯವು ನೀರು ಮತ್ತು ವಿದ್ಯುತ್ ಸೌಕರ್ಯಗಳು ಮೂಲಭೂತ ಹಕ್ಕಾಗಿದ್ದರೂ ಕೂಡ ಸರಕಾರಕ್ಕೆ ನಿಗದಿತ ಶುಲ್ಕವನ್ನು ಪಾವತಿಮಾಡಿ ಪಡೆದುಕೊಳ್ಳಬೇಕೆಂದುತೀರ್ಮಾಣಿಸಿತು.ಇಲ್ಲದಿದ್ದಲ್ಲಿ ವ್ಯಕ್ತಿಗೆ ಮೂಲಭೂತ ಸೌಕರ್ಯಪಡೆಯಲು ಅರ್ಹನಲ್ಲ ಎಂಬ ವಿಚಾರವನ್ನು ಉಲ್ಲೇಖಿಸಿತು. ಆದ್ದರಿಂದ ಅಪಾರ್ಟ್‍ಮೆಂಟ್ ಮಾಲಿಕರು ತಮ್ಮ ತಮ್ಮ ಮಾಸಿಕ ನಿರ್ವಹಣಾ ವೆಚ್ಚವನ್ನು ಅಪಾರ್ಟ್‍ಮೆಂಟ್ ಮಾಲಿಕರ ಸಂಘಕ್ಕೆ ಪಾವತಿ ಮಾಡಿದರೆ ಮಾತ್ರ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಬಹುದು.
2. ಒಟ್ಟಾರೆ ಕರ್ನಾಟಕ ಅಪಾರ್ಟ್‍ಮೆಂಟ್ ಓನರ್‍ಶೀಪ್ ಕಾಯ್ದೆ1972, ಒಂದು ಸ್ವತಂತ್ರ ಕಾಯ್ದೆಯಾಗಿದ್ದು, ಪ್ರತಿ ಅಪಾರ್ಟ್‍ಮೆಂಟ್ ಮಾಲಿಕರು ಈ ಕಾನೂನಿನ ನೆಲೆಯಲ್ಲಿ ತಮ್ಮ ತಮ್ಮ ಹಕ್ಕುಬಾಧ್ಯತೆಗಳನ್ನು ಅರಿತು ಜೀವನಮಾಡಿಕೊಂಡು ಬಂದಲ್ಲಿಸದ್ರಿ ಕಾಯ್ದೆಯಲ್ಲಿ ಕೆಲವೊಂದು ಸಣ್ಣ ಸಣ್ಣ ಲೋಪದೋಷಗಳು ಇದ್ದರೂ ಕೂಡ ಇದ್ದೊಂದೊ ಸಾರ್ಧಕವಾದ ಕಾಯ್ದೆಯಾಗುವಲ್ಲಿ ಎರಡು ಮಾತ್ತಿಲ್ಲ.
Article by
ಕೆ. ದಯಾನಂದ ರೈ.,ನ್ಯಾಯಾವಾದಿ,ಮಂಗಳೂರು.
9845023740.